Government providing 3000 As crop loss compensation :- ಬೆಂಗಳೂರು: ರಾಜ್ಯದ 17.09 ಲಕ್ಷ ಸಣ್ಣ, ಅತಿ ಸಣ್ಣ ರೈತ

ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ ₹2,800 ರಿಂದ ₹3,000 ಸಾವಿರ ನೀಡಲು ಸರ್ಕಾರ ನಿರ್ಧರಿಸಿದೆ.

ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಿ, ನಿರ್ಣಯ ಕೈಗೊಳ್ಳಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯ ಬಳಿಕ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ರೈತರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.

‘ಮಳೆ ಆಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 7 ಲಕ್ಷ ರೈತರಿಗೆ ಲಾಭವಾಗಲಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಈ ಪರಿಹಾರ ವಿತರಿಸಲಾಗುವುದು’ ಎಂದರು.

‘ಕೇಂದ್ರದಿಂದ ಎನ್‌ಡಿಆರ್‌ಎಫ್ ಪರಿಹಾರ ₹3,454 ಕೋಟಿ ಬಂದಿತ್ತು. 27.50 ಲಕ್ಷ ರೈತರಿಗೆ ₹2,451 ಕೋಟಿಯನ್ನು ಮೇ ತಿಂಗಳ ಮೊದಲ ವಾರದಲ್ಲಿಯೇ ವಿತರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಉಳಿದ ಹಣ ಮತ್ತು ರಾಜ್ಯ ಸರ್ಕಾರದಿಂದ ₹272 ಕೋಟಿ ಸೇರಿಸಿ ನಷ್ಟ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಪರಿಹಾರ ಪಾವತಿಸಲು ಸಾಧ್ಯವಾಗುವಂತೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ’ ಎಂದರು.

‘ಮುಂಗಾರು ಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಅವಲೋಕನ ನಡೆಸಲಾಗಿದೆ. ವಾಡಿಕೆಯಂತೆ ಪೂರ್ವ ಮುಂಗಾರು ಮಳೆ 115 ಮಿಮೀ ಆಗುತ್ತದೆ. ಆದರೆ, ಈ ಬಾರಿ 150 ಮಿಮೀ ಮಳೆ ಆಗಿದೆ. ಕಳೆದ ವರ್ಷ ಶೇ 71ರಷ್ಟು ಮಳೆ ಕೊರತೆ ಆಗಿತ್ತು. ಈ ಬಾರಿ ಒಂದು ಭಾಗಕ್ಕೆ ಸೀಮಿತವಾಗದೆ, ಎಲ್ಲ ಭಾಗಗಳಲ್ಲೂ ಮಳೆ ಬಂದಿದೆ.ಐದು ಜಿಲ್ಲೆಗಳಲ್ಲಿ ವಾಡಿಕೆ, ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮತ್ತು ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದರು.

‘ಕೃಷಿ ವಿಮೆ ಮೂಲಕವೂ ರೈತರಿಗೆ ಈ ಬಾರಿ ಅತೀ ಹೆಚ್ಚು ₹1,654 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ ₹130 ಕೋಟಿ ಪರಿಹಾರ ನೀಡಲು ಬಾಕಿ ಇದೆ’ ಎಂದರು.

‘ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮಳೆ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ಶನಿವಾರದಿಂದ ವಿಭಾಗವಾರು ಸಭೆ ನಡೆಸುತ್ತೇನೆ’ ಎಂದೂ ಕೃಷ್ಣ ಬೈರೇಗೌಡ ತಿಳಿಸಿದರು.

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಬರುತ್ತದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

💚ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..

ಸರ್ಕಾರದ ಯೋಜನೆಗಳಲ್ಲಿ ನಿಮಗೆ ಎಷ್ಟು ಹಣ ಯಾವ ಯಾವ ಯೋಜನೆಗಳಿಂದ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ನೀವು ಇಲ್ಲಿ ಚೆಕ್ ಮಾಡಿಕೊಳ್ಳಬಹುದು..

ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿರಿ 👇🏻

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.

ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.

ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.

ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..

ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ.

ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿಯಲ್ಲಿ ಜಮೆ ಆಗಿರುವ ಹಣದ ಸ್ಟೇಟಸ್ ಅನ್ನು ಈ ಕೆಳಕಂಡಂತೆ ನೀವು ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು.

ಅದೇ ರೀತಿಯಾಗಿ ರೈತಶಕ್ತಿ ಯೋಜನೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಡೀಸೆಲ್ ಸಬ್ಸಿಡಿ ಯೋಜನೆಯ ಅಡಿ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ನೋಡಬಹುದು.

ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬ ಸ್ಟೇಟಸ್ ಅನ್ನು ಅಲ್ಲಿ ನೋಡಬಹುದು..

ನಾವು ಈ ಮೇಲೆ ಕಾಣಿಸಿದ ಎಲ್ಲ ಮಾಹಿತಿಯು ಸರಿಯಾಗಿದ್ದು ಸರ್ಕಾರದ ಅಡಿ ಬರುವ ಎಲ್ಲಾ ಯೋಜನೆಗಳ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಸರಳವಾಗಿ ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *