The amount will be deducted if there is a minimum balance in the bank :- ನೀವು ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದೀರಾ..ಹೌದು ಸಾಕಷ್ಟು ಜನ ತಮ್ಮ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುತ್ತಾರೆ. ಅದು ಉಳಿತಾಯ ಖಾತೆ ಇರಬಹುದು ಅಥವಾ ಚಾಲ್ತಿ ಖಾತೆ (current account) ಇರಬಹುದು.

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿದಿರುವ ಹಾಗೆ ಬ್ಯಾಂಕ್ ನಲ್ಲಿ ಹಣವನ್ನು ಪಾವತಿಸುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿಯಾಗಿ ಬ್ಯಾಂಕ್ ಗಳ ವೈವಾಟು ಮಾಡುವ ಜನರಿಗೆ ಇನ್ನೊಂದು ಪ್ರಮುಖ ಸುದ್ದಿ. ಹೌದು ಬ್ಯಾಂಕ್ ನಲ್ಲಿ ಕಡಿಮೆ ಬ್ಯಾಲೆನ್ಸ್ ಅಂದರೆ ಎರಡು ಸಾವಿರಕ್ಕಿಂತ ಕಡಿಮೆ ಇದ್ದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ ನಿಂದ ಕಟ್ ಮಾಡಲಾಗುತ್ತೆ.

ಕನಿಷ್ಠವಾದರೂ ನಿಮ್ಮ ಸಂಬಂಧ ಪಟ್ಟ ಬ್ಯಾಂಕುಗಳಲ್ಲಿ ಎಷ್ಟು ಮಿನಿಮಂ ಬ್ಯಾಲೆನ್ಸ್ ಇದೆ ಎಂಬುದನ್ನು ತಿಳಿದುಕೊಂಡು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠವಾದ ಹಣವನ್ನು ಪಾವತಿ ಇರತಕ್ಕದ್ದು. ಇಲ್ಲವಾದಲ್ಲಿ ನಿಮ್ಮ ಹಣ ಬ್ಯಾಂಕ್ ವತಿಯಿಂದ ಕಟ್ ಆಗುತ್ತದೆ.

ಖಾತೆ ಯಾವುದೇ ಇರಲಿ, ನೀವು ಬ್ಯಾಂಕ್ ನಲ್ಲಿ ಖಾತೆ ತೆರೆದ ನಂತರ ಅದಕ್ಕೆ ಸಂಬಂಧಪಟ್ಟ ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು.

ಮಿನಿಮಮ್ ಬ್ಯಾಲೆನ್ಸ್ ಇದೆಯಾ ಚೆಕ್:-

ನಿಮಗೆಲ್ಲ ತಿಳಿದಿರುವ ಹಾಗೆ ಬೇರೆ ಬೇರೆ ಬ್ಯಾಂಕುಗಳ ಖಾತೆ ನಿರ್ವಹಣೆಗಾಗಿ ಮಿನಿಮಂ ಬ್ಯಾಲೆನ್ಸ್ (minimum balance) 2000 ರೂ ಇರಲೇಬೇಕು ಎಂಬ ನಿಯಮವನ್ನು ಮಾಡಿವೆ..

ಉಳಿತಾಯ ಖಾತೆ ಹೊಂದಿದ್ದರೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯ ಮಿನಿಮಮ್ ಬ್ಯಾಲೆನ್ಸ್ ನಿಯಮ ಇದೆ. ಕೆಲವು ಬ್ಯಾಂಕುಗಳು ಶೂನ್ಯ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಗೆ ಅವಕಾಶ ಮಾಡಿಕೊಡುತ್ತದೆ.

ಆದರೆ ಇನ್ನೂ ಹಲವು ಬ್ಯಾಂಕುಗಳು ಕನಿಷ್ಠ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಇಡಲೇಬೇಕು ಎನ್ನುವ ನಿಯಮ ಮಾಡಿವೆ. ಹಾಗೂ ಮಿನಿಮಮ್ ಬ್ಯಾಲೆನ್ಸ್‌ ಇಲ್ಲದೆ ಇದ್ರೆ, ನಿಮಗೆ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ.

2024-25 ನೇ ಸಾಲಿನ ಹಣಕಾಸು ವರ್ಷ ಆರಂಭವಾಗಲಿದ್ದು, ಏಪ್ರಿಲ್ ಒಂದರಿಂದ ಆರ್‌ಬಿಐ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದೆ. ಯಾವುದೇ ಮಿನಿಮಮ್ ಬ್ಯಾಲೆನ್ಸ್‌ ಇಲ್ಲದೆ ಇರುವ ಖಾತೆದಾರನಿಗೆ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು ನಿಜ, ಆದ್ರೆ ಒಂದು ವೇಳೆ ಖಾತೆದಾರ ಹಣವನ್ನು ಇಡದೆ ಇದ್ದರೆ ಆತನಿಗೆ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಆರ್‌ಬಿಐ ತಿಳಿಸಿದೆ!

ಇಂಥವರ ಖಾತೆ ನಿಷ್ಕ್ರಿಯಗೊಳಿಸುವಂತಿಲ್ಲ!

ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಅಥವಾ ನೇರ ಪ್ರಯೋಜನ ಹೊಂದಿರುವ ಖಾತೆ ಬಳಕೆ ಆಗದೆ ಇದ್ದರೂ ಕೂಡ ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸುವಂತಿಲ್ಲ.

ಎರಡು ವರ್ಷಗಳವರೆಗೆ ಇಂತಹ ಖಾತೆಯನ್ನು ಬಳಕೆ ಮಾಡದೇ ಇದ್ದರೂ ಕೂಡ ಅವುಗಳನ್ನು ಬ್ಯಾಂಕುಗಳು ನಿಷ್ಕ್ರಿಯಗೊಳಿಸುವಂತಿಲ್ಲ. ಇನ್ನು ಬ್ಯಾಂಕ್‌ ಖಾತೆಯನ್ನು ಸಕ್ರಿಯಗೊಳಿಸುವುದು ಕೂಡ ಸುಲಭ. ನೀವು ನಿಮ್ಮ ಮಾಹಿತಿಯನ್ನು ನೀಡಿ ಮತ್ತೆ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು ಹಾಗೂ ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ಬ್ಯಾಂಕುಗಳು ವಿಧಿಸುವಂತ..

ಇನ್ನು ಯಾವುದೇ ವ್ಯಕ್ತಿಯ ಖಾತೆಯನ್ನು ಡಿಆಕ್ಟಿವ್ ಗೊಳಿಸುವುದಿದ್ದಾರೆ, ಖಾತೆದಾರನಿಗೆ ಇಮೇಲ್, ಎಸ್‌ಎಂಎಸ್ ಅಥವಾ ಇನ್ಯಾವುದೇ ರೂಪದಲ್ಲಿ ಮಾಹಿತಿ ನೀಡಬೇಕು. ಒಂದು ವೇಳೆ ಗ್ರಾಹಕರು ಇದಕ್ಕೆ ಪ್ರತಿಕ್ರಿಯೆ ಸೂಚಿಸದೆ ಇದ್ದಲ್ಲಿ, ಬ್ಯಾಂಕ್ ಖಾತೆದಾರ ನೀಡಿರುವ ನಾಮಿನಿ ಅಥವಾ ಸಂಬಂಧಿಕರನ್ನು ಸಂಪರ್ಕಿಸಬಹುದು.

ಆಗಲೂ ಪ್ರಯೋಜನ ಆಗದೇ ಇದ್ದಲ್ಲಿ, ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ಹಾಗಾಗಿ ಇನ್ನು ಮುಂದೆ ಬ್ಯಾಂಕ್ ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಅನಗತ್ಯವಾಗಿ ಶುಲ್ಕ ವಿಧಿಸಿದರೆ ನೀವು ಆರ್ ಬಿ ಐ ಗೆ ಕಂಪ್ಲೇಂಟ್ ಕೂಡ ಮಾಡಬಹುದು.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ..

https://chat.whatsapp.com/D6bfj7BBl7lLxTGZOcd2Mh

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *