Crop survey is mandatory to get drought relief :- ರಾಜ್ಯದಲ್ಲಿ ಬರಗಾಲ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಆದರೆ ಬರ ಪರಿಹಾರ ಹಣ ಜಮಯಾಗಬೇಕಾದರೆ ಬೆಳೆ ಸಮೀಕ್ಷೆ ಆಗಿರಲೇಬೇಕು. ಹಾಗಾಗಿ ಯಾವ ಯಾವ ರೈತರ ಬೆಳೆ ಸಮೀಕ್ಷೆ ಆಗಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು..

ಹೌದು ರೈತರೇ ಬರಗಾಲ ಪರಿಹಾರ ಜಮೆಯಾಗಬೇಕಾದರೆ ಫ್ರೂಟ್ಸ್ ಐಡಿಯೊಂದಿಗೆ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಆಗಿರಬೇಕು. ಯಾವ ರೈತರ ಬೆಳೆ ಸಮೀಕ್ಷೆಯಾಗಿದೆಯೋ ಆ ರೈತರಿಗಷ್ಟೇ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುವುದು.

ಇದನ್ನು ಓದಿರಿ :- ನಿಮ್ಮ FID ಗೆ ಲಿಂಕ್ ಆದ ಸರ್ವೇ ನಂಬರ್ ಗಳಿಗೆ ಮಾllತ್ರ ಪರಿಹಾರ ಹಣ ಬರುತ್ತದೆ👇🏻🌱💚 ನಿಮ್ಮ ಸರ್ವೇ ನಂಬರ್ ಲಿಂಕ್ ಆಗಿದೆಯೇ ಇಲ್ಲವೋ ಇಲ್ಲಿ ನೋಡಿ 👇🏻🌱 https://krushivahini.com/2024/12/30/check-fid-linked-survey-number-status/

ಹೌದು, ರೈತರು ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳೆಗಳ ಸಮೀಕ್ಷೆ ಮಾಡಲು ಈಗಾಗಲೇ ಹಲವು ಬಾರಿ ಕೃಷಿ ಇಲಾಖೆಯ ವತಿಯಿಂದ ತಿಳಿಸಲಾಗಿತ್ತು.ಆದರೆ ಈಗ ಸಂಬಂಧಿಸಿದ ಅಧಿಕಾರಿಗಳು ಸಹ ಬೆಳೆ ಸಮೀಕ್ಷೆ ಮಾಡಿದ ನಂತರ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುವುದು.

ನಿಮ್ಮ ಬೆಳೆ ಸಮೀಕ್ಷೆಯಾಗಿದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ಬೆಳೆ ಸಮೀಕ್ಷೆ ಮಾಡಿದ ರೈತರು ತಮ್ಮ ಬೆಳೆ ಸಮೀಕ್ಷೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿರಿ🌱👇🏻

https://play.google.com/store/apps/details?id=com.crop.offcskharif_2021

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಬೆಳೆ ದರ್ಶಕ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ರೈತರು ಅಲ್ಲಿ ಕಾಣಿಸುವ ರೈತ ಆಯ್ಕೆ ಮಾಡಿಕೊಳ್ಳಬೇಕು.

ನಂತರ ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಿ ಅಲೋ Allow ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ನೀವು ವರ್ಷ, ಋತು, ಜಿಲ್ಲೆ, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ನಮೂದಿಸಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ನಂತರ ಮಾಲಿಕರ ವಿವರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಹೆಸರು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ರೈತರು ಆರಂಭದಲ್ಲಿ ಅಂದರೆ ಮುಂಗಾರು ಬೆಳೆಗಳಿಗೆ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಲು ತಿಳಿಸಲಾಗಿತ್ತು. ಈಗಾಗಲೇ ಬಹುತೇಕ ರೈತರು ತಮ್ಮ ಮೊಬೈಲ್ ನಲ್ಲೇ ಅವರೇ ಬೆಳೆ ಸಮೀಕ್ಷೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ರೈತರು ಸಂಬಂಧಿಸಿದ ಪ್ರತಿನಿಧಿಗಳಿಂದ ಬೆಳೆ ಸಮೀಕ್ಷೆ ಮಾಡಿಸಿಕೊಂಡಿದ್ದಾರೆ. ಆದರೂ ರೈತರು ಒಮ್ಮೆ ಬೆಳೆ ಸಮೀಕ್ಷೆ ಆಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಉತ್ತಮ.

ಬೆಳೆ ಸಮೀಕ್ಷೆ ಆಧಾರದ ಮೇಲೆ ಬೆಳೆ ಹಾನಿ ಪರಿಹಾರ

ರಾಜ್ಯ ಸರ್ಕಾರವು ಈಗಾಗಲೇ ಬರಗಾಲ ಘೋಷಣೆ ಮಾಡಿದೆ. ಈಗ ಬೆಳೆ ಸಮೀಕ್ಷೆ ಆಧಾರದ ಮೇಲೆ ಇನ್ಪುಟ್ ಸಬ್ಸಿಡಿ ನೇರ ನಗದು ವರ್ಗಾವಣೆ ಮೂಲಕ ರೈತರ ಖಆತೆಗೆ ಹಣ ವರ್ಗಾವಣೆ ಮಾಡಲಾಗುವುದು.

ಹೌದು, ಈಗಾಗಲೇ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಬೇಕು. ಬೆಳೆ ಹಾನಿಯಾದ ಕುರಿತು ಪಾರದರ್ಶಕ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಮುಂಗಾರು ಹಂಗಾಮಿನ ಹಾನಿ ಕ್ಷೇತ್ರವನ್ನು ನೈಜವಾಗಿ ಸಮೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು..

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಇದನ್ನು ಓದಿರಿ :- ಪಿ ಎಂ ಕಿಸಾನ್ ರೈತರ ಅಂತಿಮ ಪಟ್ಟಿ ಬಿಡುಗಡೆ!
ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿಕೊಳ್ಳಿ 👇🏻🌱💚 https://krushivahini.com/2024/12/31/pm-kisan-list-released/

Leave a Reply

Your email address will not be published. Required fields are marked *