Drought relief money released to these districts :- ಆತ್ಮೀಯ ರೈತ ಬಾಂಧವರೇ ಕರ್ನಾಟಕದಾದ್ಯಂತ ಬರಗಾಲ ಪರಿಹಾರ ಬಿಡುಗಡೆ ಮಾಡಿದ್ದು ಯಾವ ಜಿಲ್ಲೆಗೆ ಎಷ್ಟು ಜಮಾ ಆಗಿದೆ ಎಂದು ನಿನ್ನೆ ಬಿಡುಗಡೆ ಮಾಡಲಾಗಿದೆ ಆ ಮಾಹಿತಿಯನ್ನು ನಾವು ಇವತ್ತು ಲೇಖನದಲ್ಲಿ ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇವೆ. ಕಳೆದ ಒಂದು ವಾರಗಳಿಂದ ಕರ್ನಾಟಕದಾದ್ಯಂತ ಬರಗಾಲ ಪರಿಹಾರ ಜಮೆಯಾಗುತ್ತಿದ್ದು ಕೆಲವೊಂದು ಜಿಲ್ಲೆಗಳಿಗೆ ಈಗಾಗಲೇ ಹಣ ಜಮೆಯಾಗಿದೆ. ಎಲ್ಲ ರೈತರು ತಿಳಿದುಕೊಳ್ಳಬೇಕಾದ ಮಾಹಿತಿ ಏನೆಂದರೆ ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ ಆಯ್ತು ಎಂಬುದರ ಬಗ್ಗೆ ಪಟ್ಟಿ ಸಹ ಬಿಡುಗಡೆ ಮಾಡಲಾಗಿದೆ.
➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ?? 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..
➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻
https://landrecords.karnataka.gov.in/PariharaPayment/
ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..
ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಯಾವ ಜಿಲ್ಲೆಗೆ ಎಷ್ಟು ಬರಗಾಲ ಪರಿಹಾರ ಹಣ ಜಮಯಾಗಿದೆ?
29 ಲಕ್ಷ ರೈತರಿಗೆ ಬರ ಪರಿಹಾರ ಬೆಂಗಳೂರು: ರಾಜ್ಯದ 29,28,910 ರೈತರ ಖಾತೆಗೆ ತಲಾ 2 ಸಾವಿರ ರೂ.ಗಳ ಪರಿಹಾರ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಅವರು, ಕೇಂದ್ರದಿಂದ ಇದುವರೆಗೂ ನಯಾ ಪೈಸೆ ಬಿಡುಗಡೆಯಾಗದಿದ್ದರೂ ರಾಜ್ಯ ಸರ್ಕಾರದಿಂದಲೇ 554.52 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಉಳಿದ ರೈತರಿಗೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಫೂಟ್ಸ್ ಮತ್ತು ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಹಣ ಬಿಡುಗಡೆಯಾಗುತ್ತಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ರೈತರಿಗೆ ತಲುಪುತ್ತಿದೆ ಎಂದು ತಿಳಿಸಿದ್ದಾರೆ.
ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಬರ ಪರಿಹಾರ ಹಣ ಬಂದಿದೆ?? 👇🏻
ಬಾಗಲಕೋಟೆ ಜಿಲ್ಲೆಯಲ್ಲಿ 1,54,719,
ಬೆಂಗಳೂರು ನಗರ 11,098,
ಬೆಂಗಳೂರು ಗ್ರಾಮಾಂತರ 55,724,
ಬೆಳಗಾವಿ 2,97,561,
ಬಳ್ಳಾರಿ 32,533,
ಬೀದರ್ 61,41,575,
ವಿಜಯಪುರ 2,23,836,
ಚಾಮರಾಜನಗರ 41,458,
ಚಿಕ್ಕಮಗಳೂರು 43,154,
ಚಿತ್ರದುರ್ಗ 1,14,156,
ದಕ್ಷಿಣ ಕನ್ನಡ 1,306,
ದಾವಣಗೆರೆ 71,643,
ಧಾರವಾಡ 90,874,
ಗದಗ 93,314,
ಕಲಬುರಗಿ 2,15,638,
ಹಾಸನ 1,79,710,
ಹಾವೇರಿ 1,56,215,
ಕೊಡಗು 10,287,
ಕೊಪ್ಪಳ 89,753,
ಮಂಡ್ಯ 70,494,
ಮೈಸೂರ್ 62,543,
ರಾಯಚೂರು 79,195,
ಶಿವಮೊಗ್ಗ 70,288,
ತುಮಕೂರು 1,56,177,
ಉಡುಪಿ 17,594,
ಉತ್ತರಕನ್ನಡ 65,983,
ಚಿಕ್ಕಬಳ್ಳಾಪುರ 82,144,
ರಾಮನಗರ 48,867,
ಯಾದಗಿರಿ 88,467,
ವಿಜಯನಗರ 95,231 ರೈತರಿಗೆ ಪರಿಹಾರ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ 👇🏻
https://chat.whatsapp.com/D6bfj7BBl7lLxTGZOcd2Mh
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.