E-kyc link mandatory for ration card :- ಆತ್ಮೀಯ ಸ್ನೇಹಿತರೆ ಈ ಮೂಲಕ ನಿಮಗೆ ತಿಳಿಸುವುದೇನಂದರೆ ರೇಷನ್ ಕಾರ್ಡ್ ಗೆ E-KYC ಕಡ್ಡಾಯ..
ಬೋಗಸ್ ಕಾರ್ಡ್ ಪತ್ತೆ ಹಾಗು ಪಡಿತರ ಸೋರಿಕೆ ತಡೆಗೆ ಮುಂದಾಗಿರುವ ಆಹಾರ ಇಲಾಖೆ ರೇಶನ್ ಕಾರ್ಡ್ಗೆ ಆಧಾರ್ ದೃಡೀಕರಣ ಪ್ರಕ್ರಿಯೆ ಮರು ಜಾರಿಗೊಳಿಸಿದೆ.
ಈಗಾಗಲೇ ಶೇ.75 ಕಾರ್ಡ್ ದಾರರು E – KYC ಮಾಡಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ.
BPL, ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ E – KYC ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ id ಇಂದಲೇ E – KYC ಮಾಡಿಸಬೇಕು.
ಕಾರ್ಡ್ ಅಲ್ಲಿ ನಮೂದಾಗಿರುವ ಎಲ್ಲ ಸದಸ್ಯರು ಆಧಾರ್ ದೃಡೀಕರಣ ಮಾಡಿಸಬೇಕು.
ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿರುವ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ಹಂತ 1:- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ahara.kar.nic.in
ಹಂತ 2:- ಮುಂದಿನ ಪುಟ ತೆರೆದ ನಂತರ ಅಲ್ಲಿ ಇ-ಸೇವೆಗಳು ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 3:- ಅದರ ನಂತರ ಇ-ಸ್ಥಿತಿ ವಿಭಾಗದಲ್ಲಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
ಹಂತ 4:- ನೀವು ವಾಸವಾಗಿದ್ದ ಜಿಲ್ಲೆಯ ಮೇಲೆ ಒಂದು ಲಿಂಕ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 5:- ಮುಂದಿನ ಪುಟದಲ್ಲಿ ಪಡಿತರ ಚೀಟಿ ವಿವರ (status of ration card) ಮೇಲೆ ಕ್ಲಿಕ್ ಮಾಡಿ.
ಹಂತ 6:- ಮುಂದಿನ ಪುಟದಲ್ಲಿ ವಿತ್ ಓಟಿಪಿ (With OTP) ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 7:- ಆನಂತರ ನಿಮ್ಮ ಆರ್‌ಸಿ ನಂಬರ್ (RC number) ನಮೂದಿಸಿ ಮತ್ತು ಕೆಳಗೆ ನಿಮ್ಮ ಪರಿವಾರದ ಯಾರದಾದರೂ ಹೆಸರು ಸೆಲೆಕ್ಟ್ ಮಾಡಿ. ಅವರ ಹತ್ತಿರ ಮೊಬೈಲ್ ನಂಬರ್ ಇರುವುದು ಕಡ್ಡಾಯ. GO ಮೇಲೆ ಕ್ಲಿಕ್ ಮಾಡಿ.
ಹಂತ 8:- ನೀವು ಸೆಲೆಕ್ಟ್ ಮಾಡಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಹೋಗುತ್ತದೆ ಅದನ್ನು ನಮೂದಿಸಿ GO ಮೇಲೆ ಕ್ಲಿಕ್ ಮಾಡಿ.
ಹಂತ 9:- ಈ ಎಲ್ಲಾ ಹಂತಗಳು ಮುಗಿದ ನಂತರ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಕಾಣುತ್ತದೆ ಅಲ್ಲಿ ekyc status ವಿಭಾಗದಲ್ಲಿ ನಿಮಗೆ yes and no ಆಯ್ಕೆ ಕಾಣುತ್ತದೆ.
Yes ಅಂತ ಬಂದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿದೆ ಅಂತ ಅರ್ಥ.
No ಅಂತ ಬಂದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿಲ್ಲ ಅಂತ ಅರ್ಥ.
ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/D6bfj7BBl7lLxTGZOcd2Mh
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.