Drought relief to 40 lakh farmers :- ನಮಸ್ಕಾರ ಆತ್ಮೀಯ ರೈತ ಬಾಂಧವರಿಗೆ ನಾವು ಇಂದಿನ ಲೇಖನದಲ್ಲಿ 40 ಲಕ್ಷ ರೈತರಿಗೆ ವಿಪತ್ತು ಪರಿಹಾರವಾಗಿ ₹ 4100 ಕೋಟಿ ಪರಿಹಾರ ನೀಡಲಾಗಿದೆ.
ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವ, ಒಬ್ಬರ ಜಮೀನಿನ ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ದಯವಿಟ್ಟು ಈ ಲೇಖನವನ್ನು ಕೊನೆಯವರೆಗೂ ತಪ್ಪದೆ ಓದಿರಿ..
ಈಗಾಗಲೇ 1.75 ಕೋಟಿ ಆಸ್ತಿಗಳಿಗೆ ಆಧಾರ್ ಲಿಂಗ್ ಮಾಡಲಾಗಿದೆ. ಇದರಿಂದಾಗಿ ಭೂಮಿಯ ಮಾಲೀಕರಿಗೆ ಹೆಚ್ಚಿನ ಸುರಕ್ಷೆ ದೊರೆಯಲಿದೆ.
ಕಳೆದ ಬಾರಿ ಬರಗಾಲದಿಂದ ತತ್ತರಿಸಿದ 40 ಲಕ್ಷ ರೈತರಿಗೆ ವಿಪತ್ತು ಪರಿಹಾರವಾಗಿ ₹ 4100 ಕೋಟಿ ಪರಿಹಾರ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ರೈತರ ಜೀವನೋಪಾಯಕ್ಕಾಗಿ ತಲಾ ₹ 3 ಸಾವಿರದಂತೆ 18 ಲಕ್ಷ ರೈತರಿಗೆ ₹ 500 ಕೋಟಿ ಪರಿಹಾರ ನೀಡಲಾಗಿದೆ ಎಂದರು.
–ಕೃಷ್ಣ ಬೈರೇಗೌಡ, ಕಂದಾಯ ಸಚಿವ
ನಿಮಗೆ ಎಷ್ಟು ಹಣ ಜಮಾ ಆಗಿದೆ ಇಲ್ಲಿ ಚೆಕ್ ಮಾಡಿಕೊಳ್ಳಿ 

ಮೊದಲಿಗೆ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service92/
ನಂತರ ಮುಂದೆ ಕಾಣುವ ಮುಖಪುಟದಲ್ಲಿ ವರ್ಷ,ಸೀಸನ್, ವಿಪತ್ತು ಆಯ್ಕೆ ಮಾಡಿ
Get data(ಹುಡುಕು) ಮೇಲೆ ಕ್ಲಿಕ್ ಮಾಡಿ
ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಫಾರ್ಮರ್ಸ್ ಐ ಡಿ ಅಥವಾ ನಿಮ್ಮ ಹೊಲದ ಸರ್ವೆ ನಂಬರ ಮೇಲೆ ಕ್ಲಿಕ್ ಮಾಡಿ
ತದನಂತರ ಹೊಸ ಮುಖಪುಟದಲ್ಲಿ ಕಾಣುವಹಾಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿದ ತಕ್ಷಣ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಹೊಂದುವ ಲೀಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಂಡು ನಿಮಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದು ಮಾಹಿತಿ ನಿಮಗೆ ಸಿಗುತ್ತದೆ
ನಿಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಸರ್ವೆ ನಂಬರ್, ಇಲ್ಲವಾದಲ್ಲಿ ನೀವು ಫಾರ್ಮರ್ಸ್ ಐಡಿಯನ್ನು ಬಳಸಿ ಕೂಡ ಹಣ ಎಷ್ಟು ಸಂದಾಯವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು..
ಈ ಮೇಲೆ ತಿಳಿಸಿದ ಎಲ್ಲಾ ಮಾಹಿತಿಗಳು ಸರಿಯಾಗಿದ್ದು ದಯವಿಟ್ಟು ತಪ್ಪದೇ ಈ ಲೇಖನವನ್ನು ನಿಮ್ಮ ಹತ್ತಿರದ ಸ್ನೇಹಿತರಿಗೆ ಶೇರ್ ಮಾಡಿ
ದಿನನಿತ್ಯದ ಕೃಷಿ ಆಧಾರಿತ ಹೆಚ್ಚಿನ ಅಧಿಕೃತ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ
ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ
https://chat.whatsapp.com/D6bfj7BBl7lLxTGZOcd2Mh