Drought relief of 2000 announced to each farmer :- 223 ತಾಲೂಕುಗಳ ರೈತರಿಗೆ ತಲಾ 2 ಸಾವಿರ ರೂ.ಬರ ಪರಿಹಾರ- ಸಿಎಂ
ಬೆಂಗಳೂರು: ಬರ ಘೋಷಿತ 223 ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ 2 ಸಾವಿರ ರೂ.ವರೆಗೆ ಬೆಳೆ ನಷ್ಟ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ರಾಜ್ಯದ 236 ತಾಲೂಕುಗಳ ಪೈಕಿ ಎನ್ಡಿಆರ್ಎಫ್ ಮಾರ್ಗಸೂಚಿಯ ಪ್ರಕಾರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. 48.19 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಷ್ಟ ಆಗಿದೆ. 18,171.44 ಕೋಟಿ ರೂ. ಆರ್ಥಿಕ ನೆರವಿಗಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರದ ಪರಿಹಾರಕ್ಕೆ ಕಾಯದೆ ಮುಂಗಡವಾಗಿ ನಾವೇ ಪರಿಹಾರ ಮೊತ್ತ ಬಿಡುಗಡೆ ಮಾಡುತ್ತಿದ್ದೇವೆ ಎಂದು ಗುರುವಾರ ಗೃಹಕಚೇರಿ “ಕೃಷ್ಣಾ”ದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
* ಯಾವಾಗ ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ಹಣ ಬರುತ್ತದೆ??
ಅರ್ಹ ರೈತರಿಗೆ ಎರಡು ಸಾವಿರ ರು.ವರೆಗೆ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧಾರ
ಬರ: ಮೊದಲ ಕಂತಿನ ಬೆಳೆಹಾನಿ ಪರಿಹಾರ
ಬೆಂಗಳೂರು: ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರದ ನೆರವಿಗಾಗಿ ಕಾಯುತ್ತಿದ್ದ ರಾಜ್ಯ ಸರಕಾರ, ಈವರೆಗೆ ನೆರವು ಬಾರದೇ ಇರುವುದರಿಂದ ರಾಜ್ಯದ ವತಿಯಿಂದಲೇ 2,000 ರು. ವರೆಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಿದೆ.
• ಯಾವ ತಾಲೂಕಿಗೆ ಎಷ್ಟು ಬರ ಪರಿಹಾರ ಬರುತ್ತದೆ??
ಮುಂದಿನ ನಾಲೈದು ದಿನದಲ್ಲಿ ಅರ್ಹ ರೈತರಿಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ!
223 ತಾಲೂಕು ಗಳಲ್ಲಿನ ಅರ್ಹ ರೈತರ ಬಗ್ಗೆ ಮಾಹಿತಿ ಪಡೆದು ಪರಿಹಾರ ವಿತರಣೆ ಶುರು
• ರಾಜ್ಯದಲ್ಲಿ ಭೀಕರ ಬರವಿದ್ದರೂ, ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ರೈತರು ಹಾಗೂ ಜನರನ್ನು ಉಳಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ. ಆದ್ದರಿಂದ ಕೇಂದ್ರದಿಂದ ಹಣ ಬರುವ ತನಕ ಕಾಯದೆ, ರಾಜ್ಯ ಸರಕಾರ ಮೊದಲ ಕಂತು ಬಿಡುಗಡೆ ಮಾಡಿದೆ.
ತುರ್ತು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರಕಾರಕ್ಕೆ ನಾನು ಸೇರಿದಂತೆ ಸಂಪುಟ ಸಚಿವರು ಹಲವು ಬಾರಿ ಪತ್ರ ಬರೆದು, ಎನ್ಡಿಆರ್.ಎಫ್ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕೇಂದ್ರ ಸರಕಾರ ಈವರೆಗೆ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರದ ಕಡೆಯಿಂದಲೇ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2000 ರು. ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ರೈತರಿಗೆ ಸಮಸ್ಯೆ ಆಗಬಾರದು ಎಂದು ನಾವೇ ಮೊದಲ ಕಂತಿನಲ್ಲಿ ತಲಾ 2 ಸಾವಿರ ರೂ.ವರೆಗೆ ಮುಂಗಡ ಪರಿಹಾರ ನೀಡಲು ನಿರ್ಧರಿಸಿದ್ದೇವೆ, ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಬೀಳ ಲಿದೆ. ಸದ್ಯಕ್ಕೆ ಜಮೀನಿನ ಅಳತೆ ಆಧಾರದ ಮೇಲೆ ನಷ್ಟವಾಗಿರುವ ಬೆಳೆಯ ಪ್ರಮಾಣ ಆಧರಿಸಿ ಪರಿಹಾರ ಕೊಡಲಾಗುತ್ತದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡಿರುವ ರೈತರ ಸಹಿತ ಜಿಲ್ಲಾಧಿ ಕಾರಿಗಳಿಂದ ವರದಿ ಪಡೆದು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. ಕೇಂದ್ರ ಸರಕಾರ ಕೊಡುವ ಪರಿಹಾರ ಕಡಿಮೆಯಾದರೆ ಅಂತಿಮ ಕಂತಿನಲ್ಲಿ ರಾಜ್ಯ ಸರಕಾರವೇ ವ್ಯತ್ಯಾಸ ಸರಿಪಡಿಸಲು ಕೂಡ ತೀರ್ಮಾನಿಸಿದೆ ಎಂದು ಭರವಸೆ ನೀಡಿದರು.
ಸ್ಪಂದಿಸದ ಕೇಂದ್ರ
ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಇದುವರೆಗೆ ಎರಡು-ಮೂರು ಬಾರಿ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
➡️ ಬರ ಇರುವಲ್ಲೆಲ್ಲ ನಾನೇ ಸಿಎಂ ಆಗಿದ್ದೇನಾ? ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು??
ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡುವ ರಾಜ್ಯ ಸರಕಾರ ರೈತರಿಗಾಗಿ ಏನು ಮಾಡಿದೆ ಎಂಬ ಬಿಜೆಪಿಯವರ ಪ್ರಶ್ನೆಗೆ ಉತ್ತರವಾಗಿ ಈ ಬರ ಪರಿಹಾರವನ್ನು ನೀಡುತ್ತಿಲ್ಲ ಎಂದು ಸಿಎಂ ತಿರು ಗೇಟು ನೀಡಿದರು. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾವಿಸುತ್ತಾರೆ ಎಂದು ಅಂಜಿಯೂ ಕೊಡುತ್ತಿಲ್ಲ. ಕೇಂದ್ರ ಸರಕಾರ ಕೊಡದ ಕಾರಣ ನಮ್ಮ ರೈತರಿಗೆ ತೊಂದರೆ ಆಗಬಾರದೆಂದು ಕೊಡುತ್ತಿದ್ದೇವೆ. ರಾಜ್ಯದಲ್ಲಿ 86.07 ಲಕ್ಷ ರೈತರಿದ್ದರೆ ಕಿಸಾನ್ ಸಮ್ಮಾನ್ ಯೋಜನೆಯಡಿ 47-53 ಲಕ್ಷ ರೈತರಿಗೆ ಮಾತ್ರ ಹಣ ಕೊಡುತ್ತಿದ್ದರು.
ಬರಗಾಲದ ಹಿನ್ನೆಲೆಯಲ್ಲಿ ನರೇಗಾದ ಅಡಿ 100 ದಿನ ಇರುವ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಅನುಮತಿ ಕೇಳಿದರೂ ಕೊಡುತ್ತಿಲ್ಲ. ನಾನು ಸಿಎಂ ಆದ ಮೇಲೆ ಬರ ಬಂದಿದೆ ಎನ್ನುವ ಬಿಜೆಪಿಯವರು ದೇಶದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ಇತರ 12 ರಾಜ್ಯಗಳಲ್ಲಿಯೂ ನಾನೇ ಮುಖ್ಯಮಂತ್ರಿ ಆಗಿದ್ದೇನೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ಸಿಎಂ ಹೇಳಿದರು.
ಕೇಂದ್ರದ ಪರಿಹಾರಕ್ಕೆ ಕಾಯುವುದಿಲ್ಲ
ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಪ್ರತೀ ಹೆಕ್ಟೇರ್ಗೆ 8,550 ರೂ., ನೀರಾವರಿ ಪ್ರದೇಶಕ್ಕೆ 17 ಸಾವಿರ ರೂ. ಹಾಗೂ ಬಹುವಾರ್ಷಿಕ ಬೆಳೆ ಬೆಳೆಯುವ ಭೂಮಿಗೆ 22,500 ರೂ. ಇನ್ಪುಟ್ ಸಬ್ಸಿಡಿಯನ್ನು ಕೇಂದ್ರ ಸರಕಾರ ಕೊಡಬೇಕು. ಕೇಂದ್ರ ಸರಕಾರ ಬರ ಪರಿಹಾರ ಕೊಡುವುದು ತಡ ಆಗಿರುವುದರಿಂದ ಕಾಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
> ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆ ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ ಚೆಕ್ ಮಾಡಿಕೊಳ್ಳಿ..
ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಒತ್ತಿರಿ
https://ahara.kar.nic.in/Home/EServices
ನಂತರ ಮುಖಪುಟದಲ್ಲಿ ಎಡಭಾಗದಲ್ಲಿರುವ ಕಾಣುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿರಿ
ನಂತರ ಕೆಳಗಡೆ ಕಾಣುವ ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿರಿ
ನಂತರ ಕೆಳಗಡೆ ಕಾಣುವ ಡಿಬಿಟಿ ಸ್ಥಿತಿ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ
ನಂತರ ಅಲ್ಲಿ ಕೆಳಗೆ ಕೊಟ್ಟಿರುವ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು select ಮಾಡಿಕೊಳ್ಳಿ..
ನಂತರ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಿರಿ
ನಂತರ ಮುಖಪುಟದಲ್ಲಿ ಕಾಣುವ ಹಾಗೆ ವರ್ಷ,ತಿಂಗಳು,ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗನಂತೆ ನಿಮ್ಮ ಹೆಸರು, member ID,ಕುಟುಂಬ ಸದಸ್ಯರ ಸಂಖ್ಯೆ,ಹಾಗೂ ನಿಮಗೆ ಸಿಗುವ ಅಕ್ಕಿ ಎಷ್ಟು ಹಾಗೂ ನಿಮ್ಮ ಖಾತೆಗೆ ಎಷ್ಟು ಜಮ ಆದ ಹಣದ ಮಾಹಿತಿ ನಿಮಗೆ ಕಾಣುತ್ತದೆ..
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಬರ ಪರಿಹಾರ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಪರಿಹಾರ ಹಣ ಜಮೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
⚫✅ ಇಲ್ಲಿದೆ ಮಹತ್ವದ ಮಾಹಿತಿ🙏🏻..
➡️ಈ ಪಟ್ಟಿಯಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬರುವುದಿಲ್ಲ! 🛑 ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯೇ ಚೆಕ್ ಮಾಡಿಕೊಳ್ಳಿ 🙏🏻 https://krushivahini.com/2023/12/04/reason-why-these-farmers-do-not-get-drought-relief/
➡️ ಈ ಜಿಲ್ಲೆಗಳಿಗೆ ಕೃಷಿ ಸಿಂಚಾಯಿ ಯೋಜನೆಯ ಅಡಿ ತುಂತುರು ಹಾಗೂ ಸೂಕ್ತ ನೀರಾವರಿ ಘಟಕ ಸ್ಥಾಪಿಸಲು 90% ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ!👇🏻 https://krushivahini.com/2023/12/03/90-subsidy-under-krishi-sinchayi-scheme/
🔴 ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಯಾವುವು??
⚫ ಎಷ್ಟು ಪರ್ಸೆಂಟ್ ಸಹಾಯ ಅದನ್ನು ಕೊಡುತ್ತಾರೆ??