Rain alert in Karnataka :- ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಮುಂದಿನ 5 ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದನ್ನು ಓದಿರಿ:- ಈ ಪಟ್ಟಿಯಲ್ಲಿ ಇರುವ ರೈತರ ಬಿ ಪಿ ಎಲ್ ಕಾರ್ಡ್ ಸದ್ಧ್ಯದಲ್ಲೇ ಕೊಡಲಾಗುವುದು.. ತಪ್ಪದೆ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ👇🏻💚 https://krushivahini.com/2024/07/23/1-73-lakh-new-bpl-card-issuing-soon/
ಈಗಾಗಲೇ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಮಳೆರಾಯ ಅಬ್ಬರಿಸಿ ಬೊಬ್ಬರೆದು ಅವಾಂತಾರಗಳನ್ನೇ ಸೃಷ್ಟಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹಾಗೆಯೇ ಚಾಮರಾಜನಗರ, ಬೆಳಗಾವಿ ಸೇರಿದ ಹಲವೆಡೆ ಭಾರೀ ಮಳೆ ಸುರಿದಿರುವ ವರದಿಯಾಗಿದೆ.
ಬುಧವಾರ (ಜುಲೈ 24) ಉತ್ತರ ಕನ್ನಡದಲ್ಲಿ 20 ಸೆಂಟಿ ಮೀಟರ್, ಬೆಳಗಾವಿಯಲ್ಲಿ 7 ಸೆಂಟಿ ಮೀಟರ್, ಶಿವಮೊಗ್ಗದಲ್ಲಿ 11 ಸೆಂಟಿ ಮೀಟರ್ ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಅರಬ್ಬಿ ಸಮುದ್ರದ ಪೂರ್ವ ದಿಕ್ಕಿನಲ್ಲಿ ಟ್ರಫ್ ಸಂಚಾರ ಚುರುಕುಗೊಂಡಿದ್ದು, ಜುಲೈ 23ರಿಂದ 26ರವರೆಗೆ ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಮುಂಗಾರು ಮತ್ತಷ್ಟು ಚುರು ಪಡೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಿಗೆ ಇಂದು (ಜುಲೈ 23) ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜುಲೈ 24 ರಿಂದ 26ರವರೆಗೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 24ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನು ಓದಿರಿ :– 🌱ಪಿ ಎಂ ಕಿಸಾನ್ 18 ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ!!👇🏻
➡️ ಪಿ ಎಂ ಕಿಸಾನ್ ಹಣದಲ್ಲಿ ಹೆಚ್ಚಳ ತಪ್ಪದೆ ನಿಮ್ಮ ಸ್ಟೇಟಸ್ ಅನ್ನು ಮೊಬೈಲ್ ನಲ್ಲೆ cಹೆಕ್ ಮಾಡಿಕೊಳ್ಳಿ 👇🏻https://krushivahini.com/2024/07/22/pm-kisan-beneficiary-list/
ಜುಲೈ 26ರವರೆಗೆ ಭಾರೀ ಮಳೆ ಹಿನ್ನೆಲೆ ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಜುಲೈ 23ರಿಂದ ಜುಲೈ 27ರ ವರೆಗೆ ಸಾಧಾರಣ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಜುಲೈ ಎಲ್ಲಿಲ್ಲಿ ಎಷ್ಟು ಮಳೆ?
1.ಮಂಗಳೂರು – 30.8 ಮಿ.ಮೀಟರ್
2. ಕಾರವಾರ – 15 ಮಿ.ಮೀಟರ್
3. ಶಿರಾಲಿ – 32.6 ಮಿ.ಮೀಟರ್
4. ಹೊನ್ನಾವರ – 107.0 ಮಿ.ಮೀಟರ್
5. ಪಣಂಬೂರು – 21.0 ಮಿ.ಮೀಟರ್
6. ಆಗುಂಬೆ – 99.5 ಮಿ.ಮೀಟರ್
7. ಮೂಡಿಗೆರೆ – 51.0 ಮಿ.ಮೀಟರ್
8. ಬೆಳಗಾವಿ – 13.0 ಮಿ.ಮೀಟರ್
9. ಬೆಂಗಳೂರು – 5.4 ಮಿ.ಮೀಟರ್
10. ಬೆಂಗಳೂರು ಗ್ರಾಮಾಂತರ- 5.5 ಮಿ.ಮೀಟರ್
11. ಹಾಸನ – 9.0 ಮಿ.ಮೀಟರ್
12. ಗದಗ – 3.5 ಮಿ.ಮೀಟರ್
13. ಚಿತ್ರದುರ್ಗ – 2.4 ಮಿ.ಮೀಟರ್
14. ಹಾವೇರಿ – 42.ಮಿ.ಮೀಟರ್
15. ದೊಡ್ಡಬಳ್ಳಾಪುರ – 1.5 ಮಿ.ಮೀ ಇನ್ನು ಇಂದು (ಜುಲೈ 24) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..
ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻.. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ👇🏻👇🏻
https://chat.whatsapp.com/D6bfj7BBl7lLxTGZOcd2Mh