Drought relief :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ಈಗಾಗಲೇ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಆದರೆ ಯಾವ ಬೆಳೆಗೆ ಎಷ್ಟು ಬರ ಪರಿಹಾರ ಹಣ ನಿಗದಿಯಾಗಿದೆ ಇಲ್ಲಿ ನೋಡಿ

ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆ‌ರ್.ಎಫ್/ ಎಸ್.ಡಿ.ಆ‌ರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿಪಡಿಸಿರುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ದಯವಿಟ್ಟು ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಬರ ಪರಿಹಾರ ಹಣ ಯಾವ ಬೆಳೆಗೆ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಿ

ಹೌದು ನಿಮಗೆ ತಿಳಿದ ಹಾಗೆ ರಾಜ್ಯದಲ್ಲಿ ತೀವ್ರ ಬರಗಾಲದಿಂದ 5,11,208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಸರ್ವೆ ಕಾರ್ಯ ನಡೆಸಿ ಒಟ್ಟು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ ಎಂದು ಗುರುತಿಸಲಾಗಿದೆ.

ನಿಮ್ಮ ಊರಿನಲ್ಲಿ ಈ ಜನರಿಗೆ ಬರ ಪರಿಹಾರ ಹಣ ಬರುತ್ತದೆ?? ಇಲ್ಲಿ ಚೆಕ್ ಮಾಡಿಕೊಳ್ಳಿ

ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಜಾಲತಾಣದ ಅಡಿಯಲ್ಲಿ ನೀವು ನಿಮ್ಮ ಜಿಲ್ಲೆಯ ಎಲ್ಲಾ ವಿವರವನ್ನು ಹಾಕಿ ಕೆಳಗೆ ಕೊಟ್ಟಿರುವ ಎಲ್ಲಾ ಹಂತಗಳನ್ನು ತಪ್ಪದೇ ಪಾಲಿಸಿ, ಹಳ್ಳಿವಾರು ರೈತರ ಪಟ್ಟಿ ಬಿಡುಗಡೆಯಾಗಿದೆ ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ.

ನಿಮ್ಮ ಹೆಸರನ್ನು ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ!👇🏻

➡️ ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/FarmerDeclarationReport.aspx

ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು. ವೀಕ್ಷಿಸು ಇದರ ಮೇಲೆ ಕ್ಲಿಕ್ ಮಾಡಿರಿ..

ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಅಂತಹ ರೈತರಿಗೆ ಯಾವುದೇ ಕಾರಣಗಳಿಲ್ಲದೆ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ.

ಹಂತ 2) :- ಅದೇ ರೀತಿಯಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬರ ಪರಿಹಾರ ಹಣದ ಬಗ್ಗೆ ಮಾಹಿತಿ ಪಡೆಯಿರಿ.. ಈಗಾಗಲೇ ನಿಮಗೆ ತಿಳಿದ ಹಾಗೆ ಫ್ರೂಟ್ಸ್ ಐಡಿಯನ್ನು ಎಲ್ಲ ರೈತರಿಗೆ ಕಡ್ಡಾಯವಾಗಿ ಮಾಡಿದೆ. ಕೇವಲ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದರ ಮೂಲಕ ನಿಮ್ಮ ಫ್ರೂಟ್ಸ್ ಐ ಡಿ ಜನರೇಟ್ ಆಗಿದಿಯೋ ಇಲ್ಲವೋ ನಿಮ್ಮ Data ಸ್ಥಿತಿಯನ್ನು ಅಲ್ಲೇ ತಿಳಿಯಿರಿ…

Step 1:- ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ಸರ್ಚ(search) ಬಟನ್ ಮೇಲೆ ಒತ್ತಬೇಕು..

Step 2:- ಅದೇ ರೀತಿಯಾಗಿ ನಿಮಗೆ ಕೆಳಗೆ ತೋರಿಸುವ ಎಫ್ ಐ ಡಿ ನಂಬರ್ ಇದ್ದರೆ ಮಾತ್ರ ನಿಮ್ಮ data ಸ್ಥಿತಿ ಸರಿಯಾಗಿರುತ್ತದೆ, ನಿಮ್ಮ ಎಫ್ ಐ ಡಿ ತಪ್ಪಿದ್ದಲ್ಲಿ ನಿಮಗೆ ರೆಕಾರ್ಡ್ ನಾಟ್ ಫೌಂಡ್(Record not found) ಎಂದು ಬರುತ್ತದೆ.. ಅಂತಹ ರೈತರಿಗೆ ಬರ ಪರಿಹಾರ ಹಣ ಜಮಯ ಆಗುವುದಿಲ್ಲ ನೀವು ತಪ್ಪದೆ ನಿಮ್ಮ ಹತ್ತಿರದಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯನ್ನು ಬೇಟಿಯಾಗಿ ನಿಮ್ಮ ಅಗತ್ಯ ದಾಖಲೆಗಳ ಮೂಲಕ ನಿಮ್ಮ ಫ್ರೂಟ್ಸ್ ಐಡಿ ಯನ್ನು ಜನರೇಟ್ ಮಾಡಿಕೊಳ್ಳಿ ನಂತರ ನಿಮಗೆ ಬರ ಪರಿಹಾರ ಹಣವನ್ನು ಹಾಕಲಾಗುತ್ತದೆ.

ಯಾವ ಜಿಲ್ಲೆಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ?

29 ಲಕ್ಷ ರೈತರಿಗೆ ಬರ ಪರಿಹಾರ ಬೆಂಗಳೂರು: ರಾಜ್ಯದ 29,28,910 ರೈತರ ಖಾತೆಗೆ ತಲಾ 2 ಸಾವಿರ ರೂ.ಗಳ ಪರಿಹಾರ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಬರ ಪರಿಹಾರ ಹಣ ಬರುತ್ತದೆ??

ಬಾಗಲಕೋಟೆ ಜಿಲ್ಲೆಯಲ್ಲಿ 1,54,719,

ಬೆಂಗಳೂರು ನಗರ 11,098,

ಬೆಂಗಳೂರು ಗ್ರಾಮಾಂತರ 55,724,

ಬೆಳಗಾವಿ 2,97,561,

ಬಳ್ಳಾರಿ 32,533,

ಬೀದರ್ 61,41,575,

ವಿಜಯಪುರ 2,23,836,

ಚಾಮರಾಜನಗರ 41,458,

ಚಿಕ್ಕಮಗಳೂರು 43,154,

ಚಿತ್ರದುರ್ಗ 1,14,156,

ದಕ್ಷಿಣ ಕನ್ನಡ 1,306,

ದಾವಣಗೆರೆ 71,643,

ಧಾರವಾಡ 90,874,

ಗದಗ 93,314,

ಕಲಬುರಗಿ 2,15,638,

ಹಾಸನ 1,79,710,

ಹಾವೇರಿ 1,56,215,

ಕೊಡಗು 10,287,

ಕೊಪ್ಪಳ 89,753,

ಮಂಡ್ಯ 70,494,

ಮೈಸೂರ್ 62,543,

ರಾಯಚೂರು 79,195,

ಶಿವಮೊಗ್ಗ 70,288,

ತುಮಕೂರು 1,56,177,

ಉಡುಪಿ 17,594,

ಉತ್ತರಕನ್ನಡ 65,983,

ಚಿಕ್ಕಬಳ್ಳಾಪುರ 82,144,

ರಾಮನಗರ 48,867,

ಯಾದಗಿರಿ 88,467,

ವಿಜಯನಗರ 95,231 ರೈತರಿಗೆ ಪರಿಹಾರ ನೀಡಲಾಗಿದೆ ಎಂದು ವಿವರಿಸಿದ್ದಾರೆ..

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ?? 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..

ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಿಮ್ಮ ಆಧಾರ್ ಬ್ಯಾಂಕ್ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಇಲ್ಲಿದೆ ನೋಡಿರಿ 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್

https://uidai.gov.in/en/

ನಂತರ ಮುಂದಿನ ಮುಖಪುಟದಲ್ಲಿ ಕಾಣುವ ಹಾಗೆ ಆಧಾರ್ ಸರ್ವಿಸಸ್(Adhaar services) ಅದರ ಮೇಲೆ ಕ್ಲಿಕ್ ಮಾಡಿ..

ನಂತರ ಮುಂದೆ ಕಾಣುವ ಮುಖಪುಟದಲ್ಲಿ ಆಧಾರ್ ಲಿಂಕಿಂಗ್ ಸ್ಟೇಟಸ್ (Adhaar Linking status) ಮೇಲೆ ಕ್ಲಿಕ್ ಮಾಡಿ

ನಂತರ ಅದೇ ಮುಖಪುಟದಲ್ಲಿ ಕೆಲಗೆ ಕಾಣುವ ಹಾಗೆ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (bank seeding status ) ಮೇಲೆ ಕ್ಲಿಕ್ ಮಾಡಿ..

ನಂತರ ಅಲ್ಲಿ ಲಾಗಿನ್ ಕೇಳುತ್ತದೆ ನಿಮ್ಮ ಆಧಾರ್ ಸಂಖ್ಯೆ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಮತ್ತು ನಿಮ್ಮ ಮೊಬೈಲ್ ಬಗ್ಗೆ ಬಂದಿರುವ ಓಟಿಪಿಯನ್ನು ಹಾಕಿ ಲಾಗಿನ್ ಆಗಿ..

ನಂತರ ಅದೇ ಬ್ಯಾಂಕ್ ಸಿಡಿಂಗ್ ಸ್ಟೇಟಸ್ ಮೇಲೆ ಇನ್ನೊಮ್ಮೆ ಒತ್ತಿ.. ನಂತರ ಅಲ್ಲಿ ನಿಮ್ಮ ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನಿಮಗೆ ಬರ ಪರಿಹಾರದ ಹಣ ಆಗುತ್ತದೆ..

ಬರ ಪರಿಹಾರದ ಹಣ ಇನ್ನೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡಿಬಿಟಿ(DBT Karnataka application)ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್(Install) ಮಾಡಿಕೊಳ್ಳಿ.

ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.

ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು(OTP) ಹಾಕಿ ವೆರಿಫೈ (Verify OTP )ಓಟಿಪಿ ಮೇಲೆ ಒತ್ತಬೇಕು.

ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯmPIN create ಮಾಡಿಕೊಂಡು, ನಂತರ confirm mPIN ಹಾಕಿ,Submit ಬಟನ್ ಮೇಲೆ ಒತ್ತಿರಿ..

ನಂತರ ಅಲ್ಲಿ ಕಾಣಿಸುವ Payment status ಮೇಲೆ ಕ್ಲಿಕ್ ಮಾಡಿ.

ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.

ಎನ್.ಡಿ.ಆ‌ರ್.ಎಫ್(NDRF) / ಎಸ್.ಡಿ.ಆ‌ರ್.ಫ್(SDRF)

ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರ!

ರಾಜ್ಯ ಮತ್ತು ದೇಶದಲ್ಲಿ ಯಾವುದೇ ಬಗ್ಗೆಯ ಮಾನವ ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದಾಗ ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲು ಏಕ ರೂಪ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆ ಈ ಮಾರ್ಗಸೂಚಿಯೇ ಎನ್.ಡಿ.ಆರ್.ಎಫ್(NDRF-ರಾಷ್ಟ್ರೀಯ ವಿಪತ್ತು ನಿರ್ವಹಣೆ) ಈ ಮಾರ್ಗಸೂಚಿಯಲ್ಲಿ ಎಷ್ಟು ಪ್ರಮಾಣದ ಹಾನಿಗೆ ಎಷ್ಟು ಪರಿಹಾರವನ್ನು ಫಲಾನುಭವಿಗೆ ಪಾವತಿ ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಸಲಾಗಿರುತ್ತದೆ.

ಈ ಮಾರ್ಗಸೂಚಿಯ ನಿಯಮಗಳ ಪ್ರಕಾರವೇ ರಾಜ್ಯ ಸರಕಾರಗಳು ಕೇಂದ್ರದಿಂದ ಅನುದಾನ ಪಡೆದು ಇದಕ್ಕೆ ರಾಜ್ಯದ ಪಾಲನ್ನು ಸೇರಿಸಿ ಬೆಳೆ, ಅಸ್ತಿ-ಪಾಸ್ತಿ, ಮಾನವ ಹಾನಿಗೆ ಒಳಗಾದ ಫಲಾನುಭವಿಗಳಿಗೆ ಪರಿಹಾರವನ್ನು ನೀಡಬೇಕು.

ಎನ್.ಡಿ.ಆ‌ರ್.ಎಫ್ / ಎಸ್.ಡಿ.ಆರ್.ಫ್ ಮಾರ್ಗಸೂಚಿಗಳನ್ವಯ ತೋಟಗಾರಿಕ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತದ ವಿವರ:

ಎನ್.ಡಿ.ಆ‌ರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಪ್ರತಿ ಹೆಕ್ಟೇರ್ ಗೆ ಅಂದರೆ 2.5 ಎಕರೆಗೆ ತೋಟಗಾರಿಕೆ ಬೆಳೆ ನಷ್ಟಕ್ಕೆ ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ರೂ. 8,500/- ನೀರಾವರಿ ಬೆಳೆಗಳಿಗೆ ರೂ17,000/- ಮತ್ತು ಬಹು ವಾರ್ಷಿಕ ಬೆಳೆಗಳಿಗೆ ರೂ. 22,500/- ಪರಿಹಾರ ನಿಗದಿಪಡಿಸಲಾಗಿದೆ ಎಂದು ತೋಟಗಾರಿಕ ಸಚಿವರ ಪರವಾಗಿ ಕೃಷಿ ಸಚಿವರಾದ ಎನ್‌. ಚಲುವರಾಯಸ್ವಾಮಿ ಅವರು ಸದನಕ್ಕೆ ಮಾಹಿತಿ ತಿಳಿಸಿದರು.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *