Integrated Farming System schemes:- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು “ಸಮಗ್ರ ಕೃಷಿ ಪದ್ಧತಿ ಯೋಜನೆ” ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ..
ವಿಶೇಷ ಸೂಚನೆಗಳು :-
1) ಯೋಜನೆಯ ಉದ್ದೇಶ? ಈ ಯೋಜನೆಯ ಅಡಿಯಲ್ಲಿ ರೈತರಿಗೆ ಏನೇನು ಸೌಲಭ್ಯಗಳು ಸಿಗುತ್ತದೆ?
2) ಯಾವ ಯಾವ ಯೋಜನೆಗಳು ಇದರ ಅಡಿಯಲ್ಲಿ ಬರುತ್ತದೆ?
3) ಎಷ್ಟು ಸಹಾಯಧನ ಸಿಗಲಿದೆ?
4) ಯೋಜನಗೆ ಅರ್ಹರಾಗಲು ಬೇಕಾದ ನಿಯಮಗಳೇನು?
5) ಅರ್ಜಿ ಎಲ್ಲಿ ಸಲ್ಲಿಸಬೇಕು? ಬೇಕಾದ ದಾಖಲಾತಿಗಳೇನು
ಇದನ್ನು ಓದಿರಿ :- 💚 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಏರಿಕೆ👇🏻✨ಯಾವ ಬೆಳೆಗೆ ಎಷ್ಟು ಹಣ ನಿಗದಿ 👇🏻 https://krushivahini.com/2024/10/17/how-to-check-msp-price-hike/
ಯೋಜನೆಯ ವಿವರ :-
2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ದತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ/ ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕೆ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಮುಖ್ಯ ಗುರಿಯಾಗಿರುತ್ತದೆ..
1) ಯೋಜನೆಯ ಉದ್ದೇಶಗಳು:-
* ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ದತಿ ಮಾದರಿಗಳನ್ನು ಸಿದ್ದಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.
* ಉತ್ತಮ ಬೇಸಾಯ ಪದ್ದತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ
ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು.
* ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಲು ಪ್ರೇರೇಪಿಸುವುದು..
2) ಯಾವ ಯಾವ ಯೋಜನೆಗಳು ಇದರ ಅಡಿಯಲ್ಲಿ ಬರುತ್ತದೆ?
* ಸಣ್ಣ ಪ್ರಮಾಣದ ಮೇವಿನ ಬೆಳೆಗೆ ನೆರವು
* ಕೈತೋಟ ನಿರ್ಮಾಣಕ್ಕೆ ನೆರವು
* ಮರ ಆಧಾರಿತ ಕೃಷಿಗೆ ನೆರವು
* ಮೀನು ಸಾಕಾಣಿಕೆ
* ಕೃಷಿ ಹೊಂಡ ನಿರ್ಮಾಣ
* ಹಸು/ಎಮ್ಮೆ ಸಾಕಾಣಿಕೆಗೆ ಅರ್ಥಿಕ ನೆರವು
* ಎರೆಹುಳು ಗೊಬ್ಬರ ತಯಾರಿಕೆ ಘಟಕ
* ಅಜೋಲ್ಲಾ ಘಟಕ
3) ಎಷ್ಟು ಸಹಾಯಧನ ಸಿಗಲಿದೆ?
ಸಣ್ಣ ಪ್ರಮಾಣದ ಕುರಿ/ಮೇಕೆ/ಕೋಳಿ ಹಾಗೂ ಮೇವಿನ ಬೆಳೆಗಳು 10000/-
ಎರೆಹುಳು ಗೊಬ್ಬರ – 8500/-
ಅಜೋಲ್ಲಾ – 1000/-
ಮರ ಆಧಾರಿತ ಕೃಷಿ – 1000/-
ಕೈ ತೋಟ – 1000/-
ಮೀನುಗಾರಿಕೆ – 2500/-
ಹಸು/ಎಮ್ಮೆ 2 ಹೈಬ್ರಿಡ್ ನೇಪಿಯರ್/ ಗಿನಿ ಹುಲ್ಲು ಹಾಗೂ ಅವಶ್ಯಕವಿರುವ ಪಶು ಆಹಾರ 40,000/-
5) ಅರ್ಜಿ ಎಲ್ಲಿ ಸಲ್ಲಿಸಬೇಕು? ಬೇಕಾದ ದಾಖಲಾತಿಗಳೇನು?
ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Documents required for application :- ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :-
ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book.
ಅರ್ಜಿ ನಮೂನೆ(ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತದೆ)
ಅರ್ಜಿದಾರರ ಅಧಾರ್ ಕಾರ್ಡ/Aadhar
ಅರ್ಜಿದಾರರ ಪೋಟೋ/Photo
ಜಮೀನಿನ ಪಹಣಿ/RTC
ಮೊಬೈಲ್ ನಂಬರ್/Mobile number
ಈ ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಬೇಕಾದಲ್ಲಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://raitamitra.karnataka.gov.in/info-4/Scheme++Details/2022-23++Scheme++Details/kn
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻
https://chat.whatsapp.com/D6bfj7BBl7lLxTGZOcd2Mh