Monsoon crop insurance money deposited :- ನಮಸ್ಕಾರ ಆತ್ಮೀಯ ರೈತ ಬಾಂಧವರೆ ಇಂದಿನ ಲೇಖನದಲ್ಲಿ ಬೆಳೆ ವಿಮೆ ಹಣ ಈ ರೈತರಿಗೆ ಜಮೆಯಾಗಿರುವ ಬಗ್ಗೆ ತಿಳಿಯೋಣ…

ಪ್ರಸಕ್ತ 2024-25ನೇ ಸಾಲಿನ ಬೆಳೆ ವಿಮೆ ಸ್ಥಳೀಯ ವಿಕೋಪದಡಿ ಜಿಲ್ಲೆಯ ಒಟ್ಟು 2,03,720 ರೈತರಿಗೆ 76.94 ಕೋಟಿ ರೂ. ಪರಿಹಾರ ರೈತರ ಬ್ಯಾಂಕ ಖಾತೆಗಳಿಗೆ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ಗಳಿಗೆ ಬೇಟಿ ನೀಡಿ ತಮ್ಮ ಖಾತೆಗೆ ಪರಿಹಾರ ಹಣ ಜಮೆಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://samrakshane.karnataka.gov.in/

ನಂತರ ಮುಂದೆ ಕಾಣುವ ಮುಖಪುಟದಲ್ಲಿ”

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2024-25 ಮತ್ತು ಋತು:kharif

ಎಂದು select ಮಾಡಿ ಮುಂದೆ/Go* ಮೇಲೆ ಕ್ಲಿಕ್ ಮಾಡಿರಿ..

ಮುಂದಿನ ಮುಖಪುಟದಲ್ಲಿ ಫಾರ್ಮರ್ಸ್ ಕಾಲಂ ನಲ್ಲಿ

Check status ” ಮೇಲೆ ಕ್ಲಿಕ್ ಮಾಡಿ..

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ನಂಬರ್/adhaar number ಅಥವಾ ಮೊಬೈಲ್ ನಂಬರ್/mobile number ಇಲ್ಲವಾದಲ್ಲಿ ನಿಮ್ಮ ಪ್ರೊಪೋಸಲ್ ಸಂಖ್ಯೆ/acknowledgement number ಎಂಟ್ರಿ ಮಾಡಿ ಅಲ್ಲಿ ಕೊಟ್ಟಿರುವ capctha ಹಾಕಿ search ಮೇಲೆ ಕ್ಲಿಕ್ ಮಾಡಿ..

ನಂತರ ನಿಮ್ಮ ಬೆಳೆ ವಿಮೆ ಹಣ ಎಷ್ಟು ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಕೆಳಗೆ ನೋಡಬಹುದು..

ಇದನ್ನು ಓದಿರಿ :- ಈ ರೈತರಿಗೆ ಬೆಳೆ ವಿಮೆ ಹಣ ಜಮೆ ತಪ್ಪದೆ ಚೆಕ್ ಮಾಡಿಕೊಳ್ಳಿ 👇🏻🌱https://krushivahini.com/2025/01/23/crop-insurance-amount-status-check/

ಪ್ರಸಕ್ತ ಸಾಲಿನ ಕಳೆದ ಅಗಷ್ಟ ಕೊನೆ ವಾರ ಹಾಗೂ ಸೆಪ್ಟಂಬರ್ ತಿಂಗಳ ಮೊದಲನೆ ವಾರದಲ್ಲಿ ಸುರಿದ ಮಳೆಯಿಂದಾಗಿ ವಿವಿಧ ಬೆಳೆಗಳು ಮತ್ತು ಸೆಪ್ಟಂಬರ್ ಹಾಗೂ ಅಕ್ಟೋಬರ ತಿಂಗಳಿನಲ್ಲಿ ಹೆಸರು, ಉದ್ದು..

ಇದೀಗ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ. ಇದರ ಹೊರತಾಗಿ ಬಾಕಿ ಉಳಿದ ಅರ್ಹ ರೈತರಿಗೆ ಅಂತಿಮ ಪಾವತಿಯನ್ನು ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ನಿರ್ದರಿಸಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ತೊಗರಿ, ಹೆಸರು, ಉದ್ದು, ಸೋಯಾಬೀನ್‌ ಹತ್ತಿ ಹಾಗೂ ಇತರೆ ಬೆಳೆಗಳಿಗೆ ಒಟ್ಟಾರೆ ಜಿಲ್ಲೆಯಲ್ಲಿ 2,04,073 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *