Increase in the price of silk :- ಬೆಲೆ ಕುಸಿತದಿಂದ ಸೊರಗಿದ್ದ ರೇಷೆ ಕೃಷಿಗೆ ಬಂಪರ್‌ ಲಾಭ ಬಂದಿದೆ. ಪ್ರತಿ ಕೆಜಿ ರೇಷ್ಮೆಗೂಡು 800 ರೂ. ವರೆಗೂ ಮಾರಾಟ ಆಗುತ್ತಿದೆ. ಮಳೆ ಮತ್ತು ಶೀತ ವಾತಾವರಣದಿಂದ ರೇಷ್ಮೆ ಬೆಳೆಯುವುದು ಬಲುಕಷ್ಟ ಎಂಬಂತಾಗಿದೆ. ಇತ್ತ ಶಿಡ್ಲಘಟ್ಟದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕೆ ತಯಾರಿ ನಡೆದಿದೆ..

ಚಿಕ್ಕಬಳ್ಳಾಪುರ: ಕೊರೊನಾ ಕಾಲದ ನಂತರ ಬೆಲೆ ಕುಸಿತದಿಂದ ಸೊರಗಿದ್ದ ರೇಷ್ಮೆ ಕೃಷಿಗೆ ಈಗ ಬೆಲೆ ಏರಿಕೆಯಾಗಿದ್ದು, ರೇಷ್ಮೆ ಬೆಳೆದವರಿಗೆ ಬಂಪರ್‌ ಲಾಭ ಬರುತ್ತಿದೆ. ಪ್ರತಿ ಕೆಜಿ ರೇಷ್ಮೆಗೂಡು 800 ರೂ. ವರೆಗೂ ಮಾರಾಟವಾಗುತ್ತಿದೆ. ಆದರೆ ರೇಷ್ಮೆ ಬೆಳೆಯುವವರ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದೆ..

Silk price increased :- ಯಾವ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗೆ ಎಷ್ಟು ಬೆಲೆ ಇದೆ ತಪ್ಪದೆ ಕೆಳಗಿನ ಲಿಂಕ್ ನಲ್ಲಿ ತಪ್ಪದೆ ಚೆಕ್ ಮಾಡಿಕೊಳ್ಳಿ 👇🏻🌱💚

https://en.krashimitra.com/silk-market-price-karnataka/

ಜಿಲ್ಲೆ ಹಿಂದೆ ಸಿಲ್ಕ್ ಅಂಡ್‌ ಮಿಲ್ಕ್‌ಗೆ ಫೇಮಸ್‌ ಆಗಿತ್ತು. ಜಿಲ್ಲೆಯ ಬಹುಪಾಲು ಮಂದಿ ರೇಷ್ಮೆ ಮತ್ತು ಹೈನೋದ್ಯಮ ಅವಲಂಬಿಸಿದ್ದರು. ಆದರೆ ರೇಷ್ಮೆ ಬೆಲೆ ಕುಸಿತ ಹಾಗೂ ಲಾಭದಾಯಕ ತೋಟಗಾರಿಕೆ ಬೆಳೆಗಳಿಗೆ ಮಾರುಹೋಗಿ ರೇಷ್ಮೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಬೆಲೆ ಕಳೆದ 2 ವರ್ಷದಿಂದ ಹೇಳಿಕೊಳ್ಳುವಂತೆ ಇರಲಿಲ್ಲ. ಆದರೆ ಕಳೆದ 15 ದಿನದಿಂದ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಬಂಪರ್‌ ಬೆಲೆ ಬಂದಿದ್ದು, ರೇಷ್ಮೆ ಬೆಳೆದವರಿಗೆ ಉತ್ತಮ ಆದಾಯ ಸಿಗುತ್ತಿದೆ.

ಜಿಲ್ಲೆಯ ಸುಮಾರು 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದು ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ತಾಲೂಕಿನ ಅತಿ ಹೆಚ್ಚಿನ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ಮಾಡಲಾಗುತ್ತಿದೆ. ರೇಷ್ಮೆಗೂಡಿಗೆ ತಕ್ಕಮಟ್ಟಿಗೆ ಒಳ್ಳೆ ಬೆಲೆ ಇರುವ ಹಿನ್ನೆಲೆ ರೇಷ್ಮೆ ಕೃಷಿಗೆ ಸಾಕಷ್ಟು ಜನರು ಒಲವು ತೋರಿದ್ದರು.

ಇದನ್ನು ಓದಿರಿ :- 💚ಹಳ್ಳಿವಾರು ರೈತರ ಬೆಳೆ ಪರಿಹಾರ ಹಣದ ಪಟ್ಟಿ ಬಿಡುಗಡೆ👇🏻 https://krushivahini.com/2024/12/03/check-bele-parihara-village-list/

ಆದರೆ ಬೆಲೆ ಚೇತರಿಕೆ ಕಾಣದ ಕಾರಣ ಸಾಕಷ್ಟು ಮಂದಿ ಪುಷ್ಪೋದ್ಯಮ ಮತ್ತು ದಾಳಿಂಬೆ ಬೆಳೆಗಳಿಗೆ ಮಾರುಹೋಗಿ ರೇಷ್ಮೆ ಕೃಷಿ ಕೈಬಿಟ್ಟಿದ್ದಾರೆ. ಹೀಗಾಗಿ ದಿನೇದಿನೆ ಹಿಪ್ಪುನೇರಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ರೇಷ್ಮೆ ಕೃಷಿ ಅವಲಂಬಿತರ ಸಂಖ್ಯೆಯೂ ಕಡಿಮೆಯಾಗುತ್ತಿದೆ..

ಕೊರೊನಾ ಕಾಲದಲ್ಲಿ ರೇಷ್ಮೆಗೂಡಿಗೆ ಒಳ್ಳೆ ಬೆಲೆ ಇತ್ತು. ಪ್ರತಿ ಕೆಜಿ 1,000 ರೂ. ಮಾರಾಟವಾದ ದಾಖಲೆ ಇತ್ತು. ಕಳೆದ 2-3 ವರ್ಷದಿಂದ ರೇಷ್ಮೆಗೂಡಿಗೆ ಹೇಳಿಕೊಳ್ಳುವ ಬೆಲೆ ಇರಲಿಲ್ಲ. ಜತೆಗೆ ಹಿಪ್ಪುನೇರಳೆ ಸೊಪ್ಪಿನ ಕೊರತೆ, ಚಾಕಿ ಬೆಲೆ ಏರಿಕೆಯಾಗಿದ್ದರಿಂದ ರೇಷ್ಮೆ ಕೃಷಿ ರೈತರ ಕೈ ಕಚ್ಚುತ್ತಿತ್ತು. ಹೀಗಾಗಿ ಸಾಕಷ್ಟು ಮಂದಿ ರೇಷ್ಮೆ ಕೃಷಿಗೆ ವಿದಾಯ ಹೇಳಿ ಗುಲಾಬಿ, ಸೇವಂತಿ, ದಾಳಿಂಬೆ ಹೀಗೆ ವಾಣಿಜ್ಯ ಬೆಳೆಗಳತ್ತ ವಾಲಿದ್ದರು.

ಬೆಲೆ ಏರಿಕೆ ಏಕೆ?

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ರೇಷ್ಮೆಗೂಡಿಗೆ ಸರಾಸರಿ 550-600 ಹಾಗೂ ಗರಿಷ್ಠ 750-800 ರೂ.ವರೆಗೂ ಇದೆ. ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆಗೂಡಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಒಳ್ಳೆ ಬೆಲೆ ಸಿಗುತ್ತಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ..

ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣಕ್ಕೆ ತಯಾರಿ ನಡೆದಿದೆ. ಈ ಭಾಗದಲ್ಲಿಇನ್ನೂ ರೇಷ್ಮೆ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಹೀಗಾಗಿ ರೈತರನ್ನು ರೇಷ್ಮೆ ಕೃಷಿಗೆ ಸೆಳೆದರೆ ಸಾಕಷ್ಟು ರೈತರು ಬದುಕು ಕಟ್ಟಿಕೊಳ್ಳಲಿದ್ದಾರೆ.

ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಒಳ್ಳೆಯ ಬೆಲೆ ಬಂದಿದೆ..

ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿರೇಷ್ಮೆ ಬೆಳೆಯುತ್ತಿದ್ದು ರೈತರಿಗೆ ಅನುಕೂಲವಾಗಲಿದೆ. ಕೆಲವು ತಾಲೂಕುಗಳಲ್ಲಿಬಿಟ್ಟರೆ ಶಿಡ್ಲಘಟ್ಟ, ಚಿಂತಾಮಣಿ ಮತ್ತು ಗೌರಿಬಿದನೂರು ವ್ಯಾಪ್ತಿಯಲ್ಲೂರೇಷ್ಮೆ ಕೃಷಿ ಹೆಚ್ಚಾಗಿದ್ದು, ಒಳ್ಳೆ ಬೆಲೆ ಸಿಕ್ಕಿರುವುದರಿಂದ ರೇಷ್ಮೆ ಕೃಷಿಗೆ ಒಳ್ಳೆಯ ಆದಾಯ ಬರಲಿದೆ.

ಬೋಜಣ್ಣ, ಉಪನಿರ್ದೇಶಕ, ರೇಷ್ಮೆ ಇಲಾಖೆ

ವರ್ಷಗಳ ನಂತರ ರೇಷ್ಮೆಗೂಡಿನ ಬೆಲೆ ಹೆಚ್ಚಾಗಿದೆ. ಆದರೆ ಶೀತ ವಾತಾವರಣದಿಂದ ರೇಷ್ಮೆ ಕೃಷಿ ಮಾಡುವುದೇ ಕಷ್ಟವಾಗಿದೆ. ಅಲ್ಲದೆ, ಹೆಚ್ಚಿನ ಮಂದಿ ಗುಲಾಬಿ, ದಾಳಿಂಬೆ ಬೆಳೆಗಳಿಗೆ ಮಾರು ಹೋಗಿರುವುದರಿಂದ ಹಿಪ್ಪುನೇರಳೆ ಬೆಳೆಯುವುದೇ ಸವಾಲಾಗಿದೆ. ಒಳ್ಳೆ ಬೆಲೆಯೇನೋ ಇದೆ. ಆದರೆ ರೇಷ್ಮೆಗೂಡು ಬೆಳೆಯುವುದು ಕಷ್ಟವಿದೆ.

ಮಂಜುನಾಥ್‌, ರೇಷ್ಮೆ ಬೆಳೆಗಾರ

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಈ ಲೇಖನವನ್ನು ತಪ್ಪದೆ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಈ ಕೆಳಕಂಡ ಲಿಂಕ್ ಅನ್ನು ತಪ್ಪದೇ ಒತ್ತಿ 👇🏻🙏🏻https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *