How to change dead people name in pahani :- ಕರ್ನಾಟಕದಲ್ಲಿ 37 ಲಕ್ಷ ರೈತ ಕುಟುಂಬಗಳ ಜಮೀನಿನ ಪಹಣಿ ಸತ್ತವರ ಹೆಸರಿನಲ್ಲಿಯೇ ಇವೆ! ಎಲ್ಲೆಲ್ಲಿ ಇವೆ ? ವರ್ಗಾವಣೆ ಮಾಡುವುದು ಹೇಗೆ ?
ಕರ್ನಾಟಕದಲ್ಲಿ 37 ಲಕ್ಷ ರೈತ ಕುಟುಂಬಗಳ ಜಮೀನಿನ ಪಹಣಿ ಸತ್ತವರ ಹೆಸರಿನಲ್ಲಿಯೇ ಇವೆ. ಪಹಣಿ ಪತ್ರಗಳಿಲ್ಲದೇ ಸಕಾಲಕ್ಕೆ ಸರಕಾರಿ ಸೌಲಭ್ಯ ಪಡೆಯಲಾಗದೇ ಜನ ಪರದಾಟ ನಡೆಸುತ್ತಿದ್ದಾರೆ. ಜತೆಗೆ ಇದು ಭೂ ಮಾಪಿಯಾಕ್ಕೆ ದಾರಿಯಾಗುವ ಸಾಧ್ಯತೆ ಇದೆ. ಯಾವ ಜಿಲ್ಲೆಯಲ್ಲಿ ಎಷ್ಟು ಜಮೀನುಗಳ ಪಹಣಿ ಬದಲಾವಣೆಯಾಗಿಲ್ಲ? ಈ ಬಗ್ಗೆ ವಿವರ ಇಲ್ಲಿದೆ..
ಇದನ್ನು ಓದಿರಿ :- ಹಿಂಗಾರು ಬೆಳೆ ಸಮೀಕ್ಷೆ ನಿಮ್ಮ ಮೊಬೈಲ್ ನಲ್ಲಿ ಮಾಡುವುದು ಹೇಗೆ ನೀವು ಸಮೀಕ್ಷೆ ಮಾಡದಿದ್ದಲ್ಲಿ ನಿಮಗೆ ಯಾವುದೇ ತರಹದ ಪರಿಹಾರ ಹಣ ಜಮೆಯಾಗೊಲ್ಲ
https://krushivahini.com/2025/01/02/how-to-do-rabi-crop-survey-on-your-mobile/
ಕೊಪ್ಪಳ: ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು ದಶಕಗಳೇ ಕಳೆದಿವೆ. ದುರಂತವೆಂದರೆ ಇವರ ಮಗ ಕೂಡ ಮೃತಪಟ್ಟಿದ್ದಾನೆ. ಪಹಣಿ ಪತ್ರಗಳು ತಂದೆಯ ಹೆಸರಿನಲ್ಲಿದೆ. ಮಗನ ಪತ್ನಿ ಖಾತೆ ವರ್ಗಾವಣೆಗಾಗಿ ತಹಸೀಲ್ದಾರ್ ಕಚೇರಿಗೆ ಹಲವು ಬಾರಿ ಅಲೆದಾಡಿದರೂ ತಂತ್ರಾಂಶ ಸೇರಿ ನಾನಾ ಕಾರಣಗಳಿಂದ ವರ್ಗಾವಣೆಯಾಗಿಲ್ಲ!
ರಾಜ್ಯದ 37,56,583 ಕೃಷಿಕ ಕುಟುಂಬಗಳ ಪಹಣಿ ಪತ್ರಗಳು ಮೃತ ಹಿರಿಯರ ಹೆಸರಿನಲ್ಲಿವೆ. ತಮ್ಮ ಹೆಸರಿನಲ್ಲಿ ಪಹಣಿ ಪತ್ರಗಳಿಲ್ಲದೇ ಸಕಾಲಕ್ಕೆ ಸರಕಾರಿ ಸೌಲಭ್ಯ ಪಡೆಯಲಾಗದೇ ಈ ಕುಟುಂಬಗಳು ಪರದಾಡುತ್ತಿವೆ. ಪೌತಿ ಖಾತೆ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೇ ಇರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕೆಲವೆಡೆ ಕೌಟುಂಬಿಕ ಸಮಸ್ಯೆಯಿಂದಲೂ ಪಹಣಿಗಳು ಪೌತಿಯಾಗಿಲ್ಲ..
ನಿಮ್ಮ ಹೊಲದ ಪಹಣಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ 

https://landrecords.karnataka.gov.in/Service2/rtc.aspx
ತುಮಕೂರು ಜಿಲ್ಲೆಯಲ್ಲಿ ಗರಿಷ್ಠ
ತುಮಕೂರು ಜಿಲ್ಲೆಯಲ್ಲಿ 5,58,581 ಮೃತರ ಹೆಸರಿನಲ್ಲಿ ಪಹಣಿ ಪತ್ರಗಳಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,917 ಮೃತರ ಹೆಸರಿನಲ್ಲಿಪಹಣಿ ಪತ್ರಗಳಿದ್ದು ಕೊನೆಯ ಸ್ಥಾನದಲ್ಲಿದೆ.
ಇವರಿಗೆ ಈ ಸೌಲಭ್ಯಗಳು ಸಿಗುವುದಿಲ್ಲ!
ಕೇಂದ್ರ ಸರಕಾರ ವಿತರಿಸುವ 2,000 ರೂ. ಸಹಾಯ ಧನ, ಬೆಳೆ ಹಾನಿ ಪರಿಹಾರ, ಬ್ಯಾಂಕ್ ಸಾಲ ಸೇರಿ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಪಹಣಿ ಪತ್ರಗಳೇ ಮೂಲಾಧಾರವಾಗಿವೆ. ಮತ್ತೊಂದೆಡೆ ಪೌತಿ ಆಂದೋಲನ ಸಮರ್ಪಕವಾಗಿ ನಡೆಯದೇ ಇರುವುದರಿಂದ ಭೂ ಮಾಪಿಯಾಕ್ಕೆ ದಾರಿಯಾಗುವ ಭೀತಿಯಿದೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಪ್ರಕರಣಗಳು ಎಲ್ಲೆಂದರಲ್ಲಿ ಏರುಮುಖವಾಗಿವೆ..
ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ ..
ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಒತ್ತಿ
https://chat.whatsapp.com/D6bfj7BBl7lLxTGZOcd2Mh