Drought relief money has been deposited to these farmers :- ಮಡಿಕೇರಿ: ಕೊಡಗು ಜಿಲ್ಲೆಯ 11,303 ರೈತರ ಖಾತೆಗೆ ₹1.81 ಕೋಟಿ ಬರ ಪರಿಹಾರ ಹಣ ಜಮೆಯಾಗಿದೆ.

ಇಲ್ಲಿ ಸೋಮವಾರ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಇಲಾಖೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಈ ಮಾಹಿತಿಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಭೆಯ ಮುಂದಿರಿಸಿದರು..

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ‘ಈಗಲೂ ಫೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿಗೆ ಅವಕಾಶವಿದೆ. ಬರ ಪರಿಹಾರ ಸಿಗದ ರೈತರು ನೋಂದಣಿ ಮಾಡಿಕೊಳ್ಳಬಹುದು‘ ಎಂದು ಹೇಳಿದರು.

ಕೇಂದ್ರ ಸರ್ಕಾರ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೂ, ರಾಜ್ಯ ಸರ್ಕಾರವೇ ಪ್ರಾಥಮಿಕ ಹಂತದಲ್ಲಿ ಇಷ್ಟು ಹಣ ಬಿಡುಗಡೆ ಮಾಡಿದೆ ಎಂದರು.

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ?? 👇🏻

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..

ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು‘ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು..

➡️ ಬರ ಪರಿಹಾರ ಹಣ ಇನ್ನೂ ಆದರೂ ಖಾತೆಗೆ ಜಮೆ ಆಗಿಲ್ಲವೇ?? ಏನು ಮಾಡಬೇಕು ತಪ್ಪದೇ ಓದಿರಿ

1)➡️ ಆಧಾರ್ ನಂಬರ್ ಹಾಕಿ ನಿಮ್ಮ FID ಸ್ಟೇಟಸ್ ತಿಳಿದುಕೊಳ್ಳಿ👇🏻 ನಿಮ್ಮ ಎಫ್ ಐ ಡಿ ಜನರೇಟ್ ಆಗಿದೆಯೋ ಇಲ್ಲವೋ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

➡️ 2) ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ??

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ) ನಿಮಗೆ ಸಿಗಲಿದೆ.

➡️ 3) ನಿಮ್ಮ ಹೊಲದ ಎಲ್ಲಾ ಸರ್ವೆ ನಂಬರನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿ. ತಪ್ಪದೇ ಬರ ಪರಿಹಾರವನ್ನು ಪಡೆಯಿರಿ. ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಯಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻

https://fruits.karnataka.gov.in/OnlineUserLogin.aspx

ನಂತರ ನೀವು ಸಿಟಿಜನ್ ರಿಜಿಸ್ಟ್ರೇಷನ್ ಆಯ್ಕೆ ಮಾಡಿಕೊಂಡು.

➡️ ಅದೇ ರೀತಿಯಾಗಿ ನೀವು ಅಲ್ಲಿ ಕಾಣುವ (registration status) ಮೇಲೆ ಕ್ಲಿಕ್ ಮಾಡಿದರ

ನಿಮ್ಮ ಹೊಲದ ಇಷ್ಟು ಸರ್ವೇ ನಂಬರ್ ಗಳು ಅಲ್ಲಿ ನೋಂದಣಿ ಯಾಗಿವೆ ಎಂಬ ಮಾಹಿತಿ ನಿಮಗೆ ಸಿಗುತ್ತದೆ.

ಒಂದು ವೇಳೆ ನಿಮ್ಮ ಹೊಲ 7 ಎಕರೆ ಇದ್ದಲ್ಲಿ ನೀವು ಕೇವಲ ಎರಡು ಎಕರೆ ನೊಂದಣಿ ಮಾಡಿದರೆ ನಿಮಗೆ ಬರ ಪರಿಹಾರವಾಗಿ ಎರಡು ಎಕರೆಗೆ ಸೀಮಿತವಾದ ಹಣ ಅಷ್ಟೇ ಬರುತ್ತದೆ. ಹಾಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೀವು ತಪ್ಪದೆ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೋಂದಣಿ ಮಾಡಬೇಕು.

ಒಂದು ವೇಳೆ ನಿಮ್ಮ ಹೊಲ 8 ಅಥವಾ 10 ಎಕರೆ ಇದ್ದು ನೀವು ಕೇವಲ ಎರಡು ಎಕರೆ ಹೊಲವನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿದರೆ ನಿಮಗೆ ಕೇವಲ ಎರಡು ಎಕರೆಗೆ ಸೀಮಿತವಾದ ಬರ ಪರಿಹಾರದ ಹಣವನ್ನು ಹಾಕುತ್ತಾರೆ. ಆದಕಾರಣ ನಿಮ್ಮ ಸರ್ವೇ ನಂಬರ್ ಗಳನ್ನು ತಪ್ಪದೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ. ನಿಮ್ಮ ಎಷ್ಟು ಸರ್ವೇ ನಂಬರ್ ಗಳು ಫ್ರೂಟ್ಸ್ ಅಡಿಯಲ್ಲಿ ದಾಖಲಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ. ದಯವಿಟ್ಟು ಬರ ಪರಿಹಾರವನ್ನು ಪಡೆಯಿರಿ..

👉🏻ರೈತರು ಈ ಕೆಲಸ ಮಾಡಿದಲ್ಲಿ ಮಾತ್ರ ನಿಮಗೆ ಹಣ ಜಮೆಯಾಗುತ್ತದೆ??

ರೈತರು ತಪ್ಪದೆ ಈ ಮಹತ್ವದ ಮಾಹಿತಿಯನ್ನು ಪಡೆದು ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿಯನ್ನು ಜನರೇಟ್ ಮಾಡಿ ನಿಮಗೆ ಎಷ್ಟು ಎಕರೆ ಹೊಲ ಇದೆ ಅದನ್ನು ನಿಮ್ಮ ಫ್ರೂಟ್ಸ್ ಐಡಿಯಲ್ಲಿ ಅಳವಡಿಸದಿದ್ದರೆ ನಿಮಗೆ ಪರಿಹಾರ ಹಣ ಬರುವುದಿಲ್ಲ

ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

ಕೊಡಗು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಇದೇ ವೇಳೆ ಅವಲೋಕನ ನಡೆಸಿದ ಅವರು ಎಲ್ಲ ಬಗೆಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ 24 ಗಂಟೆಯೊಳಗೆ ನೀರು ಒದಗಿಸಬೇಕು. ಇದಕ್ಕಾಗಿ ಈಗಿನಿಂದಲೇ ಟ್ಯಾಂಕ‌ರ್ ಮೂಲಕ ನೀರು ಒದಗಿಸಲು ಟೆಂಡ‌ರ್ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು. ಇದರೊಂದಿಗೆ ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೂ ಒಪ್ಪಂದ ಮಾಡಿಕೊಳ್ಳಬೇಕು. ಈಗಾಗಲೇ, ರಾಜ್ಯದಲ್ಲಿ ಸುಮಾರು 3 ಸಾವಿರ ರೈತರೊಂದಿಗೆ ಒಪ್ಪಂದವಾಗಿದೆ’ ಎಂದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಕೊಡಗು ಜಿಲ್ಲೆಯಲ್ಲಿ ಮುಂದಿನ 29 ವಾರಕ್ಕೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ. ಸುಮಾರು 68 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂಬ ಅಂದಾಜು ಮಾಡಿ, ಆ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸದ್ಯ, ಅಂತಹ ಪರಿಸ್ಥಿತಿ ಎಲ್ಲೂ ಕಂಡು ಬಂದಿಲ್ಲ’ ಎಂದು ತಿಳಿಸಿದರು.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/D6bfj7BBl7lLxTGZOcd2Mh

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು..

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *