Bara parihara :- ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಧನ ಕೇಳಿದ ರಾಜ್ಯ ಸರ್ಕಾರ
ಹೊಸದಿಲ್ಲಿ: ಪ್ರಸಕ್ತ ವರ್ಷ ಖಾರಿಫ್ ಹಂಗಾಮಿನಲ್ಲಿ ಬರದಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಬುಧವಾರ ಕೇಂದ್ರದಿಂದ 17,901.73 ಕೋಟಿ ರೂ. ಬರ ಪರಿಹಾರ ಧನ ಕೇಳಿದೆ.
ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಮೂವರು ಸಚಿವರು ಬರ ನಿರ್ವಹಣೆ ಕುರಿತು ಕರ್ನಾಟಕ ಸಂಪುಟ ಉಪ ಸಮಿತಿಯ ಸದಸ್ಯರೂ ಆಗಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, “ನಾವು ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಒಟ್ಟು 17, 901.73 ಕೋಟಿ ರೂ.ಗಳ ಬರ ಪರಿಹಾರವನ್ನು ಕೋರಿದ್ದೇವೆ. ಆದಷ್ಟು ಬೇಗ ಹಣ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸೆಪ್ಟೆಂಬರ್ 22 ರ ವೇಳೆಗೆ, ಒಟ್ಟಾರೆಯಾಗಿ ರಾಜ್ಯವು ಶೇ 26 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ, ಇದರಿಂದಾಗಿ ಖಾರಿಫ್ ಹಂಗಾಮಿನಲ್ಲಿ ಸುಮಾರು 45.55 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದರು.
➡️ ಯಾರಿಗೆಲ್ಲಾ ಸಾಲ ಮನ್ನಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿರಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು (‘loan waiver report for commercial bank’) ಇದರ ಮೇಲೆ ಕ್ಲಿಕ್ ಮಾಡಬೇಕು. ಹಾಗೂ ಸೊಸೈಟಿಯಲ್ಲಿನ ಸಾಲವನ್ನು ಚೆಕ್ ಮಾಡಲು (‘loan waiver report for primary agricultural cooperative societies”) ಮೇಲೆ ಕ್ಲಿಕ್ ಮಾಡಿರಿ.
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ.
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
ಬಹಳಷ್ಟು ರೈತರಿಗೆ ಅವರ ಸಾಲ ಮನ್ನಾ ಆಗಿಲ್ಲ ಎಂದು ಹೇಳುತ್ತಾರೆ ಆದರೆ ಸಾಲ ಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳು ಮುಖ್ಯ,
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಾಲ ಮನ್ನಾ ಆಗಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಗಳನ್ನು ಇಲ್ಲಿ ನೋಡಿ.
➡️ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸಾಲ ಮನ್ನಾ ಆಗಲು ಬೇಕಾದ ಅರ್ಹತೆ ಹಾಗೂ ದಾಖಲಾತಿಗಳನ್ನು ನೋಡಬಹುದು. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
ನಂತರ clws ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ
ನಂತರ ಮುಂದಿನ ಮುಖಪುಟದಲ್ಲಿ ಕಾಣುವ ನಿಮ್ಮ ಜಿಲ್ಲೆ, ಮತ್ತು ಬ್ಯಾಂಕ್ ಸೆಲೆಕ್ಟ್ ಮಾಡಿ, ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
ನಂತರ ಈ ಕೆಳಗೆ ಸೂಚಿಸಿರುವ ಸಾಲ ಮನ್ನಾ ಅರ್ಹತೆ ಹಾಗೂ ದಾಖಲೆಗಳನ್ನು ನೀವು ನೋಡಬಹುದು.ಹಾಗೂ ಸಾಲ ಮನ್ನಾ ಸ್ಥಿತಿ ಗತಿ ಯನ್ನು ಅಲ್ಲಿ ಕಾಣುತ್ತಿರಿ.
ರಾಜ್ಯದಲ್ಲಿ ಇದುವರೆಗೆ 216 ತಾಲೂಕುಗಳನ್ನು ಬರ ಎಂದು ಘೋಷಿಸಲಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದರು.
17,901 ಕೋಟಿ ಅಂದಾಜು ಬರ ಪರಿಹಾರ ನಿಧಿಯಲ್ಲಿ, 90 ದಿನಗಳಿಂದ ಬರಗಾಲದಿಂದ ಜೀವನೋಪಾಯಕ್ಕೆ ತೀವ್ರವಾಗಿ ತೊಂದರೆಗೀಡಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರವು ಮೊದಲ ಬಾರಿಗೆ 12,577 ಕೋಟಿ ರೂಪಾಯಿಗಳನ್ನು ಅನಪೇಕ್ಷಿತ ಪರಿಹಾರವಾಗಿ ಬೇಡಿಕೆ ಇಟ್ಟಿದೆ ಎಂದು ಕಂದಾಯ ಸಚಿವರು ಹೇಳಿದರು.
ಈ ವರ್ಷ ಖಾರಿಫ್ ಹಂಗಾಮಿನಲ್ಲಿ (ಜುಲೈ-ಜೂನ್) ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ 4414.29 ಕೋಟಿ ರೂ., ಪಶು ಆಹಾರಕ್ಕಾಗಿ ರೂ 355 ಕೋಟಿ ಮತ್ತು ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ನೆರವು ನೀಡಲು 554 ಕೋಟಿ ರೂ. ಕೇಳಲಾಗಿದೆ ಎಂದರು.
ಪರಿಹಾರ ನಿಧಿ ಮಂಜೂರು ಮಾಡುವಾಗ ರಾಜ್ಯದ ಜನಸಂಖ್ಯೆಯ ಶೇ.70 ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಇತ್ತೀಚಿನ ಸಂಖ್ಯೆಯನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಬರ ಪರಿಹಾರ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಪರಿಹಾರ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
ತಪ್ಪದೆ ತಿಳಿಯಿರಿ ಮಹತ್ವದ ಮಾಹಿತಿ
➡️ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ರೂ ಅನುದಾನ ಬಿಡುಗಡೆ ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಇಲ್ಲಿ ನೋಡಿರಿ 👇🏻https://krushivahini.com/2023/11/03/324-crore-drought-relief-released/
➡️ ⛈️ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ⛈️
https://krushivahini.com/2023/10/29/karnataka-rain-update/
➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/
➡️ ಬೆಳೆ ಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡಿ?? ಎಷ್ಟು ಸಾಲ ಮನ್ನಾ ಆಗಿದೆ https://krushivahini.com/2023/10/28/sala-manna-status-check/
➡️🌾🌾ಅಕ್ಕಿ ಬೆಲೆ ಏರಿಕೆ!* ಭತ್ತದ ಕಟಾವು ಆರಂಭವಾಗಿದೆ ಇನ್ನೂ ಆದರೂ ಸರ್ಕಾರದಿಂದ ಯಾವುದೇ ತರಹದ
*💸ಬೆಂಬಲ ಬೆಲೆಯನ್ನು ಘೋಷಣೆ ಮಾಡಿಲ್ಲ*💚🌾🌾
ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು ಯಾವಾಗ ಘೋಷಣೆ ಮಾಡುತ್ತಾರೆ?? ಹಾಗೂ ಎಷ್ಟು ಹಣ ಘೋಷಣೆಯಾಗುತ್ತದೆ ಇಲ್ಲಿ ನೋಡಿ 👇🏻
https://krushivahini.com/2023/10/28/rice-price-increased/
➡️ ಮತ್ತೆ ಈರುಳ್ಳಿ ಬೆಲೆಯಲ್ಲಿ ಏರಿಕೆ ಕೆಜಿಗೆ ಎಷ್ಟು ಆಗಬಹುದು ಹಾಗೂ ಮಾರುಕಟ್ಟೆಯ ಸ್ಥಿತಿಯನ್ನು ತಿಳಿದುಕೊಳ್ಳಿ https://krushivahini.com/2023/10/28/onion-rate-hike/