Addition of 7 talukas affected by drought :- ಬರಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ 7 ತಾಲೂಕುಗಳ ಸೇರ್ಪಡೆ: ಸರ್ಕಾರ ಆದೇಶ

ನಮಸ್ಕಾರ ಆತ್ಮೀಯ ರೈತ ಬಾಂಧವರೇ ನಿನ್ನೆ ತಾನೇ ನೀವು ನೋಡಿದ ಹಾಗೆ 324 ಕೋಟಿ ರಾಜ್ಯ ಸರ್ಕಾರದಿಂದ ಬರ ಪರಿಹಾರವನ್ನು ಜಿಲ್ಲಾ ವಾರು ಘೋಷಿಸಲಾಗಿದೆ. ನಿಮ್ಮ ಜಿಲ್ಲೆಗೆ ಎಷ್ಟು ಬರ ಪರಿಹಾರ ಬರುತ್ತದೆ ಹಾಗೂ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕು ಇರುವುದನ್ನು ಇಲ್ಲಿ ನೋಡಿರಿ. ದಯವಿಟ್ಟು ಲೇಖನವನ್ನು ಪೂರ್ತಿಯಾಗಿ ಓದಿ ತಪ್ಪದೇ ಶೇರ್ ಮಾಡಿ 🙏🏻…

ಬೀದರ್ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು, ವಿಜಯಪುರ ಜಿಲ್ಲೆಯ ತಿಕೋಟಾ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಕಂದಾಯ‌ ಇಲಾಖೆಯಿಂದ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ.

ಬರಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ 7 ತಾಲೂಕುಗಳ ಸೇರ್ಪಡೆ: ಸರ್ಕಾರ ಆದೇಶ

ಬೆಂಗಳೂರು, ನವೆಂಬರ್ 04: ಬರಪೀಡಿತ (drought) ತಾಲೂಕುಗಳ ಪಟ್ಟಿಗೆ ಮತ್ತೆ 7 ತಾಲೂಕುಗಳನ್ನು ಸೇರ್ಪಡೆ ಮಾಡುವ ಮೂಲಕ ಕಂದಾಯ‌ ಇಲಾಖೆಯಿಂದ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ. ಬೀದರ್ ಜಿಲ್ಲೆಯ ಔರಾದ್, ಬೀದರ್, ಚಿಟಗುಪ್ಪಾ, ಹುಮ್ನಾಬಾದ್, ಕಮಲನಗರ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು, ವಿಜಯಪುರ ಜಿಲ್ಲೆಯ ತಿಕೋಟಾ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..
https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಆದರೆ ಈಗ ಮತ್ತೆ ಏಳು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.

➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹಳ್ಳಿಯ ಬೆಳೆ ಹಾನಿ ಜಮೆ ಆಗಿರುವ ರೈತರ ಪಟ್ಟಿ ಕಾಣುತ್ತದೆ.

ಯಾವ ಜಿಲ್ಲೆಗೆ ಎಷ್ಟು ಅನುದಾನ?

ಬೆಂಗಳೂರು ನಗರ- 7.50 ಕೋಟಿ.

ಬೆಂಗಳೂರು ಗ್ರಾಮಾಂತರ- 6 ಕೋಟಿ.

ರಾಮನಗರ-7.50 ಕೋಟಿ.

ಕೋಲಾರ – 9 ಕೋಟಿ.

ಚಿಕ್ಕಬಳ್ಳಾಪುರ- 9 ಕೋಟಿ.

ತುಮಕೂರು-15 ಕೋಟಿ.

ಚಿತ್ರದುರ್ಗ- 9 ಕೋಟಿ.

ದಾವಣಗೆರೆ- 9 ಕೋಟಿ.

ಚಾಮರಾಜನಗರ-7.50 ಕೋಟಿ

ಮೈಸೂರು – 13.50 ಕೋಟಿ.

ಮಂಡ್ಯ- 10.50 ಕೋಟಿ.

ಬಳ್ಳಾರಿ- 7.50 ಕೋಟಿ.

ಕೊಪ್ಪಳ- 10.50 ಕೋಟಿ.

ರಾಯಚೂರು- 9 ಕೋಟಿ.

ಕಲಬುರ್ಗಿ- 16.50 ಕೋಟಿ.

ಬೀದರ್- 4.50 ಕೋಟಿ.

ಬೆಳಗಾವಿ- 22.50 ಕೋಟಿ.

ಬಾಗಲಕೋಟೆ- 13.50 ಕೋಟಿ.

ವಿಜಯಪುರ- 18 ಕೋಟಿ.

ಗದಗ-10.50 ಕೋಟಿ.

ಹಾವೇರಿ-12 ಕೋಟಿ.

ಧಾರವಾಡ-12 ಕೋಟಿ.

ಶಿವಮೊಗ್ಗ-10.50 ಕೋಟಿ.

ಹಾಸನ- 12 ಕೋಟಿ.

ಚಿಕ್ಕಮಗಳೂರು-12 ಕೋಟಿ.

ಕೊಡಗು-7.50 ಕೋಟಿ.

ದಕ್ಷಿಣ ಕನ್ನಡ- 3 ಕೋಟಿ.

ಉಡುಪಿ- 4.50 ಕೋಟಿ.

ಉತ್ತರ ಕನ್ನಡ-16.50 ಕೋಟಿ.

ಯಾದಗಿರಿ-9 ಕೋಟಿ.

ವಿಜಯನಗರ-9 ಕೋಟಿ.

ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ!👇🏻

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ👇🏻
https://fruitspmk.karnataka.gov.in/MISReport/GetDetailsByAadhaar.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳ ಅನ್ವಯ ಜಿಲ್ಲಾಧಿಕಾರಿಗಳಿಂದ ಬೆಳಹಾನಿ ಸಮೀಕ್ಷೆ ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೊಸದಾಗಿ 07 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಘೋಷಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರು ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳನ್ನು..

ಹಂತ-1:- ರಲ್ಲಿ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ.60ಕ್ಕಿಂತ ಹೆಚ್ಚು) ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ ಕಂಡು ಬಂದಿರಬೇಕು.

ಹಂತ-2:- ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ ತೇವಾಂಶ ಕೊರತೆ ಹಾಗೂ ನದಿಗಳಲ್ಲಿನ ಹರಿವು ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಆಧರಿಸಿ ಹೆಚ್ಚುವರಿಯಾಗಿ 07 ತಾಲ್ಲೂಕುಗಳು ಬರ ಪರಿಸ್ಥಿತಿ ಉದ್ಭವಿಸಿರುವ ತಾಲ್ಲೂಕುಗಳೆಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕು ಬರ ಪೀಡಿಯ ತಾಲೂಕಾಗಿ ಘೋಷಣೆ ಮಾಡಲಾಗಿದೆ. ತಿಕೋಟಾ ತಾಲೂಕು ಬಿಟ್ಟು ಜಿಲ್ಲೆಯ ಎಲ್ಲ ತಾಲೂಕುಗಳನ್ನ ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಲಾಗಿತ್ತು. ವಿಜಯಪುರ ಜಿಲ್ಲೆಯ 13 ತಾಲೂಕು ಪೈಕಿ 12 ತಾಲೂಕುಗಳನ್ನ ಬರ ಪೀಡಿತ ಅಂತ ಘೋಷಣೆ ಮಾಡಲಾಗಿತ್ತು. ಈಗ ಸರ್ಕಾರದಿಂದ ತಿಕೋಟ ತಾಲೂಕು ಅಂತಾ ಘೋಷಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಹೆಚ್ಚುವರಿಯಾಗಿ ಘೋಷಣೆಯಾದ ಪಟ್ಟಿಯಲ್ಲಿ ತಿಕೋಟವನ್ನು ಸರ್ಕಾರ ಪರಿಗಣಿಸಿದೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಮತ್ತೆ 7 ಬರಪೀಡಿತ ತಾಲೂಕು ಘೋಷಣೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮತ್ತೆ 7 ಬರಪೀಡಿತ ತಾಲೂಕು ಘೋಷಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

ಮಹತ್ವದ ಮಾಹಿತಿ:-

> ರೈತರು ಬರ ಪರಿಹಾರ ಪಡೆಯಲು ಇಲ್ಲಿದೆ ಮಹತ್ವದ ಮಾಹಿತಿ 👇🏻👇🏻

➡️ ರೈತರಿಗೆ ಎಷ್ಟು ಎಕರೆಗೆ ಎಷ್ಟು ಬರ ಪರಿಹಾರ ಬರುತ್ತದೆ?? ನಿಮಗೆ ಬರ ಪರಿಹಾರ ಬೇಕೆಂದರೆ ಈ ಕೆಲಸವನ್ನು ತಪ್ಪದೇ ಮಾಡಿರಿ ನಿಮಗೆ 👇🏻https://krushivahini.com/2023/11/08/this-work-is-mandatory-to-get-drought-relief/

➡️ ಮೋದಿ ಅವರಿಂದ ಹೊಸ ಗ್ಯಾರಂಟಿ ಯೋಜನೆ ಉಚಿತವಾಗಿ 5 ಕೆಜಿ ಅಕ್ಕಿ 5 ವರ್ಷ ತನಕ ಸಿಗುತ್ತದೆ https://krushivahini.com/2023/11/06/modi-statement-to-distribute-free-5-kg-rice

ಈ ಲಿಸ್ಟ್ ನಲ್ಲಿ ಇರುವ ತಾಲೂಕುಗಳಿಗೆ ಬರ ಪರಿಹಾರ ಹಣ ಬರುವುದಿಲ್ಲ ನಿಮ್ಮ ತಾಲೂಕು ಇದೆ ಚೆಕ್ ಮಾಡಿಕೊಳ್ಳಿ 👇🏻👇🏻🙏🏻

➡️ 324 ಕೋಟಿ ಬರ ಪರಿಹಾರ ಘೋಷಣೆ ಆದರೆ ಈ ತಾಲೂಕುಗಳಿಗೆ ಬರ ಪರಿಹಾರ ಹಣ ಬರುವುದು ಅನುಮಾನ👇🏻🙏🏻 https://krushivahini.com/2023/11/05/drought-relief-is-doubtful-for-these-taluks/

Leave a Reply

Your email address will not be published. Required fields are marked *