Crop insurance how to apply online :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ..
ಬೆಳೆ ವಿಮೆ ಮಾಡಿಸಲು ಬೇಕಾದ ಅಗತ್ಯ ದಾಖಲೆಗಳೇನು?? ಯಾವ ಬೆಳೆಗಳಿಗೆ ವಿಮೆ ಬರುತ್ತದೆ?? ಇಲ್ಲಿದೆ ಮಹತ್ವದ ಮಾಹಿತಿ ತಪ್ಪದೆ ತಿಳಿಯಿರಿ??
ರೈತರಿಗೆ ರಾಜ್ಯದಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆಯುಮೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ತಪ್ಪದೇ ಎಲ್ಲಾ ರೈತರು ಸರ್ಕಾರದಿಂದ ಸಿಗುವ ಈ ಸೌಲಭ್ಯವನ್ನು ಉಪಯೋಗ ಮಾಡಿಕೊಳ್ಳಬೇಕು.
ಬೆಳೆ ವಿಮೆಯನ್ನು ಕಟ್ಟಲು ಕೊನೆಯ ದಿನಾಂಕ ಯಾವುದು? ಈ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಿ.
ಮುಸುಕಿನ ಜೋಳ, ನವಣೆ, ಸಜ್ಜಿ, ಹೆಸರು, ತೊಗರಿ, ಎಳ್ಳು, ಸೂರ್ಯಕಾಂತಿ, ಭತ್ತ, ಮತ್ತು ಶೇಂಗಾ, ರೈತರು ಈ ಮೇಲೆ ಕಾಣಿಸಿದ ಬೆಳೆಗಳಿಗೆ ಜುಲೈ 31ರ ಒಳಗಾಗಿ ವಿಮೆ ಮಾಡಿಸಿದರೆ ಮಾತ್ರ ನಿಮಗೆ ಹಣ ಬರುತ್ತದೆ.
* ಬೆಳೆ ವಿಮೆ ಅಡಿಯಲ್ಲಿ ಬರುವ ಬೆಳೆಗಳು??
ದಾಳಿಂಬೆ ದ್ರಾಕ್ಷಿ ಮಾವು ಹಾಗೂ ಹಸಿಮೆಣಸಿನ ಕಾಯಿ ಬೆಳೆಗಳಿಗೆ ವಿಮೆಯನ್ನು ಪಾವತಿ ಮಾಡಲು ಜುಲೈ 31ರ ಒಳಗಾಗಿ ಅವಕಾಶವನ್ನು ಕಲ್ಪಿಸಿದ್ದಾರೆ ರೈತರು ಬೇಗ ಮಾಡಿಸಿಕೊಂಡು ನಿಮ್ಮ ಬೆಳೆಗಳಿಗೆ ಹಣವನ್ನು ಪಡೆಯಿರಿ.
* ಬೆಳೆ ವಿಮೆ ಮಾಡಿಸಲು ಬೇಕಾದ ಅಗತ್ಯ ದಾಖಲೆಗಳು??
ಮೊದಲಿಗೆ ಅರ್ಜಿದಾರರ ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಅರ್ಜಿದಾರರ ಜಮೀನು ಪಹಣಿ /ಉತಾರ /RTC
* ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ರೈತರು ನಿಮ್ಮ ಹತ್ತಿರದ ಗ್ರಾಮಒನ್, ಕರ್ನಾಟಕಒನ್, ಅಥವಾ ಸಿ ಎಸ್ ಸಿ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.
ನಿಮ್ಮ ಹೊಲದ ಸರ್ವೆ ನಂಬರ್ ನಮೂದಿಸಿ ನಿಮಗೆ ಎಷ್ಟು ಬೆಳೆ ವಿಮೆ ಹಣ ಬಂದಿದೆ ಇಲ್ಲಿ ನೋಡಿ??
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೊಲದ ಸರ್ವೆ ನಂಬರನ್ನು ನಮೂದಿಸಿ ಬೆಳೆ ವಿಮೆ ಏನೇನೋ ಪರಿಸ್ಥಿತಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
https://samrakshane.karnataka.gov.in/HomePages/AppliOnSurveyNos.aspx
ಈ ಮೇಲ್ಕಂಡ ಲಿಂಕ್ ಅನ್ನು ಒತ್ತಿದ ಮೇಲೆ ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ನಿಮ್ಮ ಸರ್ವೇ ನಂಬರ್ ಅನ್ನು ನಮೂದಿಸಿ ಗೆಟ್ ರಿಪೋರ್ಟ್ ಅಥವಾ ಡಿಸ್ಪ್ಲೇ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೊಲದ ಸರ್ವೆ ನಂಬರಗೆ ಎಷ್ಟು ಹಣ ಬರುತ್ತದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.
https://samrakshane.karnataka.gov.in/HomePages/frmKnowYourInsCompany.aspx
ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://samrakshane.karnataka.gov.in/Premium/CheckStatusMain_aadhaar.aspx
ಹಾಗಾಗಿ ನಿಮ್ಮ ಖಾತೆಗಳಿಗೂ ಜಮೆ ಆಗಿರಬಹುದು ಆದ ಕಾರಣ ಮೇಲೆ ತಿಳಿಸಿದಂತಹ ಸ್ಟೆಪ್ಸ್ ಗಳನ್ನು ಅನುಸರಿಸಿ ನಿಮಗೂ ಜಮೆಯಾಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.
ತಪ್ಪದೇ ಈ ಮೇಲಿನ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ದಿನನಿತ್ಯದ ಹೊಸ ಹೊಸ ವಿಷಯಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ..
https://chat.whatsapp.com/D6bfj7BBl7lLxTGZOcd2Mh