Check crop survey status in mobile :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಹಿಂಗಾರು ಬೆಳೆ ಸಮೀಕ್ಷೆಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ..
ನಿಮ್ಮ ಮೊಬೈಲ್ನಲ್ಲಿ ಬೆಳೆ ಸಮೀಕ್ಷೆಯನ್ನು ಹೇಗೆ ಮಾಡಬೇಕು?? ನಿಮಗೆ ಇದು ಗೊತ್ತಿರಲಿ ರೈತ ಬಾಂಧವರೇ ನಿಮ್ಮ ಬೆಳೆ ಸಮೀಕ್ಷೆ ಆದಲ್ಲಿ ಮಾತ್ರ ನಿಮಗೆ ಹಿಂಗಾರು ಬೆಳೆ ವಿಮೆ ಪರಿಹಾರ ಹಾಗೂ ಬೆಂಬಲ ಬೆಲೆ ಮತ್ತು ಇನ್ನೂ ಇತರ ಸರಕಾರಿ ಸೌಲಭ್ಯಗಳು ಸಿಗುತ್ತದೆ.
ಇದನ್ನು ಓದಿರಿ :- ಈ ರೈತರಿಗೆ ಬೆಳೆ ವಿಮೆ ಹಣ ಜಮೆ ತಪ್ಪದೆ ಚೆಕ್ ಮಾಡಿಕೊಳ್ಳಿ https://krushivahini.com/2025/01/23/crop-insurance-amount-status-check/
ಬೆಳೆ ಸಮೀಕ್ಷೆ ಮಾಡುವ ವಿಧಾನ:-
ರೈತರ ಬೆಳೆ ಸಮೀಕ್ಷೆ 2023-24 ಆ್ಯಪ್ ಅಂದರೆ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಪ್ಲೇ ಸ್ಟೋರ್ ನಲ್ಲಿ ಮೊದಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.csk.farmer23_24.cropsurvey&hl=en_US
ಡೌನ್ಲೋಡ್ ಮಾಡಿಕೊಂಡ ನಂತರ ಅಲ್ಲಿ ತೋರಿಸುವ ಮುಖಪುಟದಲ್ಲಿ ರೈತರ ಬೆಳೆ ಸಮೀಕ್ಷೆ 2024-25 ಕೆಳಗಡೆ ಋತು ಮುಂಗಾರು ಕಾಣಿಸುತ್ತದೆ. ನಂತರ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ ನೊಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು..
ಅದರ ಕೆಳಗಡ ನಿಮಗೆ ಬೆಳೆ ಸಮೀಕ್ಷೆಯಲ್ಲಿ ತೊಂದರೆಯಾದರೆ ಅಲ್ಲಿ ಕಾಣುವ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದು. ರೈತರು ಬೆಳೆ ಸಮೀಕ್ಷೆಯ ಉಚಿತ ಸಹಾವಾಣಿ ನಂಬರ್ 18004253553 ಗೆ ಸಂಪರ್ಕಿಸಬಹುದು..
ಬೆಳೆ ಸಮೀಕ್ಷೆ ಮಾಡದಿದ್ದರೆ ಏನಾಗುತ್ತದೆ??
ರೈತರೇ ನಿಮಗೆ ಈ ಮಾಹಿತಿ ತಿಳಿದಿರಲಿ ಬೆಳೆ ಸಮೀಕ್ಷೆ ಆಗದೆ ಇದ್ದ ಕಾಲಕ್ಕೆ ನಿಮಗೆ ಬರ ಪರಿಹಾರ, ಬೆಳೆ ಹಾನಿ ಪರಿಹಾರ, ಮಳೆ ಹನಿ ಪರಿಹಾರ,ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಹಣ ಪರಿಹಾರ ಕೂಡ ನಿಮಗೆ ಜಮೆ ಯಾಗುವುದಿಲ್ಲ..
ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ತಪ್ಪದೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿ ತಪ್ಪದೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ
ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ
https://chat.whatsapp.com/D6bfj7BBl7lLxTGZOcd2Mh