Jaminina pahani rtc :- ನಮಸ್ಕಾರ ಪ್ರೀಯ ರೈತ ಭಾಂದವರೇ, ರೈತರು ತಮ್ಮ ದಿನನಿತ್ಯ ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯಗಳಲ್ಲಿ ಜಮೀನಿನ ಪೊಡಿ ಅಥವಾ ಪಹಣಿಯ ಬಗೆಗಿನ ಮಾಹಿತಿಯು ಸಹ ಒಂದು. ರೈತರು ತಮ್ಮ ಜಮೀನಿನ ಜಂಟಿ ಮಾಲೀಕರಗಿದ್ದಾರೆ ಅದನ್ನು ತಿದ್ದುಪಡಿಸಿ ಸ್ವಂತ ಅಥವಾ ಏಕ ಮಾಲೀಕತ್ವವಾಗಿ ಬದಲಾಯಿಸಲು ಅವಕಾಶವಿದೆ.
ಇದನ್ನು ಓದಿರಿ :-🌱ವಾರದ ಅಂತ್ಯದೊಳಗೆ ಮಳೆ ಹಾನಿ ಪರಿಹಾರ ಯಾರಿಗೆ ಎಷ್ಟು ಹಣ ಸಿಗಲಿದೆ👇🏻👇🏻 https://krushivahini.com/2024/08/17/male-hani-parihara-status/
ಜಮೀನಿನ ಜಂಟಿ ಪಹಣಿ ಮಾಡುವುದು ಹೇಗೆ??
ಸಾಮಾನ್ಯವಾಗಿ ರೈತರು ತಮ್ಮ ಜಮೀನನ್ನು ಅಸಮವಾಗಿ ಹಂಚಿಕೊಂಡಿರುತ್ತಾರೆ. ಅವರ ಅನುಸಾರಕ್ಕೆ ತಕ್ಕಂತೆ ತಮ್ಮ ಜಮೀನನ್ನು ಇಟ್ಟುಕೊಂಡಿರುತ್ತಾರೆ. ಅವರು ಹೊಲದ ಅಳತೆ ಮಾಡಿರುವುದಿಲ್ಲ ಮತ್ತು ಪ್ರತಿ ರೈತರ ವಿಸ್ತೀರ್ಣಕ್ಕೆ
ತಕ್ಕಂತೆ ಹೊಲದ ನಕ್ಷೆ ಸಹ ಇರುವುದಿಲ್ಲ.
ಇದು ರೈತರು ತಮ್ಮ ಜಮೀನನ್ನು ಇನ್ನೊಬ್ಬರಿಗೆ ಮಾರುವ ಸಮಯದಲ್ಲಿ ಅಥವಾ ದಾನವಾಗಿ ನೀಡುವ ಸಮಯದಲ್ಲಿ ಅನೇಕ ಗೊಂದಲಗಳನ್ನು ಉಂಟು ಮಾಡಿ ಜಗಳಕ್ಕೆ ಮುಖ್ಯ ಕಾರಣವಾಗುತ್ತದೆ.
ತಮ್ಮ ಪಹಣಿಯನ್ನು ಸರಿಪಡಿಸಿಕೊಂಡು ಅದರಿಂದ ಏಕಮಾಲೀಕತ್ವದ ಪಹಣಿ ಪಡೆದುಕೊಳ್ಳುವುದಕ್ಕೆ ತತ್ಕಾಲ್ ಪೋಡಿ ಎಂದು ಕರೆಯುತ್ತಾರೆ. ಅಂದರೆ ನೀವು ಒಕ್ಕಲುತನ ಅಥವಾ ವ್ಯವಸಾಯ ಮಾಡುತ್ತಿರುವ ಜಮೀನಿನ ಭಾಗಗಳನ್ನು ಅಳತೆ ಮಾಡಿ, ಆ ಹೊಲದ ಸಂಪೂರ್ಣ ನಕ್ಷೆಯನ್ನು ರಚಿಸಿ ಅದರಿಂದ ಹೊಸ ಏಕಮಾಲೀಕತ್ವದ ಪಹಣಿಯನ್ನು ಪಡೆದುಕೊಳ್ಳಲಾಗುತ್ತದೆ.
ಇಂತಹ ಜಂಟಿ ಪಹಣಿಯು ಸರ್ವೇ ನಂಬರ್ನಲ್ಲಿ ಹಿಸ್ಸಾ ಸಂಖ್ಯೆಯನ್ನು ಹೊಂದಿರುತ್ತವೆ. ಎಲ್ಲಾ ಹಿಸ್ಸಾ ನಂಬರಗಳಿಗೂ ಒಂದೇ ಪಹಣಿ ಇರುತ್ತದೆ. ರೈತರು ತಮ್ಮ ಹೆಸರಿನಲ್ಲಿ ಪ್ರತ್ಯೇಕವಾದ ಪಹಣಿ ಬೇಕೆಂದರೆ ಅವರು ತತ್ಕಾಲ್ ಪೋಡಿಯ ಮುಖಾಂತರ ಪ್ರತ್ಯೇಕವಾದ ಪಹಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
ಈ ತತ್ಕಾಲ್ ಫೋಡಿಯಲ್ಲಿ ಅರ್ಜಿ ಸಲ್ಲಿಸಲು ದಾಖಲಾತಿಗಳು ಮತ್ತು ಮುಖ್ಯವಾದ ಕಾಗದ ಪತ್ರಗಳ ಅವಶ್ಯಕತೆ ಇರುತ್ತದೆ. ಈಗ ನಾವು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ಬಗ್ಗೆ ತಿಳಿದುಕೊಳ್ಳೋಣ:
• ಸರ್ವೆ ಇಲಾಖೆಯವರು ತಾವು ಜಮೀನಿನ ಸರ್ವೆ ಮಾಡಿದ ನಂತರ ತಾವು ನೀಡುವ,
• 11 ಇ ನಕ್ಷೆ
• ಆಧಾರ್ ಕಾರ್ಡ
• ಸಾಕ್ಷಿದಾರರ ಹೆಸರು
• ವಂಶಾವಳಿ ಪ್ರಮಾಣ ಪತ್ರಗಳು ಬೇಕಾಗುತ್ತವೆ.
ಅರ್ಜಿದಾರರು ಅಥವಾ ರೈತರು ತಮ್ಮ ಜಂಟಿ ಪಹಣಿಯ ಖಾತೆಯಿಂದ ಉಳಿದ ಎಲ್ಲಾ ಅರ್ಜಿದಾರರ ಹೆಸರನ್ನು ತೆಗೆಯಬೇಕಾದರೆ ಅಥವಾ ರದ್ದುಗೊಳಿಸಬೇಕಾದರೆ ಪಹಣಿಯಲ್ಲಿರುವ ಎಲ್ಲ ಅರ್ಜಿದಾರರ ಕೊಡುವ ಒಪ್ಪಿಗೆ ಪತ್ರವು ಕಡ್ಡಾಯವಾಗಿರುತ್ತದೆ. ಜಂಟಿ ಮಾಲೀಕತ್ವ ಜಮೀನಿನ ಪ್ರತ್ಯೇಕವಾದ ಹಕ್ಕು ಪತ್ರವನ್ನು ಪಡೆಯಲು ಹೊಲದ ಪಹಣಿ ಮತ್ತು ಫಾರ್ಮ್ ನಂ.10 ಕಡ್ಡಾಯವಾಗಿ ಬೇಕಾಗುತ್ತದೆ..
ತಪ್ಪದೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ https://chat.whatsapp.com/D6bfj7BBl7lLxTGZOcd2Mh