Fall armyworm management :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಲದ್ದಿ ಹುಳುವಿನ ಬಾದೆಯನ್ನು ಹೇಗೆ ತಡೆಗಟ್ಟಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ!

ಲದ್ದಿ ಹುಳು ನಿರ್ವಹಣೆಗೆ ಸಲಹೆಗಳು!

ಹಾವೇರಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗೋವಿನಜೋಳ ಬೆಳೆಗೆ ಲದ್ದಿ ಹುಳುವಿನ ಬಾಧೆ ಕಂಡುಬಂದಿದ್ದು, ಸಮಗ್ರ ನಿರ್ವಹಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ.

ಹುಳುವಿನ ಮೊದಲ ಹಂತದ ಮರಿಗಳು ಎಲೆಯ ಭಾಗವನ್ನು ತಿನ್ನುತ್ತವೆ. ಇದರಿಂದ ಹಾನಿಗೊಳಗಾದ ಎಲೆಗಳ ಮೇಲೆ ಉದ್ದವಾದ ಪಾರದರ್ಶಕ ಮಚ್ಚೆಗಳು ಉಂಟಾಗುತ್ತವೆ. ಕೊನೆಯ ಹಂತದ ಮರಿಹುಳು ಮೆಕ್ಕೆಜೋಳದ ಸುಳಿಯಲ್ಲಿ ಅವಿತುಕೊಂಡು ಬೆಳೆಯುವ ಭಾಗವನ್ನು ತಿನ್ನುತ್ತದೆ. ಬಾಧೆಗೊಳಗಾದ ಎಲೆಗಳ ಮೇಲೆ ರಂದ್ರಗಳಾಗುತ್ತವೆ. ಸಸ್ಯದ ಕುಡಿಯಲ್ಲಿ ಮರಿಹುಳುವಿನ ಹಿಕ್ಕೆಯನ್ನು ಕಾಣಬಹುದು. ಹಾನಿಗೊಳಗಾದ ಸಸ್ಯಗಳ ಬೆಳವಣಿಗೆ ತೀವ್ರವಾಗಿ ಕುಂಠಿತಗೊಳ್ಳುತ್ತದೆ. ಹಗಲು ವೇಳೆ ಗರಿಗಳ ಬುಡದಲ್ಲಿ ಮತ್ತು ಮಣ್ಣಿನಲ್ಲಿ ಅಡಗಿಕೊಂಡು ರಾತ್ರಿ ವೇಳೆ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ ಹಾಗೂ ಎಲೆಗಳನ್ನು ಸಂಪೂರ್ಣವಾಗಿ ತಿಂದು ಬೋಳಾಗಿಸುತ್ತವೆ. ಇತ್ತೀಚೆಗೆ ಆಗಾಗ್ಗೆ ಬರುತ್ತಿರುವ ಮಳೆ ಮತ್ತು ತಂಪಾದ ವಾತಾವರಣವಿರುವುದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನು ಓದಿರಿ :-🌱40 ಲಕ್ಷ ರೈತರಿಗೆ 4100 ಕೋಟಿ ಬರ ಪರಿಹಾರ ಬಿಡುಗಡೆ ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆ, ಚೆಕ್ ಮಾಡಿಕೊಳ್ಳಿ ✨💚
https://krushivahini.com/2024/06/24/drought-relief-to-40-lakh-farmers

ನಿಯಂತ್ರಣಕ್ಕಾಗಿ ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 4ರಂತೆ ಅಳವಡಿಸಿ ಪ್ರೌಢ ಕೀಟದ ಚಟುವಟಿಕೆ ಗಮನಿಸಬೇಕು. ಕೀಟನಾಶಕ ಎಮಾಮೆಕ್ಟನ್ ಬೆಂಜೋಯೆಟ್ 5. ಎಸ್ ಜಿ (0.4 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ಕ್ಲೋರಾಂಟ್ರನಿಲಿಪ್ರೋಲ್ 18.5 ಎಸ್ ಸಿ (0.4 ಮಿ ಲೀಟ‌ರ್ ಪ್ರತಿ ಲೀ ನೀರಿಗೆ) ಸುಳಿಯ ಭಾಗಕ್ಕೆ ತಲುಪುವಂತೆ ಸಿಂಪಡಿಸಬೇಕು. ಲಭ್ಯವಿದ್ದಲ್ಲಿ ಮೊಟ್ಟೆಯ ಪರತಂತ್ರ ಕೀಟಗಳಾದ ಪ್ರಿಟಿಯೋಸಮ್ ಅನ್ನು ಪ್ರತಿ ಎಕರೆಗೆ 50,000 ಮೊಟ್ಟೆಗಳನ್ನು 15 ದಿನಗಳ ಅಂತರದಲ್ಲಿ 2 ಬಾರಿ ಬಿಡಬೇಕು.

ಬೆಳೆಯ ಮೇಲೆ ಮೊಟ್ಟೆಯ ಗುಂಪುಗಳು ಕಂಡುಬಂದಾಗ ಸಂಗ್ರಹಿಸಿ ಕೊಲ್ಲಬೇಕು. ಬೇವಿನ ಬೀಜದ ಕಷಾಯ (ಶೇ.3) ಅಥವಾ ಅಜಾಡಿರಕ್ಟಿನ್ 10,000 ಪಿ.ಪಿ.ಎಂ (2 ಮಿ.ಲೀ. ಪ್ರತಿ ಲೀಟ‌ರ್ ನೀರಿಗೆ) ಬೆರೆಸಿ ಸುಳಿಯ ಭಾಗಕ್ಕೆ ಸಿಂಪಡಿಸಬೇಕು ಹಾಗೂ ಜೈವಿಕ ಕೀಟನಾಶಕಗಳಾದ ಮೆಟಾರೈಜಿಯಂ ಪ್ರಿಲೇಯಿ (2 ಗ್ರಾಮ ಪ್ರತಿ ಲೀ ನೀರಿಗೆ) ಅಥವಾ ಬ್ಯಾಸಿಲಸ್ಥುರಿಂಜಿಯಸ್ಸಸ್ (2 ಮಿ.ಲೀ ಪ್ರತಿ ಲೀಟರ್ ನೀರಿಗೆ )ಗಳನ್ನು ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಮೇಲೆ ಕಾಣಿಸಿದ ಲೇಖನವನ್ನು ಸಂಪೂರ್ಣವಾಗಿ ಓದಿದ್ದೀರಿ ಎಂದು ತಿಳಿಯುತ್ತಾ ನಿಮ್ಮ ಸಂಬಂಧಿಕರಿಗೆ ಸ್ನೇಹಿತರಿಗೆ ಈ ಲೇಖನವನ್ನು ತಪ್ಪದೆ ಶೇರ್ ಮಾಡಿ 🙏🏻

ಇನ್ನೂ ಹೆಚ್ಚಿನ ಕೃಷಿ ಸಂಬಂಧಿತ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಕ್ಲಿಕ್ ಮಾಡಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *