Drought Relief Payment :- ತರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಬೆಳೆ ಪರಿಹಾರಕ್ಕಾಗಿ ಅರ್ಜಿ ಹಾಕಿದ ರೈತರಿಗೆ ತಪ್ಪದೇ ನೋಡಿಕೊಳ್ಳಬೇಕಾದ ಹೊಸ ರೂಲ್ಸ್ ಜಾರಿ!

ಬೆಳೆ ಪರಿಹಾರದ ಬಗ್ಗೆ ಬೆಳ್ಳಂಬೆಳಿಗ್ಗೆ ಸಚಿವರಿಂದ ಹೊಸ ಮಾಹಿತಿ ತಪ್ಪದೇ ಬರ ಪರಿಹಾರಕ್ಕಾಗಿ ಅರ್ಜಿ ಹಾಕಿದವರು ತಿಳಿದುಕೊಳ್ಳಲೇಬೇಕಾದ ವಿಷಯ ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಪ್ಪದೆ ಎಲ್ಲರಿಗೂ ಶೇರ್ ಮಾಡಿ 🙏🏻

(State govt drought relief) ಈಗಾಗಲೇ ರಾಜ್ಯ ಸರ್ಕಾರ 243 ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿದ್ದು ಕೃಷಿ ಹಾನಿ ಉಂಟಾದ ರೈತರಿಗೆ ‌ಬೆಳೆ ಹಾನಿ ಪರಿಹಾರ ನೀಡಲು ಕೂಡ ಸರಕಾರ ಮುಂದಾಗಿದೆ.‌ ಈಗಾಗಲೇ ರಾಜ್ಯ ಸರ್ಕಾರದ ನಷ್ಟ ‌ಉಂಟಾದ ರೈತರಿಗೆ ಎರಡು ಸಾವಿರ ರೂ ವನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಅದೇ ರೀತಿ ಸರ್ಕಾರವು ಸಣ್ಣ ಪ್ರಮಾಣದ ಕೃಷಿ ಮಾಡುವ ರೈತರಿಗೂ ಸಿಹಿಸುದ್ದಿ ಯನ್ನು ನೀಡಿದೆ. ಹೌದು ಕೇಂದ್ರ ಸರ್ಕಾರದಿಂದ ಬಂದ ಅನುದಾನದ ಜೊತೆಗೆ ರಾಜ್ಯ ಸರ್ಕಾರವು ರೂ 500 ಕೋಟಿ ಸೇರಿಸಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬರ ಪರಿಹಾರ (Drought Relief) ನೀಡಲು ಮುಂದಾಗಿದೆ. ಸಣ್ಣ ಕೃಷಿ ಮಾಡುವ ರೈತರಿಗೆ ರೂ 3,000 ಹಣ ಜಮಾ ಮಾಡುವ ಪ್ರಕ್ರಿಯೆ ಕೂಡ ಆರಂಭ ಮಾಡಿದೆ.

ಇದನ್ನು ಓದಿರಿ :- ಬೆಳೆ ಸಮೀಕ್ಷೆ ಸ್ಥಿತಿ-2024*
➡️ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ 👇🏻
https://krushivahini.com/2024/07/03/check-crop-survey-details/

2023-24ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ಯನ್ನು ನೊಂದಾಯಿಸಿ ಕೊಂಡಿದ್ದು , ಅಂತಿಮವಾಗಿ ಬಾಕಿ ಇರುವ 130 ಕೋಟಿ ರೂ.ಗಳನ್ನು ಶೀಘ್ರ ವಿತರಣೆ ಮಾಡುವ ಬಗ್ಗೆ ಸಚಿವರಾದ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಾವಣೆ ಮಾಡಿದ್ದರು. ಇದರಲ್ಲಿ ಇದುವರೆಗೆ 16,053 ರೈತರಿಗೆ 7.93 ಕೋಟಿ ರೂ. ಪರಿಹಾರ ಇತ್ಯರ್ಥ ಪಡಿಸಲಾಗಿದೆ ಎಂದರು.

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ?? 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ನಿಮಗೆ ಎಷ್ಟು ಬರ ಪರಿಹಾರ ಹಣ ಬಂದಿದೆ, ತಪ್ಪದೆ ಇಲ್ಲಿ ಚೆಕ್ ಮಾಡಿಕೊಳ್ಳಿ 🌱👇🏻

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..

ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರೈತರಿಗೆ ಬೆಳೆ ಹಾನಿ ಪರಿಹಾರ ಸಿಗಲು ಈ ಕೆಳಗಿನ ಅಂಶಗಳು ಕಡ್ಡಾಯ 👇🏻

ರೈತರಿಗೆ ಯಾವುದೇ ಕೃಷಿ ಸಂಬಂಧಿತವಾದ ಸೌಲಭ್ಯ ಸಿಗಬೇಕಾದರೆ ರೈತರು ತಮ್ಮ ದಾಖಲೆ ಗಳನ್ನು ಸರಿ ಪಡಿಸುವುದು ಅಗತ್ಯ ವಾಗಿದೆ.‌ ಹೌದು ಆಧಾರ್ ಅಪ್ಡೇಟ್, ಇ ಕೆ ವೈ ಸಿ ,ಪಹಣಿ ಗೆ ಆಧಾರ್ ಲಿಂಕ್ ಹಾಗೂ ಎಫ್ ಐ ಡಿ ನೊಂದಣಿ ಇತ್ಯಾದಿ ಕಡ್ಡಾಯ ವಾಗಿ ಮಾಡಲೇಬೇಕು.

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಈ ಲೇಖನವನ್ನು ತಪ್ಪದೆ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಈ ಕೆಳಕಂಡ ಲಿಂಕ್ ಅನ್ನು ತಪ್ಪದೇ ಒತ್ತಿ 👇🏻🙏🏻https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *