e-khata compulsory for property registration :- ಆಸ್ತಿ ನೋಂದಣಿಯಲ್ಲಿ ಲೋಪ ಹಾಗೂ ಅಕ್ರಮ ಆಸ್ತಿ ಮಾರಾಟ ಸೇರಿದಂತೆ ವಿವಿಧ ಕಾರಣಕ್ಕಾಗಿ ಆಸ್ತಿಗಳಿಗೆ ಸರ್ಕಾರ ಇ – ಖಾತಾ ಕಡ್ಡಾಯ ಮಾಡಿದೆ. ಇದೀಗ ಇ -ಖಾತಾ ಪ್ರಕ್ರಿಯೆಗೆ ಗಡುವು ನಿಗದಿ ಮಾಡಲಾಗಿದೆ. ಇ – ಖಾತಾ ಮಾಡಿಸಿಕೊಳ್ಳುವುದಕ್ಕೆ ಸಾಕಷ್ಟು ಗೊಂದಲ ಆಗುತ್ತಿದೆ ಎಂದು ಕೆಲವು ಆಸ್ತಿದಾರರು ಆರೋಪ ಮಾಡುತ್ತಿದ್ದಾರೆ. ಈ ನಡುವೆಯೇ ಇ – ಖಾತಾ ಮಾಡಿಸಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ದಿನಾಂಕವನ್ನು ನಿಗದಿ ಮಾಡಿದ್ದಾರೆ.
ಇದನ್ನು ಓದಿರಿ :- ಈ ರೈತರಿಗೆ ಬೆಳೆ ವಿಮೆ ಹಣ ಜಮೆ ತಪ್ಪದೆ ಚೆಕ್ ಮಾಡಿಕೊಳ್ಳಿ https://krushivahini.com/2025/01/23/crop-insurance-amount-status-check/
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಆಸ್ತಿ ವ್ಯಾಪ್ತಿಯಿಂದ ಕೆಲವರು ಹೊರಗೆ ಉಳಿದಿದ್ದು. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಪ್ರಮುಖ ಪಾಲಿಕೆಗಳು ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಅಂದಾಜು 15 ಲಕ್ಷ ಆಸ್ತಿ ಇರುವವರು ಖಾತಾಗಳನ್ನೇ ಮಾಡಿಸಿಕೊಂಡಿಲ್ಲ.
ಇ ಖಾತಾ ಮಾಡಿಸುವುದಕ್ಕೆ ಗಡುವು: ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಜನ ಇ ಖಾತಾ ಮಾಡಿಸಿಕೊಳ್ಳುವುದು ಬಾಕಿ ಉಳಿದಿದೆ. ಬೆಂಗಳೂರಿನಲ್ಲೂ 22 ಲಕ್ಷ ಇ – ಖಾತಾಗಳನ್ನು ಅಪ್‌ಲೋಡ್ ಮಾಡಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಆದರೆ, ಇನ್ನೂ ಲಕ್ಷಾಂತರ ಜನ ಇ ಖಾತಾ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗಲೇ ರಾಜ್ಯ ಸರ್ಕಾರವು ಇ ಖಾತಾ ಪ್ರಕ್ರಿಯೆಯನ್ನು ಮುಗಿಸುವುದಕ್ಕೆ ಗಡುವು ನೀಡಿದೆ.
ಇ – ಖಾತಾ ಎಂದರೇನು??
ಒಂದು ಆಸ್ತಿಯ ಮಾಲೀಕತ್ವವನ್ನು ಡಿಜಿಟಲ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಅದಕ್ಕೆ ಅವರು ಒದಗಿಸಿರುವ ಪ್ರಮಾಣ ಪತ್ರಕ್ಕೆ ಈ ಖಾತಾ ಎಂದು ಕರೆಯುತ್ತಾರೆ.. ಈ ದಾಖಲೆಯಲ್ಲಿ ಆಸ್ತಿಯ ಮಾಲೀಕನ ಫೋಟೋ ಹಾಗೂ ಅವನ ಹೊಲದ ಏರಿಯಾ gps ಕೂಡ ಇರುತ್ತದೆ..
ಇ ಖಾತಾ ಮಾಡಿಸಲು ಬೇಕಾಗುವ ದಾಖಲೆಗಳು
ಇ-ಖಾತಾಗೆ ಅರ್ಜಿ ಸಲ್ಲಿಸಲು, ನಿಮಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:
ನೋಂದಾಯಿತ ಪತ್ರ
ಆಧಾರ್ ಕಾರ್ಡ್
ಆಸ್ತಿ ಫೋಟೋಗಳು
ಎನ್ಕಂಬರೆನ್ಸ್ ಸರ್ಟಿಫಿಕೇಟ್ (EC)
ಬೆಸ್ಕಾಂ ಮೀಟರ್ ಸಂಖ್ಯೆ
ಇ ಖಾತಾ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು??
ಗ್ರಾಮೀಣ ಭಾಗದ ಜನರು ತಮ್ಮ ಹಳ್ಳಿಯಲ್ಲಿರುವ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು..
ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ ..
ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಒತ್ತಿ
https://chat.whatsapp.com/D6bfj7BBl7lLxTGZOcd2Mh