Loan facility under various schemes :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ವಿವಿಧ ಯೋಜನೆಗಳ ಅಡಿ ಸಾಲ ಸೌಲಭ್ಯವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ :- ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಪ್ಪದೆ ಎಲ್ಲರಿಗೂ ಶೇರ್ ಮಾಡಿ 🙏🏻

ಹಾವೇರಿ: ಡಾ.ಬಿ.ಆರ್. ಅಂಬೇಡ್ಕರ್, ಕರ್ನಾಟಕ ಆದಿಜಾಂಬವ, ಕರ್ನಾಟಕ ಬೋವಿ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಂದ

2024-25ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಹಾಗೂ ಸಹಾಯಧನ ಸೌಲಭ್ಯಕ್ಕೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

> ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ ಸಹಾಯಧನ ಸೌಲಭ್ಯ ಯೋಜನೆ

ಮಾರ್ಗಸೂಚಿಗಳು :-

1.ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ/ಷೆಡ್ಯೂಲ್ಡ್ ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.

2.ಬ್ಯಾಂಕುಗಳಿಂದ ಸಾಲ ಮಂಜೂರಾತಿ ನೀಡಿದ/ಪಡೆದ ಫಲಾನುಭವಿಗಳಿಗೆ ಆಟೋರಿಕ್ಷ / ಗೂಡ್ಸ್ ವಾಹನ /ಟ್ಯಾಕ್ಸಿ ಖರೀದಿಸಲು ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ ಗರಿಷ್ಠ ರೂ.3.00 ಲಕ್ಷವನ್ನು ನೀಡಲಾಗುವುದು.

3.ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು.

4.ಈ ಯೋಜನೆಯಡಿ ಖರೀದಿಸಲಾಗಿರುವ ವಾಹನವನ್ನು ಫಲಾನುಭವಿಗಳು ಸಾಲದ ಅವಧಿಯಲ್ಲಿ ಇತರರಿಗೆ ಪರಭಾರೆ ಮಾಡಬಾರದು

5.ಫಲಾನುಭವಿಯು ಈ ವಾಹನದಿಂದ ಲಭ್ಯವಾಗುವ ವಾರ್ಷಿಕ ಆದಾಯದ ವಿವರ, ಖರೀದಿ ಮಾಡಿದ ತಕ್ಷಣ ತೆರಿಗೆಯನ್ನು ಪಾವತಿಸಿರುವ ಮತ್ತು ವಿಮೆಯನ್ನು ಪಾವತಿಸಿರುವ ಬಗ್ಗೆ ವಿವರಗಳನ್ನು ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾಕಛೇರಿಗೆ ಮಾಹಿತಿಯನ್ನು ಸಲ್ಲಿಸುವುದು.

6.ಯಾವುದಾದರೂ ವಿಮೆಯನ್ನು ಕ್ಲೇಮ್ ಮಾಡಿದಲ್ಲಿ ಖರೀದಿಸಿದ ವಿವರವನ್ನು ನಿಗಮಕ್ಕೆ ನೀಡತಕ್ಕದ್ದು.

7.ನಿಗಮದ ಸಹಾಯಧನದಿಂದ ಪಡೆದ ವಾಹನ ಮೇಲೆ “ಕೆ ಎಂ ಡಿ ಸಿ ವತಿಯಿಂದ ಸಹಾಯಧನ” ಎಂದು ನಮೂದಿಸತಕ್ಕದ್ದು.

8.ನಿಗಮದಿಂದ ಪಡೆದ ವಾಹನದ ಜೊತೆಯಲ್ಲಿ ಫಲಾನುಭವಿ ಭಾವಚಿತ್ರವನ್ನು ಕಡ್ಡಾಯವಾಗಿ ಜಿಲ್ಲಾ ವ್ಯವಸ್ಥಾಪಕರು ದೃಡೀಕರಿಸಿ ಕಡತದಲ್ಲಿ ಇಡತಕ್ಕದ್ದು.

9.ನಗರ ಪ್ರದೇಶದಲ್ಲಿನ ಪ್ಯಾಸೆಂಜರ್‌ ಆಟೋರಿಕ್ಷಗಳಿಗೆ ಪರ್ಮಿಟ್ ಕಡ್ಡಾಯಗೊಳಿಸಲಾಗಿದೆ.

ಅರ್ಹತೆಗಳು :-

(ಅ) ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.

(ಆ) ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

(ಇ) ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು.

(ಈ) ಎಲ್ಲಾ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ರೂ.6.00 ಲಕ್ಷ ದೊಳಗಿರಬೇಕು.

(ಉ)ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/ಸಾರ್ವಜನಿಕ ವಲಯದ ಘಟಕ ಸರ್ಕಾರದ ಉದ್ಯೋಗಿಯಾಗಿರಬಾರದು

(ಊ)ಅರ್ಜಿದಾರರು ಆರ್.ಟಿ.ಒ.ಯಿಂದ ನೀಡಲ್ಪಟ್ಟ ಸಂಬಂಧಪಟ್ಟ ವಾಹನ ಚಾಲನಾ ಪರವಾಗಿಯನ್ನು ಹೊಂದಿರಬೇಕು

(ಋ)ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.

(ಋ) ಅರ್ಜಿದಾರರು ಕೆ ಎಂ ಡಿ ಸಿ ಯಲ್ಲಿಸುಸ್ತಿದಾರಯಾಗಿರಬಾರದು.

ದಾಖಲೆಗಳು:-

1.ಆನ್‍ಲೈನ್ ಅರ್ಜಿ

2.ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ

3.ಜಾತಿ, ಆದಾಯ ಪ್ರಮಾಣ ಪತ್ರ

4.ಆಧಾರ್ ಕಾರ್ಡ್ ಪ್ರತಿ

5.ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ

6.ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ

7.ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ

ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಗಳ ಸೌಲಭ್ಯಕ್ಕೆ ಪರಿಶಿಷ್ಟ ಜಾತಿಯ ಆಯಾ ಉಪ ಜಾತಿಗೆ ಸೇರಿದ ನಿಗಮಗಳಲ್ಲಿ ಅ.10ರೊಳಗಾಗಿ ಆನ್‌ಲೈನ್ ಮೂಲಕ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಬೇಕು. ಹಿಂದಿನ ವರ್ಷ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *