Aadhar card link to rtc status :- ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಈಗಾಗಲೇ ಕರ್ನಾಟಕ ಸರ್ಕಾರ ಮೂರು ತಿಂಗಳಿಂದ ಸತತವಾಗಿ ರೈತರಿಗೆ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಪತ್ರ ಲಿಂಕ್ ಮಾಡಲು ತಿಳಿಸಿದೆ ಆದರೆ ಪಹಣಿ ಪತ್ರ ಇನ್ನೂ ಆಧಾರ್ ಕಾರ್ಡ್ ಗೆ ಬಹಳಷ್ಟು ಜನರದು ಲಿಂಕ್ ಆಗಿಲ್ಲ ಆದರೆ ಇದರಿಂದ ಆಗುವ ಪರಿಣಾಮವೇನೆಂದರೆ ಸರ್ಕಾರದಿಂದ ಸಿಗುವ ಬಹುದೊಡ್ಡ ಸೌಲಭ್ಯಗಳು ಸಾಮಾನ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಅದರಲ್ಲಿಯೂ ಪ್ರಮುಖವಾಗಿ ರೈತರು ಈ ಕೆಲಸ ತಮ್ಮ ಪ್ರಥಮ ಕೆಲಸವಾಗಿ ಮಾಡಿಕೊಂಡು ಹೋಗಬೇಕು.

ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ??

ಆನ್ನೈನ್ ಮೂಲಕ ನಿಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾ‌ರ್ ಕಾರ್ಡ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಆದರೆ ಅದರಲ್ಲಿಯೂ ಸಹ ಪೆಂಡಿಂಗ್ ತೋರಿಸುತ್ತೇವೆ ಹೀಗಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ನಿಮ್ಮ ಗ್ರಾಮ ಪಂಚಾಯಿತಿಗೆ ಅಡಿಯಲ್ಲಿ ಬರುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒಂದು ಲಾಗಿನ್ ಮತ್ತು ಯೂಸರ್ ನ್ನು ನೀಡಿರುತ್ತಾರೆ. ಇದರ ಸಹಾಯದಿಂದ ನಿಮ್ಮ ಗ್ರಾಮ ಪಂಚಾಯಿತಿ ನೀವು ಲಿಂಕ್ ಮಾಡಿಸಬಹುದು..

ಒಂದು ವೇಳೆ ಈಗಾಗಲೇ ನೀವು ಲಿಂಕ್ ಮಾಡಿಸಿದ್ದರೆ ಯಾರಿಗೂ ಕೇಳುವುದು ಮತ್ತು ಲಿಂಕ್ ಮಾಡಿಸುವುದು ಅವಶ್ಯಕತೆ ಇಲ್ಲ ಒಂದು ವೇಳೆ ಆನ್ಸೆನ್ ನಲ್ಲಿ ನೀವು ಲಿಂಕ್ ಮಾಡಿದರೆ ಮತ್ತೊಂದು ಬಾರಿ ಚೆಕ್ ಮಾಡಿಸಬೇಕು ಏಕೆಂದರೆ ನಾವು ಕಳೆದ ಬಾರಿ ಲೇಖನದಲ್ಲಿ ತಿಳಿಸಿದಂತೆ ಆನ್ಸೆನ್ ಮೂಲಕ ಲಿಂಕ್ ಮಾಡುವುದು ಬಹಳಷ್ಟು ಜನರದು ಪೆಂಡಿಂಗ್ ಬರುತ್ತವೆ ಹೀಗಾಗಿ ನೀವು ಲಿಂಕ್ ಮಾಡಿದ್ದೀರಿ ಖಚಿತಪಡಿಸಿಕೊಳ್ಳಲು ಒಂದು ಬಾರಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಚೆಕ್ ಮಾಡಿಸಿ ಅದೇ ರೀತಿಯಾಗಿ ಸಂಪೂರ್ಣವಾಗಿ ಉಚಿತವಾಗಿದ್ದು ಮತ್ತು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸವಹಿಸಲಾಗಿದೆ.

ಹಂತ 1: https://landrecords.karnataka.gov.in/service42

ಮೇಲೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಈಗಾಗಲೇ ನಿಮ್ಮ ಪಹಣಿ ಪತ್ರಕ್ಕೆ ಆಧಾ‌ರ್ ಕಾರ್ಡ್ ಲಿಂಕ್ ಆಗಿದ್ದರೆ ಇಲ್ಲಿ ನಿಮಗೆ ತೋರಿಸುತ್ತದೆ.

ಹಂತ 2: ಇಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಾದ ನಂತರ ಕೆಳಗಡೆ ಕ್ಯಾಪ್ಟ ಕೋಡ್ ನೀಡಿರುತ್ತಾರೆ ಅದನ್ನು ಸಹ ನಮೂದಿಸಿ ನಂತರ ನಿಮ್ಮ ಮೊಬೈಲ್ ಒಟಿಪಿ ಬರುತ್ತದೆ ಓಟಿಪಿಯನ್ನು ಇದರಲ್ಲಿ ಹಾಕಬೇಕು ಒಟಿಪಿ ಹಾಕಿದ ನಂತರ ಮುಂದೆ ಕ್ಲಿಕ್ ಮಾಡಿ.

ಹಂತ 3: ನಂತರ ಈಗ ನಿಮ್ಮ ಆಧಾರ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ಇಂಗ್ಲಿಷ್ ಭಾಷೆಯಲ್ಲಿ ಟೈಪ್ ಮಾಡಲು ಕೇಳುತ್ತದೆ ಅದನ್ನು ಸರಿಯಾಗಿ ಟೈಪ್ ಮಾಡಿಕೊಳ್ಳಿ ಟೈಪ್ ಆದ

ನಂತರ ಕೆಳಗಡೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಈಗ ನಿಮಗೆ ಆಧಾರ ಸಂಖ್ಯೆಗೆ ಓಟಿಪಿ ಹೋಗುತ್ತದೆ ಅಲ್ಲಿ ನೀವು ಓಟಿಪಿ ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಹೋಗುತ್ತದೆ ಒಟಿಪಿಯನ್ನ ಅಲ್ಲಿ ಎಂಟರ್ ಮಾಡಿ ಎಂಟರ್ ಮಾಡಿದ ನಂತರ ಸಬ್ಬಿಟ್ ಮಾಡಬೇಕು ನಂತರ ಸರ್ವೆ ನಂಬ‌ರ್ ಆಯ್ಕೆ ಮಾಡಬೇಕು ಆಯ್ಕೆ ಮಾಡಿ ಈ ರೀತಿಯಾಗಿ ಲಿಂಕ್ ಮಾಡಬೇಕು ಒಂದು ವೇಳೆ ಈಗಾಗಲೇ ಲಿಂಕ್ ಆಗಿದ್ದರೆ ನಿಮಗೆ ಅಲ್ಲಿ ಈಗಾಗಲೇ ನಿಮ್ಮ ಪಹಣಿ ಪತ್ರಕ್ಕೆ ಈ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ತೋರಿಸುತ್ತದೆ.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಪಹಣಿ ಗೆ ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಪಹಣಿ ಗೆ ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡುವ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *