Aadhaar link is mandatory for farmers’ pumpsets :- ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಕಡ್ಡಾಯ
ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ಸಂಖ್ಯೆಯನ್ನು ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಅನ್ನದಾತರ ವಿದ್ಯುತ್ ಸಬ್ಸಿಡಿಗೆ ಕತ್ತರಿ?
ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗೆ ‘ಲಿಂಕ್’ ಮಾಡುವ ಪ್ರಕ್ರಿಯೆಗೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಸದ್ದಿಲ್ಲದೆ ಚಾಲನೆ ನೀಡಿವೆ. ಬಹುತೇಕ ಸಂಖ್ಯೆಗೆ ಒಂದಕ್ಕೊಂದು ತಾಳೆ ಆಗದಿರುವುದು ಕಂಡುಬಂದಿದ್ದು ಮುಂಬರುವ ದಿನಗಳಲ್ಲಿ ಸಬ್ಸಿಡಿಗೆ ಕತ್ತರಿ ಬೀಳುವ ಆತಂಕ ರೈತರನ್ನು ಕಾಡತೊಡಗಿದೆ.
ಸದ್ಯಕ್ಕೆ ಜೋಡಣೆ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ. ಮುಗಿದ ನಂತರ ತಾಳೆಯಾಗದ ರೈತರ ಸಬ್ಸಿಡಿಗೆ ಕತ್ತರಿ ಬೀಳುವ ಸಾಧ್ಯತೆಯೂ ಇವೆ. ಗ್ಯಾರಂಟಿ ಸೇರಿ ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆದಾರ್ ಜೋಡಣೆ ಮಾಡಲಾಗಿದೆ.
ಇದನ್ನು ಓದಿರಿ :- 3000 ಬೆಳೆ ಪರಿಹಾರ ಹಣ ಜಮೆಯಾಗಿದೆ ➡️ ನಿಮ್ಮ ಖಾತೆಗೆ ಎಷ್ಟು ಹಣ ವರ್ಗಾವಣೆಯಾಗಿದೆ ತಪ್ಪದೇ ಚೆಕ್ ಮಾಡಿಕೊಳ್ಳಿ 🌱👇🏻https://krushivahini.com/2024/07/11/input-subsidy-for-crop-loss-status-check/
ಜೋಡಣೆ ಉದ್ದೇಶವೇನು?
* ಸರ್ಕಾರ ಪ್ರತಿ ವರ್ಷ ಎಸ್ಕಾಂಗಳಿಗೆ ನೀಡುತ್ತಿರುವ ಸಬ್ಸಿಡಿಗೂ ಹಾಗೂ ವಿದ್ಯುತ್ ಬಳಕೆಗೂ ಹೋಲಿಕೆ ಆಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು
* ರಾಜ್ಯದಲ್ಲಿರುವ ಅಕ್ರಮ ಪಂಪ್ ಸೆಟ್ ಗಳಿಗೆ ಕಡಿವಾಣ ಹಾಕುವುದು
* ಸಬ್ಸಿಡಿ ನಿಜವಾದ ಫಲಾನುಭವಿಗಳಿಗೆ ಹೋಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು
* ಉಚಿತ ವಿದ್ಯುತ್ ಪಡೆಯುತ್ತಿರುವ ಶ್ರೀಮಂತರನ್ನು ಪತ್ತೆ ಹಚ್ಚುವುದು.
ನಾವು ಈ ಮೇಲೆ ನೀಡಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನಿಮ್ಮ ಹತ್ತಿರ ಇರುವಂತ KEB ಗೆ ಹೋಗಿ ನೀವು ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ನೀವು ನಿಮ್ಮ ಕೃಷಿ ಪಂಪ ಸೆಟ್ ಗಳಿಗೆಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ..
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ಮಾಹಿತಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻
https://chat.whatsapp.com/D6bfj7BBl7lLxTGZOcd2Mh