Farmer FID number status check :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ನೀವು ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೊಲದ ವಿಸ್ತೀರ್ಣವನ್ನು ದಾಖಲಿಸಿದ್ದೀರಿ. ಅದೇ ರೀತಿಯಾಗಿ ನಿಮಗೆ ಬರ ಪರಿಹಾರ ಹಣ ಬರುವುದನ್ನು ಆಧಾರ್ ನಂಬರ್ ಮೂಲಕ ನೀವೇ ಚೆಕ್ ಮಾಡಿಕೊಳ್ಳಿ..🙏🏻, (ನಿಮ್ಮ ಹೊಲದ ಎಷ್ಟು ಸರ್ವೇ ನಂಬರ್ ಗಳು ಇದರಲ್ಲಿ ದಾಖಲೆಯಾಗಿ ನೋಡಿ👇🏻)..

ಈ ಲಿಂಕ್ ಮೂಲಕ ಆಧಾರ್ ನಂಬರ್ ನಮೂದಿಸಿ ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ..

ಬೆಂಗಳೂರು: ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ರಾಜ್ಯದ ರೈತರು ಬಿತ್ತಿದ ಬೆಳೆ ಹಾನಿಯಾಗಿದೆ. ರಾಜ್ಯದ 223 ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಬರ ಪರಿಹಾರ ನೀಡಲು ಕೇಂದ್ರ ಅಧ್ಯಾಯನ ತಂಡ‌ ಬಂದು ಹೋಗಿದ್ದು, ರೈತರಿಗೆ ಪರಿಹಾರ ನೀಡಬೇಕಿದೆ. ಪರಿಹಾರ ಪಡೆಯಲು ಅರ್ಹರ ರೈತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಲಿಸ್ಟ್ ನಲ್ಲಿ‌ ಹೆಸರು ಇರುವವರಿಗೆ ಮಾತ್ರ ಪರಿಹಾರ ಸಿಗಲಿದೆ. FRUITS ತಂತ್ರಾಂಶ ಮೂಲಕ ಅರ್ಹ ರೈತರ ಹೆಸರು ಪ್ರಕಟಿಸಿದೆ. ನಿಮ್ಮ (ರೈತರ) ಹೆಸರು ಈ ಲಿಸ್ಟ್ ನಲ್ಲಿ ಇರುವುದನ್ನು ಚೆಕ್ ಮಾಡಿಕೊಳ್ಳಿ..

ರೈತರ ಅರ್ಹ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ನೀವು ಅರ್ಹರಿದ್ದೀರಾ ನಿಮ್ಮ ಆಧಾರ್ ಸಂಖ್ಯೆಯನ್ನು ನಮ್ಮ ದೇಶದ ಮೇಲೆ ನಿಮ್ಮ ಹೆಸರಲ್ಲಿ ಕಂಡರೆ ನಿಮಗೆ ಬರ ಪರಿಹಾರ ಹಣ ಬರುತ್ತದೆ..

ಆಧಾರ್ ನಂಬರ್ ಹಾಕಿ ನಿಮ್ಮ FID ಸ್ಟೇಟಸ್ ತಿಳಿದುಕೊಳ್ಳಿ👇🏻 ನಿಮ್ಮ ಎಫ್ ಐ ಡಿ ಜನರೇಟ್ ಆಗಿದೆಯೋ ಇಲ್ಲವೋ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

2023-24 ನೇ ಸಾಲಿನಲ್ಲಿ ಬರ ಪರಿಹಾರ ಪಡೆಯಲು ಪ್ರತಿ ತಾಲ್ಲೂಕಿನ ರೈತರು ತಮ್ಮ ಎಲ್ಲ ಪಹಣಿಗಳನ್ನು FRUITS ತಂತ್ರಾಂಶಕ್ಕೆ ನೋಂದಾಯಿಸಿ FID (Farmer ID) ಪಡೆಯಬೇಕಾಗಿರುತ್ತದೆ. ಇದಲ್ಲದೆ FID ಯು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, PMKISAN ಯೋಜನೆಗಳಿಗೂ ಹಾಗೂ ಕೃಷಿ, ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ರೈತರು ಸೌಲಭ್ಯಗಳನ್ನು ಪಡೆಯಲು ಅತ್ಯವಶ್ಯಕವಾಗಿರುತ್ತದೆ.

ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ??

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ) ನಿಮಗೆ ಸಿಗಲಿದೆ.

➡️ 🙏🏻 ನಿಮ್ಮ ಹೊಲದ ಎಷ್ಟು ಸರ್ವೇ ನಂಬರಗಳು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಯಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻

➡️ ಅದೇ ರೀತಿಯಾಗಿ ನೀವು ಅಲ್ಲಿ ಕಾಣುವ (registration status) ಮೇಲೆ ಕ್ಲಿಕ್ ಮಾಡಿದರೆ

ನಿಮ್ಮ ಹೊಲದ ಇಷ್ಟು ಸರ್ವೇ ನಂಬರ್ ಗಳು ಅಲ್ಲಿ ನೋಂದಣಿ ಯಾಗಿವೆ ಎಂಬ ಮಾಹಿತಿ ನಿಮಗೆ ಸಿಗುತ್ತದೆ.

ಒಂದು ವೇಳೆ ನಿಮ್ಮ ಹೊಲ 7 ಎಕರೆ ಇದ್ದಲ್ಲಿ ನೀವು ಕೇವಲ ಎರಡು ಎಕರೆ ನೊಂದಣಿ ಮಾಡಿದರೆ ನಿಮಗೆ ಬರ ಪರಿಹಾರವಾಗಿ ಎರಡು ಎಕರೆಗೆ ಸೀಮಿತವಾದ ಹಣ ಅಷ್ಟೇ ಬರುತ್ತದೆ. ಹಾಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೀವು ತಪ್ಪದೆ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೋಂದಣಿ ಮಾಡಬೇಕು.

ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

➡️ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ.

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

ಹೊಸದಾಗಿ ID ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ರೈತರು ತಮ್ಮ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸುವುದು.

ಬರ ಪರಿಹಾರವನ್ನು ಪಡೆಯೋದಕ್ಕೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ ಫ್ರೂಟ್ ಐಡಿಯಲ್ಲಿ ರೈತರು ಸೂಕ್ತ ಮಾಹಿತಿ ದಾಖಲಿಸಬೇಕಿದೆ. ಈ ಮಾಹಿತಿಯಂತೆ, ನಿಮಗೆ ನೀಡಿರುವಂತ ಫ್ರೂಟ್ ಐಡಿಯ ಆಧಾರದಲ್ಲಿ, ಅದರಲ್ಲಿ ನಮೂದಿತವಾಗಿರುವ ಸರ್ವೆ ನಂಬರ್ ಗಳ ಆಧಾರ್ ಲಿಂಕ್ ಆಧಾರದ ಮೇಲೆ ಬರ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಹೆಸರು ಲೀಸ್ಟ್ ನಲ್ಲಿ ಇದ್ರೇ ನೀವು ಬರ ಪರಿಹಾರ ಪಡೆಯಲು ಅರ್ಹರಿದ್ದೀರಿ. ನಿಮಗೆ ರಾಜ್ಯ ಸರ್ಕಾರ ನೀಡುವಂತ ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಲಿದೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಆಧಾರ್ ನಂಬರ್ ಹಾಕಿ ನಿಮಗೆ ಬರ ಪರಿಹಾರ ಬರುತ್ತದೆ ಇಲ್ಲವೋ ಚೆಕ್ ಮಾಡಿಕೊಳ್ಳಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲಿಸ್ಟ್ ನಲ್ಲಿ ಇದ್ದವರಿಗೆ ಬರ ಪರಿಹಾರ ಬರುವುದಿಲ್ಲ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ..

Leave a Reply

Your email address will not be published. Required fields are marked *