ನಮಸ್ಕಾರ ರೈತ ಬಾಂಧವರಿಗೆ ಇಂದು ನಾವು ರೈತರಿಗೆ ಅನುಕೂಲವಾಗುವಂತಹ ಸರ್ಕಾರಿ ಯೋಜನೆಗಳ ಲಿಸ್ಟ್ ನೋಡೋಣ..
1)ಕೃಷಿಯಂತ್ರೀಕರಣ ಯೋಜನೆ
ಕೃಷಿಯಂತ್ರೀಕರಣ ಯೋಜನೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಆ ಸಬ್ಸಿಡಿಯನ್ನು ನೀವು ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಕೃಷಿ ಇಲಾಖೆಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕೃಷಿ ಯಾಂತ್ರೀಕರಣ ಇಂಜಿನಿಯರಿಂಗ್ ವಿಶೇಷ ಕ್ಷೇತ್ರವಾಗಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಯಂತ್ರಗಳು, ಉಪಕರಣಗಳು ಮತ್ತು ರಚನೆಗಳ ಬಳಕೆಯ ಮೂಲಕ ಕೃಷಿ ಕಾರ್ಯಾಚರಣೆಗಳನ್ನು ಸುಧಾರಿಸುವ ಒಂದು ಮಾರ್ಗವಾಗಿದೆ. ಈ ಘಟಕವು ಕೃಷಿ ಯಾಂತ್ರೀಕರಣದ ಉಪಯುಕ್ತತೆಯನ್ನು ಗಮನಕ್ಕೆ ತರುತ್ತದೆ. ಕೃಷಿ ಯಾಂತ್ರೀಕರಣದಲ್ಲಿ ಸಬ್ಸಿಡಿಯು 50 ರಿಂದ 90% ರಷ್ಟು ಲಭ್ಯವಿದ್ದು, ಸಾಮಾನ್ಯ ವರ್ಗ 50% ಹಾಗೂ ಪರಿಷ್ಠಿತ ಜಾತಿ ಹಾಗೂ ಪರಿಷ್ಠಿತ ಪಂಗಡದ ರೈತರಿಗೆ 90% ಸಹಾಯಧನವನ್ನು ನಿಗದಿಪಡಿಸಲಾಗಿದೆ.
2)ಗರೀಬ್ ಕಲ್ಯಾಣ ಯೋಜನೆ
ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲಾ ಫಲಾನುಭವಿಗಳಿಗೆ 2023 ಜನೆವರಿಯಿಂದ ಮುಂದಿನ ಒಂದು ವರ್ಷದವರೆಗೆ ದೇಶಾದ್ಯಂತ ಉಚಿತವಾಗಿ ಅಕ್ಕಿಯನ್ನು ಕೊಡಲಾಗುತ್ತದೆ. ಎರಡು ಲಕ್ಷ ಕೋಟಿ ರೂ ಅನುದಾನವನ್ನು ಕೇಂದ್ರ ಸರ್ಕಾರವೇ ಬರಸಲಿದೆ.
3)ರಾಷ್ಟ್ರೀಯ ಮಿಷನ್ ಯೋಜನೆ
ಬೇಸಾಯದಲ್ಲಿ ಸಹಜ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ ಸರ್ಕಾರ ಹೆಚ್ಚಿನ ಉತ್ತೇಜನಯನ್ನು ಒದಗಿಸುವ ಸಾಧ್ಯತೆಯಿದೆ. ಸರ್ಕಾರವು ರೈತರಿಗೆ ಕೃಷಿಯಲ್ಲಿ ಉತ್ತೇಜನ ನೀಡುತ್ತಿದ್ದು ರೈತರಿಗೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯ ಆಗುತ್ತದೆ. ವಸತಿ ಮತ್ತು ವಾಣಿಜ್ಯ ವಲಯದಲ್ಲಿನ ಕಟ್ಟಡಗಳ ಶಕ್ತಿಯ ದಕ್ಷತೆಯ ಸುಧಾರಣೆಗಳು. ಪುರಸಭೆಯ ಘನತ್ಯಾಜ್ಯ (MSW) ನಿರ್ವಹಣೆಯು ನಗರ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುತ್ತದೆ. ಸುಸ್ಥಿರ ಕೃಷಿ ಚಟುವಟಿಕೆಗಳಿಗೆ ಸಹಾಯವನ್ನ ಮಾಡುತ್ತದೆ.ಕೃಷಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಖರೀದಿಸಿ ಮತ್ತು ನೈಸರ್ಗಿಕ ಗೊಬ್ಬರಗಳನ್ನು ಖರೀದಿಸಲು ಆರ್ಥಿಕ ಬೆಂಬಲ ಸೇರಿದಂತೆ ಉತ್ತೇಜನವನ್ನ ಸರ್ಕಾರ ನೀಡುತ್ತದೆ.
4)ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಬೆಳೆ ಹಾನಿಯ ಸಂದರ್ಭದಲ್ಲಿ, ನೀವು ಈ ಕೆಳಗಿನ ವಿಧಾನಗಳ ಮೂಲಕ ಪೋರ್ಟಲ್ ಯೋಜನೆಗೆ ಪ್ರವೇಶವನ್ನು ಪಡೆಯಬಹುದು. ಕೃಷಿ ಕಚೇರಿ ಅಥವಾ ಕಂಪನಿಗೆ ಭೇಟಿ ನೀಡಿ. 400 > ಬೆಳೆ ನಷ್ಟದ ಬಗ್ಗೆ 72 ಗಂಟೆಗಳ ಒಳಗೆ ಕೃಷಿ ಅಧಿಕಾರಿಗೆ ಸೂಚಿಸಿ.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2023 ರ ಪಟ್ಟಿಯನ್ನು ನೋಡಲು, ಸರ್ಕಾರದ ವೆಬ್ಸೈಟ್ pmfby.gov.in ಅನ್ನು ತೆರೆಯಬೇಕು, ಇದರ ನಂತರ ಫಸಲ್ ಬಿಮಾ ಯೋಜನೆಯ ವೆಬ್ಸೈಟ್ ತೆರೆಯುತ್ತದೆ, ಅದರಲ್ಲಿ ನೀವು ಅಪ್ಲಿಕೇಶನ್ ಸ್ಥಿತಿಯ ಆಯ್ಕೆಯನ್ನು ಆರಿಸಬೇಕಾಗುತ್ತದೆ, ಅದರ ನಂತರ ರಸೀದಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡುವ ಮೂಲಕ ಪರಿಶೀಲಿಸಿ. ನೀವು ಸ್ಥಿತಿಯ ಆಯ್ಕೆಯನ್ನು ಆರಿಸಿದ ತಕ್ಷಣ, ನಿಮ್ಮ ಹೆಸರು ಪಟ್ಟಿಯಲ್ಲಿ ಇರುತ್ತದೆ.
ಅದರ ದಿನಾಂಕ ಮತ್ತು ಸಮಯವನ್ನು ಒಳಗೊಂಡಂತೆ ನಷ್ಟದ ಬಗ್ಗೆ ಮಾಹಿತಿಯನ್ನು ಒದಗಿಸಿ.ನೀವು ದೃಶ್ಯ ಪುರಾವೆಗಳನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ, ಅಂದರೆ, ಬೆಳೆ ನಷ್ಟದ ಚಿತ್ರಗಳು.ನೀವು ಅಪ್ಲಿಕೇಶನ್ ಮೂಲಕವೂ ತಿಳಿಸಬಹುದು.
5)ಗಂಗಾ ಕಲ್ಯಾಣ ಯೋಜನೆ
ರೂ.4.00 ಲಕ್ಷ / ರೂ.3.00 ಲಕ್ಷ ಸಹಾಯಧನದಡಿ ಕೊಳವೆಬಾವಿ / ತೆರೆದ ಬಾವಿ ಸೌಲಭ್ಯಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಆದಾಯ ಗಳಿಸಲು ಸ್ವಯಂ ಉದ್ಯೋಗ ಯೋಜನೆಗಳಾದ ನೇರಸಾಲ ಯೋಜನೆ , ಉದ್ಯಮ ಶೀಲತಾ ಅಭಿವೃದ್ಧಿಯೋಜನೆ , ಮೈಕ್ರೋ ಯೋಜನೆ , ಭೂ ಒಡೆತನ ಯೋಜನೆ ಹಾಗೂ ಗಂಗಾ ಕ್ರೆಡಿಟ್ ಪ್ರೇರಣಾ ಕಲ್ಯಾಣ ಯೋಜನೆ.
6)ರೈತ ಸಿರಿ ಯೋಜನೆ
ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಿಸುವುದರ ಸಲುವಾಗಿ ಹಾಗೂ ಧಾನ್ಯ ಬೆಳೆಯುವ ರೈತರ ಸಂಖ್ಯೆಯನ್ನು ಹೆಚ್ಚಿಸಲು ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ನೈಸರ್ಗಿಕ ವಿಕೋಪಗಳು ಬೆಳೆಗಳಿಗೆ ನಿರಂತರ ಅಪಾಯವನ್ನುಂಟುಮಾಡುತ್ತವೆ ಈ ಸಮಸ್ಯೆಯು ಬೆಳೆಗಳ ಗುಣಮಟ್ಟ ಅಥವಾ ಇಳುವರಿಯನ್ನು ನೇರವಾಗಿ ಪರಿಣಾಮ ಬೀರುತ್ತದೆ, ಇದು ಹತಾಶೆಯ ಪ್ರಮುಖ ಮೂಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಆರ್ಥಿಕ ಕಷ್ಟವನ್ನು ಎದುರಿಸುವಂತಾಗಿದೆ. ಅದರ ಅನೇಕ ಅನಾನುಕೂಲತೆಗಳ ಹೊರತಾಗಿಯೂ, ಕೃಷಿ ಉದ್ಯಮದಲ್ಲಿರುವವರಿಗೆ ಹಣಕಾಸಿನ ದೃಷ್ಟಿಕೋನವು ಸಾಮಾನ್ಯವಾಗಿ ಮಂಕಾಗಿರುತ್ತದೆ. ಹಣವನ್ನು ಮಾಡಲು ಅಥವಾ ಹೂಡಿಕೆ ಮಾಡಲು ಒತ್ತಡವು ಹಣವು ಇತರ ಪ್ರಮುಖ ಕೆಲಸಗಳನ್ನು ಮಾಡಲು ಕಾರಣವಾಗುತ್ತದೆ.
7)ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾ ಅಭಿಯಾನ
ಕೇಂದ್ರ ಸರ್ಕಾರ ನೀರಾವರಿಗಾಗಿ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ಕೃಷಿಗೆ ಒದಗಿಸುತ್ತದೆ. ಸೋಲಾರ್ ಪಂಪ್ಗಳ ಬಳಕೆಯಿಂದ ದೇಶದಲ್ಲಿ ಕೃಷಿ ಅಭಿವೃದ್ಧಿಯೊಂದಿಗೆ ರೈತರ ಆರ್ಥಿಕ ಸ್ಥಿತಿ ಬಹಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೈತರಿಗೆ ಆರ್ಥಿಕ ತೊಂದರೆಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಸರ್ಕಾರದ ಬೆಂಬಲ:
ಘಟಕ-A: ಸರ್ಕಾರವು ಉತ್ಪಾದಕರಿಂದ ವಿದ್ಯುತ್ ಖರೀದಿಸಲು ಮೊದಲ ಐದು ವರ್ಷಗಳ ಕಾಲ DISCOM ಗಳಿಗೆ ಹಣವನ್ನು ನೀಡುತ್ತದೆ, ಸರ್ಕಾರವು 40 ಪೈಸೆ/kWh ಅಥವಾ ರೂ. 6.60 ಲಕ್ಷಗಳು/MW/ವರ್ಷ, ಯಾವುದು ಕಡಿಮೆಯೋ ಅದು. ಕಾಂಪೊನೆಂಟ್-ಬಿ ಮತ್ತು ಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರವು ವೆಚ್ಚದ 30% ಮತ್ತು ಉಳಿದ 40% ಮಾಲೀಕರು ಪಾವತಿಸುತ್ತಾರೆ, ಆದರೆ J&K, ಹಿಮಾಚಲ, ಉತ್ತರಾಖಂಡ, ಸಿಕ್ಕಿಂ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ಕೇಂದ್ರ ಸರ್ಕಾರವು ಹಣವನ್ನು ನೀಡುತ್ತದೆ ವೆಚ್ಚದ 50%, ರಾಜ್ಯ ಸರ್ಕಾರ 30% ಮತ್ತು ಉಳಿದ 20% ಮಾಲೀಕರು ಪಾವತಿಸುತ್ತಾರೆ.ಈ ಯೋಜನೆಯಡಿ ರೈತರು ತಮ್ಮ ಒಟ್ಟು ವೆಚ್ಚದ ಶೇ.10 ರಷ್ಟು ಮಾತ್ರ ಖರ್ಚು ಮಾಡಲು ಸಹಾಯ ಮಾಡುತ್ತದೆ. ಇನ್ನೂಳಿದ ಶೇ. 30 ರಷ್ಟು ಹಣವನ್ನು ಬ್ಯಾಂಕ್ ಸಾಲದ ಮುಖಾಂತರ ನೀಡುತ್ತದೆ ಹಾಗೂ ಶೇ.80 ರಷ್ಟು ಮೊತ್ತವನ್ನು ನೀಡಲಾಗುತ್ತದೆ.
8)ಮತ್ಸ್ಯಸಿರಿ ಯೋಜನಾ
ಯೋಜನೆಯ ಉದ್ದೇಶ ಮೀನುಗಾರರ ಆದಾಯ ಹೆಚ್ಚಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ನೆರವು ನೀಡುತ್ತದೆ ಈ ಮತ್ಸ್ಯಸಿರಿ ಯೋಜನೆ ಉಪಯುಕ್ತವಾಗಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ಆಳಸಮುದ್ರ ಮೀನುಗಾರಿಕೆ ದೋಣಿ ನಿರ್ಮಾಣಕ್ಕೆ ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯ ಸಂಯೋಜನೆಯೊಂದಿಗೆ ನೆರವು ನೀಡುವ ಮತ್ಸ್ಯಸಿರಿ ಯೋಜನೆಯನ್ನು ಘೋಷಿಸಲಾಗಿತ್ತು. ಕೇಂದ್ರದ ನೆರವಿನ ಜತೆಗೆ ರಾಜ್ಯ ಸರಕಾರ ತಲಾ 15 ಲಕ್ಷ ರೂ. ಸೇರಿಸಿ 100 ದೋಣಿಗಳ ನಿರ್ಮಾಣಕ್ಕೆ ಸಹಾಯಧನ ನೀಡುವ ಯೋಜನೆ ಇದು.
ಇದನ್ನು ಓದಿರಿ : ಬೋರ್ವೆಲ್ ಅಥವಾ ಕೊಳವೆಬಾವಿ ಕೊರೆಸಲು ರಾಜ್ಯ ಸರ್ಕಾರದಿಂದ ಸಹಾಯಧನ ಲಭ್ಯ ಫೆಬ್ರವರಿ 20 ಕೊನೆಯ ದಿನಾಂಕ ಕೂಡಲೇ ಅರ್ಜಿ ಸಲ್ಲಿಸಿ!!
ಎಮ್ಮೆ ಎಷ್ಟು ದಿನವಾದರೂ ಕಟ್ಟುತ್ತಿಲ್ಲವೇ ಈ ಕ್ರಮ ಅನಿಸಿದರೆ ವರ್ಷಕ್ಕೆ ಒಂದು ಕರು ಖಂಡಿತ!!
9)ರೈತ ಶಕ್ತಿ ಯೋಜನೆ
ಈ ‘ರೈತ ಶಕ್ತಿ’ ಯೋಜನೆಯಡಿ ಲಭ್ಯವಾಗುವ ಪ್ರತಿ ಎಕರೆಗೆ ರೂ. 250 ಗಳಂತೆ ಗರಿಷ್ಟ 5ಎಕರೆಗೆ ರೂ. 1250 ವರೆಗೆ ಡಿ.ಬಿ.ಟಿ ನೇರ ನಗದು ವರ್ಗಾವಣೆ ಮೂಲಕ ಸಿಗುವ ಡೀಸಲ್ ಸಹಾಯಧನಕ್ಕಾಗಿ ಕೃಷಿ ಇಲಾಖೆ ಆಹ್ವಾನಿಸಿದೆ. ಅದರಂತೆ ರೈತರು ಸಹಾಯಧನ ಪಡೆಯಲು ಫ್ರೂಟ್ಸ್ ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ ತೋಟಗಾರಿಕೆರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್ ನಲ್ಲಿ ನೋಂದಣಿ ಅಗತ್ಯ. ಮೊನ್ನೆ ಮೊನ್ನೆ ತಾನೆ ಚಾಲನೆ ಮಾಡಿರುವ ಕರ್ನಾಟಕದ ಮುಖ್ಯಮಂತ್ರಿಗಳು ಈಗಾಗಲೇ ಎಲ್ಲ ಅರ್ಹ ರೈತರ ಕಾತೆಗೆ ಹಣವನ್ನು ಜಮಾ ಮಾಡಿದ್ದಾರೆ.
ಉದ್ದಿಮೆ ಘಟಕ ಕುರಿ ಮೇಕೆ ಸಾಕಾಣಿಕೆ 5 ಲಕ್ಷದವರೆಗೆ ಸಾಲ ನೀಡಲು 25% ಸಹಾಯಧನ.
ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ , ನಗರ , ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕ ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 5 ಲಕ್ಷಗಳ ವರೆಗೆ ಸಾಲ ನೀಡಿ ಗರಿಷ್ಠ ಶೇ .25 ರಿಂದ 35 ರ ವರೆಗೆ ಸಹಾಯಧನ ನೀಡಲಾಗುತ್ತದೆ . ಈ ವರ್ಷದಲ್ಲಿ ಹಸು , ಕುರಿ , ಮೇಕೆ ಸಾಕಾಣಿಕೆ ಹಾಗೂ ಮಾಂಸಹಾರಿ ಹೊಟೇಲ್ ಮತ್ತು ಇತರೆ 250 ಕ್ಕೂ ಅಧಿಕ ಉದ್ದಿಮೆಗಳಿಗೆ ಸಹಾಯಧ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ : ಎಚ್.ಆರ್.ರಾಮಕೃಷ್ಣ , ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ , ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ , ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ , ಕೊಹಿನೂರು ರಸ್ತೆ , ಮಡಿಕೇರಿ ಕೊಡಗು ಜಿಲ್ಲೆ ಇವರ ಕಚೇರಿ ದೂ.ಸಂ.9480825630 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ತಿಳಿಸಿದ್ದಾರೆ.
10)ಭದ್ರಾ ಮೇಲ್ದಂಡೆ ಯೋಜನೆ
ಕರ್ನಾಟಕದಲ್ಲಿ ಮಹತ್ವವನ್ನ ಪಡೆದಿರುವ ನೀರಾವರಿ ಯೋಜನೆ ಈ ಭದ್ರಾ ಮೇಲ್ದಂಡೆ ಯೋಜನೆ. ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರಾವರಿಯ ಯೋಜನೆ ಚಾಲನೆ ತಂದು ನೀರು ಒದಗಿಸುವುದೇ ಮುಖ್ಯ ಉದ್ದೇಶವಾಗಿದೆ.
11)ನರ್ಸರಿ ನಿರ್ಮಾಣಕ್ಕೆ 50% ಸಹಾಯಧನ
ಸಂರಕ್ಷಿತ ಬೇಸಾಯ : ಈ ಯೋಜನೆಯ ಅಡಿ ಹಸಿರು ಮನೆ ನಿರ್ಮಾಣ ಮಾಡಿದ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೆಲಹೊದಿಕೆಯನ್ನು ಆಳವಡಿಸಿಕೊಂಡ ರೈತರಿಗೆ 50 %ರಷ್ಟು ಸಹಾಯಧನವನ್ನು ನೀಡಲಾಗುವುದು . ಈ ರೀತಿ ಸಹಾಯಧನ ನೀಡುವಾಗ ಹಸಿರುಮನೆ ನಿರ್ಮಿಸಿದ ರೈತರಿಗೆ ಗರಿಷ್ಟ 4000ಚಮೀ ವರೆಗೆ ಹಾಗೂ ನೆಲಹೊದಿಕೆ ಆಳವಡಿಸಿಕೊಂಡ ರೈತರಿಗೆ ಗರಿಷ್ಟ 2.00 ಹೆಕ್ಟೇರ್ ವರೆಗೆ ಮಾತ್ರ ಅಳವಡಿಕೆಯಾಗುತ್ತದೆ.
12)ಕಾಯಕ ಸ್ಪೂರ್ತಿ :
10 ಸದಸ್ಯಲಿರುವ ಮಹಿಳಾ ಕುಶಲಕರ್ಮಿಗಳ ಸ್ವಸಹಾಯ ಸಂಘಗಳಿಗೆ ಗರಿಷ್ಟ ರೂ. 1.00 ಲಕ್ಷ ಸಾಲ ಮತ್ತು ರೂ.1.50 ಲಕ್ಷ ಸಹಾಯಧನ.
13)ಪಾದುಕ ಕುಟೀರ ಯೋಜನೆ :
ಪಾದರಕ್ಷೆ ದುರಸ್ತಿ/ ಉತ್ಪಾದನೆಗಾಗಿ ಪಾದುಕ ಕುಟೀರಗಳ ಸ್ಥಾಪನೆ ಮತ್ತು ಉಪಕರಣಗಳ ಕಿಟ್’ ಅನ್ನು ಉಚಿತವಾಗಿ ನೀಡಲಾಗುವುದು.ಪ್ರಗತಿ ಲಿಡ್ಕರ್ ಕಾಲೋನಿಗಳ ಸಮಗ್ರ ಅಭಿವೃದ್ಧಿ.
ಕೈಗಾರಿಕೆ, ಐಟಿ/ಬಿ.ಟಿ, ಮಹಿಳಾ ಅಭಿವೃದ್ಧಿ ನಿಗಮ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆಗಳಿಂದ ಅನುಷ್ಠಾನ ಮಾಡುತ್ತಿರುವ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾರ್ಯಕ್ರಮಗಳು :
ಕೈಗಾರಿಕಾ ನಿವೇಶನ ಮತ್ತು ಶೆಡ್ಗಳಿಗೆ 75% ಸಹಾಯಧನ ಗರಿಷ್ಟ 2 ಎಕರೆ ವಿಸ್ತೀರ್ಣ. ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ 60% ಹಾಗೂ ಗರಿಷ್ಟ ರೂ.5.00 ಲಕ್ಷ ಸಹಾಯಧನ. ಸಾಫ್ಟ್ ಸೀಡ್ ಕ್ಯಾಪಿಟಲ್ – 50% ಗರಿಷ್ಟ ರೂ.75.00 ಲಕ್ಷ ಸಾಲ. ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆಗೆ ಸಹಾಯಧನ. ಸಣ್ಣ ಮತ್ತು ಅತೀ ಸಣ್ಣ ಜವಳಿ ಘಟಕಗಳಿಗೆ 75% ಹಾಗೂ ಗರಿಷ್ಟ ರೂ.2.00 ಕೋಟಿ ಸಹಾಯಧನ. ಉದ್ಯೋಗಿನಿ – ಉದ್ಯಮಶೀಲತಾ ಕಾರ್ಯಕ್ರಮಗಳಿಗೆ ಗರಿಷ್ಟ ರೂ.1.50 ಲಕ್ಷ ಸಹಾಯಧನ.
ಎನ್.ಆರ್.ಎಲ್.ಎಂ ಮತ್ತು ಎನ್.ಯು.ಎಲ್.
14)ಭೂ ಒಡೆತನ ಯೋಜನೆ :
ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಗೆ ರೂ.20 ಲಕ್ಷ ಘಟಕ ವೆಚ್ಚದಲ್ಲಿ 50% ಸಹಾಯಧನ ಮತ್ತು 50% ಸಾಲ.
15)ಸ್ವಯಂ ಉದ್ಯೋಗ ಯೋಜನೆ:
ನೇರಸಾಲ ಯೋಜನೆಯಡಿ ರೂ.1.00 ಲಕ್ಷ ಘಟಕ
ವೆಚ್ಚದಲ್ಲಿ ರೂ.50,000/- ಸಹಾಯಧನ ಮತ್ತು 50,000/-. ಬ್ಯಾಂಕ್ ಲಿಂಕ್ ಕಾರ್ಯಕ್ರಮಗಳಿಗೆ ಗರಿಷ್ಟ ರೂ.2.00 ಲಕ್ಷ ಸಹಾಯಧನ.
ಐ.ಎಸ್.ಬಿ ಕಾರ್ಯಕ್ರಮಗಳಡಿ ಸರಕು ವಾಹನಗಳಿಗೆ
ರೂ.3.50 ಲಕ್ಷ ಸಹಾಯಧನ. `ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳಿಗೆ ರೂ. 50,000/- ಸಹಾಯಧನ.
ಪ್ರೇರಣಾ / ಕಿರುಸಾಲ ಯೋಜನೆ :
10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಗರಿಷ್ಟ ರೂ.1.00 ಲಕ್ಷ ಸಾಲ ಮತ್ತು ರೂ.1.50 ಲಕ್ಷ ಸಹಾಯಧನ.
ಡಾ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ :
ಚರ್ಮ ಶಿಲ್ಪ:
ಪಾರಂಪಾರಿಕ ವಿಧಾನದಲ್ಲಿ ಚರ್ಮ ಉತ್ಪನ್ನಗಳನ್ನು ಉತ್ಪಾದಿಸುವ ಕುಶಲ ಕರ್ಮಿಗಳಿಗೆ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ ಧನಸಹಾಯ.
ಕೌಶಲ್ಯಾಭಿವೃದ್ಧಿ ತರಬೇತಿ:
ಚರ್ಮ ತಯಾರಿಕೆಯ ಬಗ್ಗೆ 80 ದಿನಗಳ ತರಬೇತಿ, ಉತ್ಪನ್ನಗಳ
ಕೌಶಲ್ಯ ಉನ್ನತೀಕರಣ ಯೋಜನೆ:
ಪ್ರತಿಷ್ಟಿತ ತರಬೇತಿ ಸಂಸ್ಥೆಗಳಾದ ಸಿ.ಎಫ್.ಟಿ.ಐ/ನಿವ್/ಸಿ.ಎಲ್.ಆರ್.ಐ/ ಎಫ್.ಡಿ.ಡಿ.ಐ, ದೆಹಲಿ/ ಕರ್ನಾಟಕ ಚರ್ಮ ತಾಂತ್ರಿಕ ಮತ್ತು ಫ್ಯಾಶನ್ ಟೆಕ್ನಾಲಜಿ ಸಂಸ್ಥೆಗಳ ಮೂಲಕ ತರಬೇತಿ
ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ :
ಸ್ವಂತ ಮಾರಾಟ ಮಳಿಗೆಗೆ ಸಹಾಯಧನ ಮತ್ತು ಸಂಚಾರಿ ವಾಹನದ ಮೂಲಕ ಮಾರಾಟ ಮಾಡಲು ಸಹಾಯಧನ.
ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು
4% ಬಡ್ಡಿ ಸಹಾಯಧನ ಯೋಜನೆ :
ಕೆ.ಎಸ್.ಎಫ್.ಸಿ ಮತ್ತು ಬ್ಯಾಂಕ್ಗಳಿಂದ ಎಂ.ಎಸ್.ಎಂ.ಇ ಮತ್ತು ಇತರೆ ವಾಣಿಜ್ಯ ಚಟುವಟಿಕೆಗಳಿಗಾಗಿ ಪಡೆದಿರುವ ಸಾಲಕ್ಕೆ. ಸಮಾನಾಂತರ ಖಾತ್ರಿ: ಕೆ.ಎಸ್.ಎಫ್.ಸಿ ಯಿಂದ ಪಡೆದಿರುವ ಸಾಲಕ್ಕೆ ಗರಿಷ್ಟ ರೂ.1 ಕೋಟಿ ಸಮಾನಾಂತರ ಖಾತ್ರಿ
ಉದ್ಯಮಶೀಲತಾ ತರಬೇತಿ:
ಪ.ಜಾತಿ/ ಪ.ಪಂಗಡದ 300 ಮಹಿಳೆಯರಿಗೆ ಐ.ಐ.ಎಂ ಬೆಂಗಳೂರಿನಲ್ಲಿ ತರಬೇತಿ.