Opportunity to lodge crop survey objections :- ಬೆಳೆ ಸಮೀಕ್ಷೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ರಾಣೆಬೆನ್ನೂರ: ತಾಲೂಕಿನ ಬೆಳೆ ಸಮೀಕ್ಷೆ ಬಗ್ಗೆ ಸಂಗ್ರಹಿಸಲಾದ ಮಾಹಿತಿಯಲ್ಲಿ ರೈತರಿಗೆ ಏನಾದರೂ ಸಮಸ್ಯೆಗಳಿದ್ದರೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಆ. 18ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದ್ದಾರೆ.
ಇದನ್ನು ಓದಿರಿ :-💚ಬೆಳೆ ಹಾನಿ ಪರಿಹಾರ ಅನರ್ಹ ರೈತರ ಪಟ್ಟಿ 👇🏻🌱 https://krushivahini.com/2024/08/13/crop-loss-compensation-ineligible-farmers-list/
ಬೆಳೆ ಮತ್ತು ವಿಸ್ತೀರ್ಣದ ಮಾಹಿತಿ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ರೈತರು ಆಕ್ಷೇಪಣೆ ಸಲ್ಲಿಸಬಹುದು. ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆ ವಿಮೆ, ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ, ನೇರ ನಗದು ವರ್ಗಾವಣೆ ಹಾಗೂ ಇತರ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಲಾಗುತ್ತದೆ.
ರೈತರು ಬೆಳೆ ಸಮೀಕ್ಷೆಯಿಂದ ವಂಚಿತರಾಗದೆ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಯ ಮಾಹಿತಿಯನ್ನು ಬೆಳೆ ದರ್ಶಕ ಆ್ಯಪ್ ಮೂಲಕ ತಿಳಿಯಬಹುದು. ಇದರಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅಥವಾ ವ್ಯತ್ಯಾಸಗಳಿದ್ದರೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದ್ದಾರೆ.
ಇದನ್ನು ಓದಿರಿ :- ಬರ ಪರಿಹಾರ ಪಟ್ಟಿ ತಪ್ಪದೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ🌱💚👇🏻 https://krushivahini.com/2024/08/14/bele-parihara-village-wise-list-check/
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೀವು ಮಾಡಿರುವಂತಹ ಜಿಪಿಆರ್ಎಸ್(GPRS) ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ
https://play.google.com/store/apps/details?id=com.crop.offcskharif_2021
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ .. ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್(GPRS) ಮಾಡಿರುವಂತದ್ದು ಅಪ್ರುವಲ್ ಪಡೆದುಕೊಂಡಿದೆ ಅಥವಾ ತಿರಸ್ಕೃತಗೊಂಡಿದೆ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ…
ಒಂದು ವೇಳೆ ನಿಮ್ಮ ಜಿಪಿಆರ್ಎಸ್ ಸ್ಟೇಟಸ್ ನಲ್ಲಿ ತಿರಸ್ಕೃತಗೊಂಡಿದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳಲು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ…
ಬೆಳೆ ಸಮೀಕ್ಷೆ ಮಾಡುವ ವಿಧಾನ:-
ರೈತರ ಬೆಳೆ ಸಮೀಕ್ಷೆ 2023-24 ಆ್ಯಪ್ ಅಂದರೆ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಪ್ಲೇ ಸ್ಟೋರ್ ನಲ್ಲಿ ಮೊದಲು ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.csk.farmer23_24.cropsurvey
ಡೌನ್ಲೋಡ್ ಮಾಡಿಕೊಂಡ ನಂತರ ಅಲ್ಲಿ ತೋರಿಸುವ ಮುಖಪುಟದಲ್ಲಿ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ ನೊಂದಾಯಿಸಿಕೊಂಡು.. ತಮ್ಮ ಜಮೀನಿನ ವಿವರಗಳನ್ನು ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು.
ಆನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು..
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿ ತಪ್ಪದೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻
https://chat.whatsapp.com/D6bfj7BBl7lLxTGZOcd2Mh