Installation of RADAR at University of Agricultural sciences dharwad :- ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ RADAR ಸ್ಥಾಪನೆ..

150 ರಿಂದ 175 ಕಿಮೀಗಳಿಗೂ ಹೆಚ್ಚು ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಪರಿಪೂರ್ಣ ಮಾಹಿತಿ

ಬೆಂಗಳೂರು: ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯಲು RADAR ಸಹಕಾರಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ನಾನು 2021ರಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ X-band Doppler RADAR (ಎಕ್ಸ್-ಬ್ಯಾಂಡ್ ಡಾಪ್ಲರ್ ರಾಡಾರ್‌)ನ ತುರ್ತು ಅಗತ್ಯವಿದೆ ಎಂದು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಡಾ ಜಿತೇಂದ್ರ‌ ಸಿಂಗ್ ಅವರಿಗೆ ಪತ್ರ ಬರೆದಿದ್ದೆನು. ನನ್ನ ಮನವಿಗೆ ಸಚಿವರು ಸ್ಪಂದಿಸಿ, ಇದೀಗ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (UAS)ನಲ್ಲಿ RADAR (ರಾಡಾರ್) ಸ್ಥಾಪನೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬ ವಿಷಯ ಹಂಚಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ..

ಈಗಾಗಲೇ ನನ್ನ ಕೋರಿಕೆಯ ಮೇರೆಗೆ ಭಾರತ ಹವಾಮಾನ ಇಲಾಖೆಯ ಕೇಂದ್ರವನ್ನು ಆಗಿನ ಕೇಂದ್ರ ಸಚಿವ ಹರ್ಷವರ್ಧನ ಅವರ ಸಹಕಾರದಿಂದ ಸ್ಥಾಪಿಸಲಾಗಿದ್ದು ಈಗ ಅದರಲ್ಲಿಯೇ X-band Doppler RADAR ನ್ನು ಅಳವಡಿಸಲಾಗುವದು

ಇದು 150 ರಿಂದ 175 ಕಿಮೀಗಳಿಗೂ ಹೆಚ್ಚು ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡುತ್ತದೆ. ಮಳೆಯ ಮುನ್ಸೂಚನೆ, ಒಣಹವೆಯ ಮಾಹಿತಿ, ತಾಪಮಾನದ ಏರಿಳಿತ ಸೇರಿದಂತೆ ಹವಾಮಾನದ ಏರುಪೇರುಗಳ ನಿಖರ ಮಾಹಿತಿ ನೀಡಲಿದೆ.

ರೈತರಿಗೆ ಆಗುವ ಪ್ರಯೋಜನೆಗಳು ಇಲ್ಲಿವೆ 👇🏻🌱🌱ಇದು ರೈತರಿಗೆ ಬೆಳೆ‌ಹಾನಿ, ಬೆಳೆ ನಷ್ಟದಿಂದ ಪಾರುಮಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಧಾರವಾಡ ಪ್ರದೇಶದಲ್ಲಿ ನುರಿತ ಯುವ ವೃತ್ತಿಪರರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ.

ಈ ಮಹತ್ವದ ಯೋಜನೆಯನ್ನು ನಮ್ಮ ಪ್ರದೇಶಕ್ಕೆ ಸಿಗುವಂತೆ‌ ಮಾಡಿದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಿತೇಂದ್ರ ಸಿಂಗ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ .. 🙏🏻

ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಒತ್ತಿ 👇🏻🌱

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *