how to check msp price ಹಿಕೆ :- ಕೇಂದ್ರ ಸರ್ಕಾರದಿಂದ ರೈತರಿಗೆ ದೀಪಾವಳಿ ಗಿಫ್ಟ್‌, 6 ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ!

6 Rabi crops MSP hike: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ. ಪ್ರಮುಖ ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲಿ, ಕಡಲೆಕಾಳು, ಸೂರ್ಯಕಾಂತಿ ಸೇರಿ ಒಟ್ಟು 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಬೆಂಬಲ ಬೆಲಯಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 300 ರೂಪಾಯಿ ಹಾಗೂ ಕನಿಷ್ಠ 130 ರೂಪಾಯಿ ಏರಿಕೆ ಮಾಡಲಾಗಿದೆ.

ಇದನ್ನು ಓದಿರಿ :- 💚 ನಿಮ್ಮ ಖಾತೆಗೆ ಬಂದಿರುವ ಬೆಳೆ ವಿಮೆ ಹಣ ಹೇಗೆ ಚೆಕ್ ಮಾಡುವುದು ಹೇಗೆ ತಪ್ಪದೆ ನೋಡಿ 👇🏻 https://krushivahini.com/2024/10/18/how-to-check-bele-vima-amount/

ಪ್ರಮುಖ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ :-

ಗೋಧಿ, ಬಾರ್ಲಿ, ಕಡಲೆಕಾಳು, ಸೂರ್ಯಕಾಂತಿ ಎಂಎಸ್‌ಪಿ ಹೆಚ್ಚಳ

ಒಟ್ಟು 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ

ಎಂಎಸ್‌ಪಿಯಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 300 ರೂ., ಕನಿಷ್ಠ

ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ.

ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನ ರೈತರಿಗೆ ಬಂಪರ್‌ ಉಡುಗೊರೆ ನೀಡಿದೆ. 6 ರಾಬಿ ಅಂದರೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲ್‌ಗೆ 130 ರೂ.ನಿಂದ 300 ರೂ.ವರೆಗೆ ಏರಿಕೆ ಮಾಡಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಎಸ್‌ಪಿ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಈ ಮಾಹಿತಿ ನೀಡಿದ್ದಾರೆ.

ಗೋಧಿ ಬೆಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 150 ರೂ. ಹೆಚ್ಚಿಸಲಾಗಿದೆ. ಈ ಮೂಲಕ ಎಂಎಸ್‌ಪಿಯನ್ನು 2,275 ರೂ.ನಿಂದ 2,425 ರೂ.ಗೆ ಏರಿಕೆ ಮಾಡಲಾಗಿದೆ. ಸಾಸಿವೆ ಬೆಂಬಲ ಬೆಲೆಯನ್ನು 300 ರೂ. ಏರಿಕೆ ಮಾಡಿ ಕ್ವಿಂಟಾಲ್‌ಗೆ 5,950 ರೂ.ಗೆ ಹೆಚ್ಚಿಸಲಾಗಿದೆ. ಕಡಲೆಕಾಳಿನ ಎಂಎಸ್‌ಪಿಯನ್ನು 210 ರೂ. ಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 5,650 ರೂ.ಗೆ ಮುಟ್ಟಿದೆ.

ಕ್ವಿಂಟಾಲ್‌ಗೆ ಕನಿಷ್ಠ ಬೆಂಬಲ ಬೆಲೆಯ ವಿವರ ಹೀಗಿದೆ,

ಬೆಳೆ 2025-26ರಲ್ಲಿ ಬೆಳೆಯ ಅಂದಾಜು ಖರ್ಚು 2024-25ರ ರಾಬಿ ಬೆಳೆಯ ಎಂಎಸ್‌ಪಿ 2025-26ರ ರಾಬಿ ಬೆಳೆಯ ಎಂಎಸ್‌ಪಿ ಕ್ವಿಂಟಾಲ್‌ಗೆ ಎಂಎಸ್‌ಪಿ ಏರಿಕೆ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಎಂಎಸ್‌ಪಿ ಪ್ರಮಾಣ

1) ಗೋಧಿ 1,182 ರೂ. 2,275 ರೂ. 2,425 ರೂ. 150 ರೂ. 105%

2) ಬಾರ್ಲಿ 1,239 ರೂ. 1,850 ರೂ. 1,980 ರೂ. 130 ರೂ. 60%

3) ಕಡಲೆ 3,527 ರೂ. 5,440 ರೂ. 5,650 ರೂ. 210 ರೂ. 60%

4) ಬೇಳೆ (ಮಸೂರ್‌) 3,537 ರೂ. 6,425 ರೂ. 6,700 ರೂ. 275 ರೂ. 89%

5) ಸಾಸಿವೆ 3,011 ರೂ. 5,650 ರೂ. 5,950 ರೂ. 300 ರೂ. 98%

6) ಸೂರ್ಯಕಾಂತಿ 3,960 ರೂ. 5,800 ರೂ. 5,940 ರೂ. 140 ರೂ. 50%

ರೈತರಿಗೆ ಹಣಕಾಸಿನ ಬೆಂಬಲ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಹಿಂಗಾರು ಬೆಳೆಗಳ ಅವಧಿಯಲ್ಲಿ ಕೃಷಿಕರ ಆದಾಯ ಹೆಚ್ಚಿಸಲು ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಬಿತ್ತನೆ ಹಂಗಾಮು ಮುಗಿಯುವ ಮೊದಲು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡುತ್ತದೆ. ಮುಂಗಾರಿನಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, 7 ಹಿಂಗಾರು ಬೆಳೆಗಳಿಗೆ ಎಂಎಸ್‌ಪಿಯ ನೀಡಲಾಗುತ್ತದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *