Krishi bhagya scheme details :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಕೃಷಿಭಾಗ್ಯ ಪ್ಯಾಕೇಜ್ ನಲ್ಲಿ ಈ ಕೆಳಕಂಡ ಘಟಕಗಳನ್ನು ಒಳಗೊಂಡಿದ್ದು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿಸಿಕೊಳ್ಳಲಾಗಿದೆ..

“ಏನಿದು ಕೃಷಿ ಭಾಗ್ಯ ಯೋಜನೆ??

ಈ ಯೋಜನೆಯ ಸದುಪಯೋಗ ಹೇಗೆ ಪಡೆದುಕೊಳ್ಳಬೇಕು??

ಕೃಷಿ ಹೊಂಡ ನಿರ್ಮಾಣ ಮಾಡಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?? ಹಾಗೂ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಯಾವುವು??”

ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಕೃಷಿಭಾಗ್ಯ ಯೋಜನೆಯ ಅಡಿ ಬರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ 🙏🏻🙏🏻

👉🏻”ಕೃಷಿ ಭಾಗ್ಯ – ಅನ್ನದಾತನಿಗೆ ಸೌಭಾಗ್ಯ”

ಕೃಷಿಭಾಗ್ಯ ಯೋಜನೆ ಯಾವ ತಾಲೂಕುಗಳಿಗೆ ಸಿಗಲಿದೆ??

ಅಂತರ್ಜಲ ವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸುವ ಕೃಷಿಭಾಗ್ಯ ಯೋಜನೆಯನ್ನು ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಅರ್ಜಿ ಸಲ್ಲಿಸಲು ರೈತರಿಗೆ ಕೊಡಬೇಕಾದ ಅಗತ್ಯ ದಾಖಲೆಗಳು ಯಾವುವು??

– ರೈತರ ಅರ್ಜಿ

– ರೈತರ ಭಾವಚಿತ್ರ

– FID (FID ಇಲ್ಲವಾದಲ್ಲಿ ಆಧಾರ್ ಕಾರ್ಡ್ ಅಥವಾ ಪಹಣಿ ಅಥವಾ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಅನ್ನು ತೆಗೆದುಕೊಂಡು ಬರಬೇಕು )

ರೈತರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು??

ಹೌದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು..

ಕೃಷಿ ಭಾಗ್ಯದಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಪಂಪ್ ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮಾಡಿಕೊಡಲಾಗುತ್ತದೆ.

ಈ ಯೋಜನೆಯ ಅಡಿ ಬರುವ ಘಟಕಗಳ ಪಟ್ಟಿ 👇🏻

1) ಕ್ಷೇತ್ರ ಬದು ನಿರ್ಮಾಣ :- ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಹೋಲಾಗದಂತೆ ಅದೇ ಜಮೀನಿನಲ್ಲಿ ಹಿಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರದ ನಿರ್ಮಾಣ ಮಾಡಲಾಗುತ್ತದೆ.

2) ಕೃಷಿ ಹೊಂಡ :- ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆಯ ನೀರು ಸಂಗ್ರಹಣೆಗಾಗಿ ವಿವಿಧ(10×10×3)ಮೀಟರ್ 11×11×3, 12×3, 15×3, 21×3, ಅಳತೆಯ ಕೃಷಿ ಹೊಂಡಗಳ ನಿರ್ಮಾಣ.

3) ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ :- ಹೌದು, ಕೃಷಿ ಹೊಂಡದಲ್ಲಿ ಆಕಸ್ಮಿಕ ಅವಘಡಗಳು ಅಥವಾ ಪ್ರಾಣಹಾನಿ ಸಂಭವಿಸದಂತೆ ತಡೆಯಲು ಕಡ್ಡಾಯವಾಗಿ ತಂತಿ ಬೆಲೆಯನ್ನು ಹಾಕಬೇಕು.

4) ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ಸೆಟ್ :- ಸಂಗ್ರಹಣೆಯಾದ ನೀರನ್ನು ಬೆಳೆಗಳಿಗೆ ಬಳಸಿಕೊಳ್ಳಲು ಡೀಸೆಲ್ ಪೆಟ್ರೋಲ್ ಅಥವಾ ಸೋಲಾರ್ ಪಂಪ್ಸೆಟ್ ಖರೀದಿಸಲು ಅವಕಾಶ.

5) ನೀರನ್ನು ಬೆಳಗ್ಗೆ ಹಾಯಿಸಲು ಸೂಕ್ಷ್ಮ ತುಂತುರು ಅಥವಾ ಹನಿ ನೀರಾವರಿ :- ಕೃಷಿ ಹೊಂಡಗಳಲ್ಲಿ ಸಂಗ್ರಹವಾದ ಮಳೆಯ ನೀರನ್ನು ಬೆಳಗಲಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿಗಾಗಿ ಬಳಸಿಕೊಳ್ಳಲು ಸೂಕ್ಷ್ಮ ನೀರಾವರಿ ಘಟಕ ಅನುಷ್ಠಾನ..

ಕೃಷಿಭಾಗ್ಯ ಯೋಜನೆಯ ಇನ್ನೂ ಅತಿಹೆಚ್ಚಿನ ಮಾಹಿತಿ ಬೇಕಾದರೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ https://raitamitra.karnataka.gov.in/info-2/krushi+Bhagya/kn

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರವನ್ನು ಭೇಟಿ ನೀಡಿ 🙏🏻🙏🏻..

ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿನೀಡಿ ಅರ್ಜಿ ಸಲ್ಲಿಸಿ, ಯೋಜನೆಯ ಗರಿಷ್ಠ ಉಪಯೋಗ ಪಡೆಯಬಹುದಾಗಿದೆ.

ಈ ಕೆಳಗೆ ಸೂಚಿಸುವ ತಾಲೂಕುಗಳಿಗೆ ಮಾತ್ರ ಈ ಕೃಷಿ ಭಾಗ್ಯ ಯೋಜನೆ ಅನ್ವಯಿಸುತ್ತದೆ

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಕೃಷಿಭಾಗ್ಯ ಯೋಜನೆಯ ಸಂಪೂರ್ಣ ಮಾಹಿತಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲಿಸ್ಟ್ ನಲ್ಲಿ ಇದ್ದವರಿಗೆ ಬರ ಪರಿಹಾರ ಬರುವುದಿಲ್ಲ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ..

👉🏻ನಿಮ್ಮ ಫ್ರೂಟ್ಸ್ ಐ ಡಿ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ➡️ಇಲ್ಲಿದೆ ಮಹತ್ವದ ಮಾಹಿತಿ👇🏻👇🏻https://krushivahini.com/2024/03/14/check-your-fid-status-in-mobile/

Leave a Reply

Your email address will not be published. Required fields are marked *