ಪ್ರಿಯ ರೈತರೇ, ಇತ್ತೀಚಿನ ದಿನಗಳಲ್ಲಿ ಕೃಷಿ ಒಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವಉದ್ಯಮವಾಗಿದೆ. ಅನೇಕ ಯುವಕರು ಕೃಷಿ ಕಡೆಗೆ ತಮ್ಮ ಒಲವನ್ನು ತೋರಿಸುತಿದ್ದಾರೆ.

ಪ್ರಸ್ತುತ ಕೃಷಿಯಲ್ಲಿ ರೈತರು ಬಹಳ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ರೈತರಿಗೆ ಕೃಷಿಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ ರೇಷ್ಮೆ ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಹಲವಾರು ಸುಧಾರಿತ ಕ್ರಮಗಳನ್ನು ರಾಜ್ಯದಲ್ಲಿ ರೇಷ್ಮೆ ಇಲಾಖೆ ಕೈಗೊಂಡಿದೆ. ರೇಷ್ಮೆ ಹುಳುಗಳನ್ನು ಮೊಟ್ಟೆ ಹಿಡಿದು ಹುಳುಗಳಾಗಿ ಸಾಕಣೆ ಮನೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ವಿತರಿಸುವ ಗುರಿ ಹೊಂದಿದೆ.

ರೇಷ್ಮೆ ಕೃಷಿಗೆ ಇರುವಂತಹ ಸರ್ಕಾರದ ಸಬ್ಸಿಡಿ ಅಥವಾ ಸಹಾಯಧನಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

# ರೇಷ್ಮೆ ಕೃಷಿಯಲ್ಲಿ ನಾಟಿ ಮಾಡಲು ಪ್ರೋತ್ಸಾಹವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ರೈತರಿಗೆ ಎಕರೆಗೆ 5,500 ರೂಪಾಯಿಗಳು ಮತ್ತು ಉಳಿದ ವರ್ಗಕ್ಕೆ ಸೇರಿದ ರೈತರಿಗೆ ಎಕರೆಗೆ 4,125 ರೂಪಾಯಿಗಳನ್ನು ಸರ್ಕಾರದಿಂದ ನೀಡಲಾಗುತ್ತದೆ.

# ಇದರಿಂದ ಸರ್ಕಾರವು ರೈತರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಗರಿಷ್ಠ ಅಂದರೆ 2 ಹೆಕ್ಟರ್ ಪ್ರದೇಶದಲ್ಲಿ ಹಿಪ್ಪು ನೇರಳೆ ರೇಷ್ಮೆಗೆ ಸಹಾಯಧನವನ್ನು ಪಡೆಯಬಹುದು.

# ಹಿಪ್ಪು ನೇರಳೆ ಬೆಳೆಯಲು ಇಲ್ಲಿ ಹನಿ ನೀರಾವರಿಗೂ ಕೂಡ ಸರ್ಕಾರದಿಂದ ಸಹಾಯ ಧನ ನೀಡಲಾಗುವುದು. ಇಲ್ಲಿಯೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಕರೆಗೆ 18,000 ಮತ್ತು ಉಳಿದ ವರ್ಗಕ್ಕೆ ಸೇರಿದ ರೈತರಿಗೆ 15,000 ರೂಪಾಯಿಗಳನ್ನು ನೀಡಲಾಗುವುದು. ಇದನ್ನು ಗರಿಷ್ಠ 2 ಹೆಕ್ಟರ್ ಪ್ರದೇಶದಲ್ಲಿ ರೇಷ್ಮೆ ಕೃಷಿಗೆ ಸಹಾಯಧನ ಪಡೆಯಬಹುದು.

# ರೇಷ್ಮೆ ಹುಳುಗಳನ್ನು ಸಾಕುವ ಮನೆಗೂ ಸಹ ಸರ್ಕಾರದಿಂದ ಸಹಾಯಧನ ನೀಡಲಾಗುವುದು

ಇಲ್ಲಿ ಪ್ರದೇಶ ಮತ್ತು ಮನೆಯ ಅಳತೆಯ ಆಧಾರದ ಮೇಲೆ ಹಣವನ್ನು ನೀಡುತ್ತಾರೆ.

* 15×25 ಅಳತೆಯ ಹುಳು ಸಾಕಣೆ ಮನೆ ಮತ್ತು1/2 ಎಕರೆ ಹಿಪ್ಪು ನೇರಳೆ ತೋಟಕ್ಕೆ 25,000 ರೂಪಾಯಿಗಳ ಸಹಾಯಧನ ನೀಡಲಾಗುವುದು.

* 20×30 ಅಳತೆಯ ಹುಳು ಸಾಕಣೆ ಮನೆ ಮತ್ತು1 ಎಕರೆ ಹಿಪ್ಪು ನೇರಳೆ ತೋಟಕ್ಕೆ 50,000 ರೂಪಾಯಿಗಳ ಸಹಾಯಧನ ನೀಡಲಾಗುವುದು.

* 20×50 ಅಳತೆಯ ಹುಳು ಸಾಕಣೆ ಮನೆ ಮತ್ತು2 ಎಕರೆ ಹಿಪ್ಪು ನೇರಳೆ ತೋಟಕ್ಕೆ 75,000 ರೂಪಾಯಿಗಳ ಸಹಾಯಧನ ನೀಡಲಾಗುವುದು.

# ಹುಳು ಗೂಡು ಕಟ್ಟುವ ಸಮಯದಲ್ಲಿ ಹಾಕುವ ಚಂದ್ರಿಕೆ ಮನೆಗೂ ಸಹ ಸಹಾಯಧನ ನೀಡಲಾಗುವುದು.

* ಕಟ್ಟಡದ ಅಳತೆಯನ್ನು ಆಧರಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 24,000 ರೂಪಾಯಿಗಳು ಮತ್ತು ಗರಿಷ್ಠ 75,000 ರೂಪಾಯಿಗಳು ಸಿಗುತ್ತದೆ.

* ಅದೇ ರೀತಿಯಾಗಿ ಉಳಿದ ವರ್ಗ ಜನಕ್ಕೆ ಕನಿಷ್ಠ 18,000 ರೂಪಾಯಿಗಳು ಮತ್ತು ಗರಿಷ್ಠ 50,000 ರೂಪಾಯಿಗಳು ಸಿಗುತ್ತದೆ.

ಇದನ್ನು ಓದಿ :

ಬೆಳೆ ಹಾನಿಗೆ ಪರಿಹಾರ ಸಹಾಯದನ ಹೆಚ್ಚಳ!!

ಸರ್ಕಾರದಿಂದ ಬೋರೆವೆಲ್ ಕೊರೆಸಲು ಸಹಾಯದನ!

# ಇದರ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ಸರಿಯಾದ ದಾಖಲಾತಿಗಳನ್ನು ಹೊಂದಿರಬೇಕು. ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ,

* ರೈತರು ತಮ್ಮ ಸ್ವಂತ ಹಿಪ್ಪು ನೇರಳೆ ತೋಟದ ಪಹಣಿ (ಉತಾರಿ) ಹೊಂದಿರಬೇಕು.

* ವಂಶವೃಕ್ಷ ಅಥವಾ ವಂಶಾವಳಿ ಹಾಗೂ ರೈತರು ತಾವು ತಯಾರಿಸಿದ ಎಲ್ಲಾ ಚಟುವಟಿಕೆಗಳ ಛಾಯಾಚಿತ್ರ, ಹುಳು ಸಾಕುವ ಮನೆಯ ಅಂದಾಜು ವೆಚ್ಚ ಮತ್ತು ನಕ್ಷೆಯನ್ನು ಹೊಂದಿರಬೇಕು.

* ಅದಕ್ಕೆ ಸಂಬಂಧಿಸಿದ ಇನ್ನಿತರ ದಾಖಲೆಗಳನ್ನು ಹೊಂದಿರಬೇಕು.

* ಹನಿ ನೀರಾವರಿಗೆ ಬೇಕಾಗುವ ಸಾಮಗ್ರಿಗಳನ್ನು ಮತ್ತು ಇತರೆ ಉಪಕರಣಗಳನ್ನು ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳಿಂದ ಮಾತ್ರ ಪಡೆಯಬೇಕು.

* ರೇಷ್ಮೆ ಇಲಾಖೆ ಅಧಿಕಾರಿಗಳು ನೀವು ಹೊಂದಿರುವ ಸ್ಥಳ ಪರಿಶೀಲಸಿ ಪ್ರಸ್ತಾವನಿಗೆ ಮಹಜರು ಲಗತ್ತಿಸಬೇಕು.

ಕೃಷಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊಂದಲು ಕೃಷಿ ವಾಹಿನಿ ವೆಬ್ಸೈಟ್ ಗ್ರೂಪನ್ನು ಸೇರಲು ಈ ಕೆಳಕಂಡ ಲಿಂಕನ್ನು ಒತ್ತಿ 👇

https://chat.whatsapp.com/I4TJ4FdWNZL8VAvB6AlJ8w

# ರೇಷ್ಮೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಅಂಗೀಕೃತ ಮಾಡಿದ ನಂತರ ನಿಮಗೆ ಸಹಯಧನವನ್ನು ಕಂತುಗಳಲ್ಲಿ ನೀಡಲಾಗುತ್ತದೆ.

ಈ ಸಹಾಯಧನಗಳ ಲಾಭವನ್ನು ಪಡೆದುಕೊಳ್ಳಲು ಮತ್ತು ಇದರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಕೃಷಿ ಮಾಡುವವರು ನಿಮಗೆ ಹತ್ತಿರದ ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿ. ಮತ್ತು ಅವರಿಂದ ಇದರ ಬಗ್ಗೆಗಿನ ಹೆಚ್ಚಿನ ಮಾಹಿತಿ ವಿವರಗಳನ್ನು ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ನ ಸಂಪರ್ಕದಲ್ಲಿರಿ..

3 thoughts on “ರೇಷ್ಮೆ ಕೃಷಿಗೆ ಸರ್ಕಾರದಿಂದ ಸಹಾಯದನ ಲಭ್ಯ!!”

Leave a Reply

Your email address will not be published. Required fields are marked *