Bele samikshe status check :- ನಮಸ್ಕಾರ ಆತ್ಮೀಯ, ರೈತ ಬಾಂಧವರೇ ಇಂದಿನ ದಿನ ನಾವು ನಿಮಗೆ ಬರ ಪರಿಹಾರ ಬೇಕಿದ್ದಲ್ಲಿ. ತಪ್ಪದೆ ನಿಮ್ಮ ಬೆಳೆ ಸಮೀಕ್ಷೆಯ ವರದಿ ಸ್ಟೇಟಸ್ ಹೀಗೆ ಇದ್ದರೆ ಮಾತ್ರ ನಿಮ್ಮ ಸಮಿಕ್ಷೆ ಸರಿಯಾಗಿದೆ ಎಂದು ಅರ್ಥ.
ನಿಮ್ಮ ಸ್ಟೇಟಸ್ ಹೀಗೆ ಇದ್ದರೆ ಮಾತ್ರ ನಿಮಗೆ ಹಣ ಬರುತ್ತದೆ. ತಪ್ಪದೆ ಇದನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ನಿಮ್ಮ ಖಾತೆಗೆ ಹಣ ಬರುತ್ತದೆ. ತಪ್ಪದೆ ಲೇಖನವನ್ನು ಸಂಪೂರ್ಣವಾಗಿ ಓದಿ. ಎಲ್ಲರಿಗೂ ಲೇಖನವನ್ನು ಶೇರ್ ಮಾಡಿರಿ..🙏🏻🙏🏻
ಕೇಂದ್ರದಿಂದ ಬರ ಪರಿಕ್ಷಣೆ ಮಾಡಲು ಅಂದರೆ ಕೇಂದ್ರದಿಂದ ಬರ ಪರಿಶೀಲನೆ ಮಾಡಲು ರಾಜ್ಯಕ್ಕೆ ಸುಮಾರು 30 ಜನರನ್ನು ಕಳಿಸಿಕೊಟ್ಟಿದೆ, ಇದರಲ್ಲಿ ಮತ್ತೆ ನಮ್ಮ ಮುಖ್ಯಮಂತ್ರಿಗಳು ಅವರೊಂದಿಗೆ ಸಭೆ ನಡೆಸಿ ಮತ್ತು ಬೇರೆ ಬೇರೆ ಜನರಿಗೆ ಬೇರೆ ಬೇರೆ ಪ್ರದೇಶಗಳಲ್ಲಿ ಬರ ಸಮೀಕ್ಷೆ ಮಾಡಲು ಕಳುಹಿಸಿದ್ದಾರೆ.
ಎಲ್ಲಾ ತಾಲೂಕುಗಳು ಬರ ಘೋಷಣೆಯಲ್ಲಿ ಬರುತ್ತವೆ ಎಂಬುದನ್ನು ಹೇಳಲಾಗದು ಏಕೆಂದರೆ ಕೇಂದ್ರದ ಮಾನದಂಡಗಳು ಬೇರೆ ಬೇರೆ ಆಗಿರುತ್ತದೆ ಮತ್ತು ರಾಜ್ಯ ಸರ್ಕಾರದ ಮಾನದಂಡಗಳು ಬೇರೆ ಬೇರೆ ಆಗಿರುತ್ತವೆ. ಇದಾದ ನಂತರ ಉಳಿದ ಜಿಲ್ಲೆಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ ಆದರೆ ಇನ್ನೂ ಪ್ರತ್ಯೇಕವಾದ ಯಾವ ತಾಲೂಕುಗಳು ಬರ ಪಟ್ಟಿಯಲ್ಲಿ ಬರಬಹುದು ಎಂದು ತಿಳಿಸಿಲ್ಲ ಆದರೆ ಇನ್ನೆರಡು ಮೂರು ದಿನಗಳಲ್ಲಿ ಅದರ ಮಾಹಿತಿಯು ಲಭ್ಯವಾಗುತ್ತದೆ ಅದನ್ನು ನಾವು ನಿಮ್ಮೊಂದಿಗೆ ಮತ್ತೊಮ್ಮೆ ತರಿಸಲು ಪ್ರಯತ್ನಿಸುತ್ತೇವೆ.
ಬರಗಾಲದ ಪರಿಹಾರ ಬರಬೇಕಾದರೆ ರೈತರು ಮಾಡಬೇಕಾದ ಕಾರ್ಯಗಳು ಏನು?
ಬೆಳೆ ಸಮೀಕ್ಷೆ ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಮಾಡಬೇಕು ಬೆಳೆ ಪರಿಹಾರದ ಕೇಂದ್ರ ತಂಡವು ಬೆಳೆ ಸಮೀಕ್ಷೆಗೆ ಬರುತ್ತಿರುವ ಕಾರಣ ಅಂದರೆ ನೀವು ಸ್ವತಂತ್ರವಾಗಿ ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡುವ ಅವಕಾಶ ಈಗಾಗಲೇ ಕಳೆದ ಎರಡು ವರ್ಷಗಳಿಂದ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಂದು ಬೆಳೆ ದಾಖಲೆಗಳನ್ನು ಸರಿಯಾಗಿ ನಮೂದಿಸಿ ಒಂದು ವೇಳೆ ನಿಮ್ಮಲ್ಲಿ ಪ್ರಸ್ತುತ ಇರುವ ಬೆಳೆಯು ಮತ್ತು ಬೆಳೆ ಸಮೀಕ್ಷೆಯಲ್ಲಿ ಬರೆದಿರುವ ಬೆಳೆಯು ವಿಸ್ತೀರ್ಣ ಆಗಲಿ ಅಥವಾ ಬೆಳೆಯನ್ನೇ ಬದಲಾವಣೆಯಾಗಿಕೊಂಡರೆ ಖಂಡಿತವಾಗಿಯೂ ಈ ಬರಗಾಲದ ಪರಿಹಾರ ಆಗಿರಬಹುದು ಮತ್ತು ಬೆಳೆ ವಿಮೆ ಆಗಿರಬಹುದು 2 ಸೌಲಭ್ಯಗಳಿಂದ ನೀವು ವಂಚಿತರಾಗಬಹುದು ಅಂದರೆ ನಿಮಗೆ ಆ ಪರಿಹಾರ ಹಣವು ಬರುವುದಿಲ್ಲ ಹೀಗಾಗಿ ಈ ಬಾರಿ ಬೆಳೆ ಸಮೀಕ್ಷೆ ಅತ್ಯಂತ ಕಟ್ಟುನಿಟ್ಟಿನಿಂದಾಗಿ ಮಾಡಬೇಕು ಇದರಿಂದಾಗಿ ನಿಮಗೆ ಲಾಭವಿದೆ..
ಬೆಳೆ ಸಮೀಕ್ಷೆ ಪ್ರಯೋಜನಗಳ ವಿವರ:
1. ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ದಾಖಲಿಸಬಹುದಾಗಿದೆ.
2. ಸದರಿ ಬೆಳ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು RTC ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.
ಬೆಳೆ ಸಮೀಕ್ಷೆ ಮಾಡುವ ವಿಧಾನ:
ರೈತರ ಪೂರ್ವ ಮುಂಗಾರು ಬೆಳೆ ಸಮೀಕ್ಷೆ 2023-24 ಆ್ಯಪ್ ಅಂದರೆ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಪ್ಲೇ ಸ್ಟೋರ್ ನಲ್ಲಿ ಮೊದಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.csk.farmer23_24.cropsurvey
ಡೌನ್ಲೋಡ್ ಮಾಡಿಕೊಂಡ ನಂತರ ಅಲ್ಲಿ ತೋರಿಸುವ ಮುಖಪುಟದಲ್ಲಿ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ ನೊಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು..
ನಿಮ್ಮ ಬೆಳೆ ಸಮೀಕ್ಷೆಯ ಸ್ಟೇಟಸ್ ಹೀಗೆ ಚೆಕ್ ಮಾಡಿರಿ :-
ಹಂತ 1) ಮೊದಲಿಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.crop.offcskharif_2021
➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..
https://landrecords.karnataka.gov.in/PariharaPayment/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.
➡️ ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ??
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..
ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹಳ್ಳಿಯ ಬೆಳೆ ಹಾನಿ ಜಮೆ ಆಗಿರುವ ರೈತರ ಪಟ್ಟಿ ಕಾಣುತ್ತದೆ.
> ಇಲ್ಲಿಯವರೆಗೂ ನಿಮಗೆ ಎಷ್ಟು ಬೆಳೆವಿಮೆ ಹಣ ಜಮೆಯಾಗಿದೆ ಚೆಕ್ ಮಾಡಿಕೊಳ್ಳಿ 👇🏻
ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://samrakshane.karnataka.gov.in/Premium/CheckStatusMain_aadhaar.aspx
ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻
https://samrakshane.karnataka.gov.in/HomePages/frmKnowYourInsCompany.aspx
ಹೊಸ ಓಪನ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಗ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂಬುದರ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/D6bfj7BBl7lLxTGZOcd2Mh
ಬೆಳೆ ಸಮೀಕ್ಷೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಸಮೀಕ್ಷೆ ಸ್ಟೇಟಸ್ ಚೆಕ್ ಮಾಡುವ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
👉🏻 ಎಫ್ ಐ ಡಿ ಹೇಗೆ ನೋಡಬೇಕು?👇🏻
👉🏻 ಮೊಬೈಲ್ ನಲ್ಲೆ ಎಫ್ ಐ ಡಿ ಮಾಡಿಕೊಳ್ಳುವುದು ಹೇಗೆ??👇🏻
https://krushivahini.com/2024/05/30/check-fid-linked-survey-number-status-in-mobile/