How to Amend Ration card :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ದಿನ ಲೇಖನದಲ್ಲಿ ನಾವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ?? ಬೇಕಾದ ಅಗತ್ಯ ದಾಖಲೆಗಳು ಯಾವುವು?? ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬೇಕು?? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ..
ಹೌದು ಡಿ. 31 ರವರೆಗೆ ಆಹಾರ ಇಲಾಖೆ ಅವಕಾಶ ನೀಡಿದ್ದು, ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಸಂಪೂರ್ಣ ವಾದ ಮಾಹಿತಿ ಇಲ್ಲಿದೆ ತಪ್ಪದೆ ನೋಡಿರಿ
ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬೇಕು? 
ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ..
ಬೇಕಾದ ಅಗತ್ಯ ದಾಖಲೆಗಳು ಯಾವುವು?
• ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ಕೊಡಬೇಕು
• ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು..
• ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಏನೇನು ಅಪ್ಡೇಟ್ ಮಾಡಬಹುದು..?
• ವಿಳಾಸ/ಅಡ್ರೆಸ್ಸ್ ಬದಲಾವಣೆ.
• ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯಬಹುದು.
• ಇತ್ತೀಚಿನ ಪೋಟೋ ಮತ್ತು ಬಯೋಮೆಟ್ರಿಕ್.
• ಕುಟುಂಬ ಸದಸ್ಯರ ಹೆಸರು ತಿದ್ದುಪಡಿ.
• ಮನೆ ಯಜಮಾನರ ಬದಲಾವಣೆಯನ್ನು ಕೂಡ ಮಾಡಬಹುದು.
• ಹೊಸ ಸದಸ್ಯರ ಸೇರ್ಪಡೆ ಕೂಡ ನೀವು ಮಾಡಬಹುದು.
ಅನ್ನಭಾಗ್ಯ ಪ್ರತಿ ತಿಂಗಳ ಜಮೆ ಆಗಿರುವ ಸ್ಟೇಟಸ್ ಚೆಕ್ ಮಾಡಿ ನಂತರ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ಪರಿಶೀಲಿಸಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್
(ಜೂಲೈ,ಆಗಸ್ಟ್,ಸೆಪ್ಟೆಂಬರ್, ಅಕ್ಟೋಬರ್) ನಾಲ್ಕು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.
https://ahara.kar.nic.in/status1/status_of_dbt_new.aspx
ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಏನು ಮಾಡಬೇಕು?
ಹಂತ 1:- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ahara.kar.nic.in
ಹಂತ 2:- ಮುಂದಿನ ಪುಟ್ಟ ತೆರೆದ ನಂತರ ಅಲ್ಲಿ ಇ-ಸೇವೆಗಳು ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 3:- ಇ ಪಡಿತರ ಚೀಟಿ ವಿಭಾಗದಲ್ಲಿ ಯುಐಡಿ ಲಿಂಕ್ ಮಾಡಿ ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4:- ಹಂತ 4:- ನೀವು ವಾಸವಾಗಿದ್ದ ಜಿಲ್ಲೆಯ ಮೇಲೆ ಒಂದು ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 5:- UID linking for RC members ಮೇಲೆ ಕ್ಲಿಕ್ ಮಾಡಿ.
ಹಂತ 6:- ಆನಂತರ ಆಧಾರ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದಿನ ಪುಟದಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ GO ಮೇಲೆ ಕ್ಲಿಕ್ ಮಾಡಿ.
ಹಂತ 7:- ನಿಮ್ಮ ಆಧಾರ್ ಕಾರ್ಡ್ ಗ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ GO ಮೇಲೆ ಕ್ಲಿಕ್ ಮಾಡಿ.
ಹಂತ 8:- ಆನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ (RC number) ಹಾಕಿ GO ಮೇಲೆ ಕ್ಲಿಕ್ ಮಾಡಿ.
ಆನಂತರ Aadhar card number link successful ಅಂತ ಬಂದರೆ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಖಚಿತಪಡಿಸಿಕೊಳ್ಳಬಹುದು.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/D6bfj7BBl7lLxTGZOcd2Mh
ಹೊಸ ರೇಷನ್ ಕಾರ್ಡ್ ವಿತರಣೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೊಸ ರೇಷನ್ ಕಾರ್ಡ್ ವಿತರಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.