Drought relief fund status check :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ರಾಜ್ಯ ಸರ್ಕಾರದಿಂದ ಜನವರಿ 5ನೇ ತಾರೀಕು 2024 ರಂದು ರಾಜ್ಯ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು. ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿರುವ ಎಲ್ಲಾ ಮಾಹಿತಿಯ ಪ್ರಕಾರ ರೈತರ ಖಾತೆಗೆ ಹಣವನ್ನು ಜಮೆ ಮಾಡಲಾಗಿದೆ.

ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ನೀವು ನೀಡಿರುವ ಎಲ್ಲಾ ಮಾಹಿತಿಯು ಸರಿ ಇದೆ ಇಲ್ಲವೋ ಎಂಬುದನ್ನು ಈ ಲೇ.ಖನದಲ್ಲಿ ತಿಳಿಯಿರಿ.

ನೀವು ನಿಮ್ಮ ಹೊಲದ ಎಲ್ಲಾ ದಾಖಲೆಗಳನ್ನು ಮತ್ತು ಬ್ಯಾಂಕ್ ವಿವರಗಳನ್ನು ತಿಳಿಯಲು ಫ್ರೂಟ್ಸ್ ತಂತ್ರಾಂಶ ಬಳಸಿಕೊಂಡು ಚೆಕ್ ಮಾಡಿಕೊಳ್ಳಿ.

ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಜಾಲತಾಣದ ಅಡಿಯಲ್ಲಿ ನೀವು ನಿಮ್ಮ ಜಿಲ್ಲೆಯ ಎಲ್ಲಾ ವಿವರವನ್ನು ಹಾಕಿ ಕೆಳಗೆ ಕೊಟ್ಟಿರುವ ಎಲ್ಲಾ ಹಂತಗಳನ್ನು ತಪ್ಪದೇ ಪಾಲಿಸಿ, ಹಳ್ಳಿಯವರು ರೈತರ ಪಟ್ಟಿ ಬಿಡುಗಡೆಯಾಗಿದೆ ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ.

ಅದೇ ರೀತಿ ಆಗಿ ನಿಮಗೆ ಕೆಳಗೆ ತೋರಿಸಿದ ಪಟ್ಟಿ ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿತ ಗೊಂಡ ರೈತರ ಪಟ್ಟಿಯಾಗಿರುತ್ತದೆ ಅದೇ ರೀತಿ ಅದರ ಮೂಲಕ ರೈತರ ಖಾತೆಗೆ ಡಿಬಿಟಿ ಮುಖಾಂತರ ಹಣವನ್ನು ಹಾಕಲಾಗುತ್ತದೆ.

ನಿಮ್ಮ ಹೆಸರನ್ನು ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ!👇🏻

➡️ ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/FarmerDeclarationReport.aspx

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು. ವೀಕ್ಷಿಸು ಇದರ ಮೇಲೆ ಕ್ಲಿಕ್ ಮಾಡಿರಿ..

ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಅಂತಹ ರೈತರಿಗೆ ಯಾವುದೇ ಕಾರಣಗಳಿಲ್ಲದೆ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ.

ಹಂತ 2) :- ಅದೇ ರೀತಿಯಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬರ ಪರಿಹಾರ ಹಣದ ಬಗ್ಗೆ ಮಾಹಿತಿ ಪಡೆಯಿರಿ.. ಈಗಾಗಲೇ ನಿಮಗೆ ತಿಳಿದ ಹಾಗೆ ಫ್ರೂಟ್ಸ್ ಐಡಿಯನ್ನು ಎಲ್ಲ ರೈತರಿಗೆ ಕಡ್ಡಾಯವಾಗಿ ಮಾಡಿದೆ. ಕೇವಲ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದರ ಮೂಲಕ ನಿಮ್ಮ ಫ್ರೆಂಡ್ಸ್ ಐ ಡಿ ಜನರೇಟ್ ಆಗಿದಿಯೋ ಇಲ್ಲವೋ ನಿಮ್ಮ Data ಸ್ಥಿತಿಯನ್ನು ಅಲ್ಲೇ ತಿಳಿಯಿರಿ…

Step 1:- ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ಸರ್ಚ(search) ಬಟನ್ ಮೇಲೆ ಒತ್ತಬೇಕು..

Step 2:- ಅದೇ ರೀತಿಯಾಗಿ ನಿಮಗೆ ಕೆಳಗೆ ತೋರಿಸುವ ಎಫ್ ಐ ಡಿ ನಂಬರ್ ಇದ್ದರೆ ಮಾತ್ರ ನಿಮ್ಮ data ಸ್ಥಿತಿ ಸರಿಯಾಗಿರುತ್ತದೆ, ನಿಮ್ಮ ಎಫ್ ಐ ಡಿ ತಪ್ಪಿದ್ದಲ್ಲಿ ನಿಮಗೆ ರೆಕಾರ್ಡ್ ನಾಟ್ ಫೌಂಡ್(Record not found) ಎಂದು ಬರುತ್ತದೆ.. ಅಂತಹ ರೈತರಿಗೆ ಬರ ಪರಿಹಾರ ಹಣ ಜಮಯ ಆಗುವುದಿಲ್ಲ ನೀವು ತಪ್ಪದೆ ನಿಮ್ಮ ಹತ್ತಿರದಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಬೇಟಿಯಾಗಿ ನಿಮ್ಮ ಅಗತ್ಯ ದಾಖಲೆಗಳ ಮೂಲಕ ನಿಮ್ಮ ಫ್ರೂಟ್ಸ್ ಐಡಿ ಯನ್ನು ಜನರೇಟ್ ಮಾಡಿಕೊಳ್ಳಿ ನಂತರ ನಿಮಗೆ ಬರ ಪರಿಹಾರ ಹಣವನ್ನು ಹಾಕಲಾಗುತ್ತದೆ.

ನಿಮ್ಮ ಆಧಾರ್ ಬ್ಯಾಂಕ್ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಇಲ್ಲಿದೆ ನೋಡಿರಿ 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್

https://uidai.gov.in/en/

ನಂತರ ಮುಂದಿನ ಮುಖಪುಟದಲ್ಲಿ ಕಾಣುವ ಹಾಗೆ ಆಧಾರ್ ಸರ್ವಿಸಸ್(Adhaar services) ಅದರ ಮೇಲೆ ಕ್ಲಿಕ್ ಮಾಡಿ..

ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಲಿಂಕಿಂಗ್ ಸ್ಟೇಟಸ್ (Adhaar Linking status) ಮೇಲೆ ಕ್ಲಿಕ್ ಮಾಡಿ

ನಂತರ ಅದೇ ಮುಖಪುಟದಲ್ಲಿ ಕೆಲಗೆ ಕಾಣುವ ಹಾಗೆ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status) ಮೇಲೆ ಕ್ಲಿಕ್ ಮಾಡಿ..

ನಂತರ ಅಲ್ಲಿ ಲಾಗಿನ್ ಕೇಳುತ್ತದೆ ನಿಮ್ಮ ಆಧಾರ್ ಸಂಖ್ಯೆ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಮತ್ತು ನಿಮ್ಮ ಮೊಬೈಲ್ ಬಗ್ಗೆ ಬಂದಿರುವ ಓಟಿಪಿಯನ್ನು ಹಾಕಿ ಲಾಗಿನ್ ಆಗಿ..

ನಂತರ ಅದೇ ಬ್ಯಾಂಕ್ ಸಿಡಿಂಗ್ ಸ್ಟೇಟಸ್ ಮೇಲೆ ಇನ್ನೊಮ್ಮೆ ಒತ್ತಿ.. ನಂತರ ಅಲ್ಲಿ ನಿಮ್ಮ ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನಿಮಗೆ ಬರ ಪರಿಹಾರದ ಹಣ ಆಗುತ್ತದೆ..

ಬರ ಪರಿಹಾರದ ಹಣ ಇನ್ನೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.

ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.

ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.

ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..

ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ.

ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿಯಲ್ಲಿ ಜಮೆ ಆಗಿರುವ ಹಣದ ಸ್ಟೇಟಸ್ ಅನ್ನು ಈ ಕೆಳಕಂಡಂತೆ ನೀವು ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು..

ಅದೇ ರೀತಿಯಾಗಿ ರೈತಶಕ್ತಿ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಡೀಸೆಲ್ ಸಬ್ಸಿಡಿ ಯೋಜನೆಯ ಅಡಿ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ನೋಡಬಹುದು..

ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ಅಲ್ಲಿ ನೋಡಬಹುದು..

ನಾವು ಈ ಮೇಲೆ ಕಾಣಿಸಿದ ಎಲ್ಲ ಮಾಹಿತಿಯು ಸರಿಯಾಗಿದ್ದು ಸರ್ಕಾರದ ಅಡಿ ಬರುವ ಎಲ್ಲಾ ಯೋಜನೆಗಳ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಸರಳವಾಗಿ ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *