Relief of Rs 545 crore has been released to 29 lakh farmers in drought-affected areas :- ಬರಪೀಡಿತ ಪ್ರದೇಶದ 29 ಲಕ್ಷ ರೈತರಿಗೆ 545 ಕೋಟಿ ರೂ ಪರಿಹಾರ ಬಿಡುಗಡೆ..

ಜನವರಿ 25ರ ವರೆಗೆ ಬರಪೀಡಿತ ಪ್ರದೇಶದ 29 ಲಕ್ಷ ರೈತರಿಗೆ 545 ಕೋಟಿ ರೂ. ಪರಿಹಾರ ನೀಡಲಾಗಿದೆ.

ರೈತರ ಬೆಳೆಹಾನಿ ಸಮೀಕ್ಷೆಯ ನಂತರ ಇನ್ನೂ 8-9 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಫೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ದಾಖಲೀಕರಣದಲ್ಲಿ ಎದುರಾಗಿರುವ ತೊಡಕುಗಳನ್ನು ಸರಿಪಡಿಸಲಾಗಿದೆ. ಬರಪೀಡಿತ ಪ್ರದೇಶದಲ್ಲಿ ನಮ್ಮ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಆದರೆ ಕೇಂದ್ರ @BJP4India ಸರ್ಕಾರ ಜಿದ್ದಿಗೆ ಬಿದ್ದವರಂತೆ ಪೈಸೆ ಪರಿಹಾರವನ್ನು ನೀಡದೆ ಅನ್ಯಾಯ ಮಾಡುತ್ತಿದೆ. ಈ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯದ @BJP4Karnataka ನಾಯಕರು ನಮ್ಮ ಸರ್ಕಾರದ ವಿರುದ್ಧ ಹೋರಾಟದ ನಾಟಕ ಮಾಡುತ್ತಿದ್ದಾರೆ.

https://twitter.com/siddaramaiah/status/1751876844373328229?t=2pNI_7Dq42Y5s_2LlzXWHQ&s=19

ರಾಜ್ಯ ಸರ್ಕಾರದಿಂದ ರೈತರಿಗೆ ತುರ್ತು ಪರಿಸ್ಥಿತಿಗೆ ಅರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಮೊದಲ ಕಂತಿನಲ್ಲಿಯೇ ಅರ್ಹ ರೈತರಿಗೆ ತಲಾ 2,000 ರೂ ವರೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ..

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ??

ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ಜಂಟಿ ಖಾತೆ ಇದ್ದವರಿಗೆ ಪರಿಹಾರ ಹಣ ಬರುತ್ತದೆ ಇಲ್ಲವೋ ಚೆಕ್ ಮಾಡಿಕೊಳ್ಳಿ..??

ಈಗಾಗಲೇ ಬರ ಪರಿಹಾರ ಹಣವನ್ನು ಪಡೆಯಲು ರೈತರಿಗೆ ಸರ್ಕಾರದಿಂದ ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ಎಲ್ಲಾ ಸರ್ವೆ ನಂಬರನ್ನು ದಾಖಲಿಸಲು ಸಮಯವನ್ನು ನಿಗದಿ ಮಾಡಲಾಗಿದೆ. ಅದೇ ರೀತಿಯಾಗಿ ರೈತರು ಗಮನಿಸಬೇಕು ನಿಮ್ಮ ಪಹಣಿಯು ಜಂಟಿ ಖಾತೆಯಲ್ಲಿ ಇದ್ದರೆ ನಿಮಗೆ ಪರಿಹಾರ ಹಣ ಸಿಗುತ್ತದೆಯೋ ಇಲ್ಲವೋ,👇🏻 ನಿಮ್ಮದು ಜಂಟಿ ಖಾತೆ ಇದ್ದರೆ ನಿಮ್ಮ ಜಂಟಿ ಖಾತೆಗೆ ಇನ್ನೊಬ್ಬರು ಹಕ್ಕುದಾರರು ಇದ್ದರೆ ಅವರಲ್ಲಿ ನೀವು ಒಪ್ಪಿಗೆ ಪತ್ರವನ್ನು ತಂದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಬರುತ್ತದೆ.

ಒಂದು ವೇಳೆ ನಿಮ್ಮ ಜಂಟಿ ಖಾತೆಯಲ್ಲಿ ಇರುವ ಇನ್ನೊಬ್ಬರು ಹಕ್ಕುದಾರರು ಒಪ್ಪದೇ ಇದ್ದ ಕಾಲದಲ್ಲಿ ನಿಮಗೆ ಯಾವುದೇ ತರಹದ ಬರ ಪರಿಹಾರವಾಗಲಿ ಬರುವುದಿಲ್ಲ. ಆದರೆ ರೈತರೇ ಬಹುಮುಖ್ಯವಾದ ಮಾಹಿತಿ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿ ಜೋಡಣೆಯಾಗುವುದು ಕಡ್ಡಾಯ. ಒಂದು ವೇಳೆ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿ ಜೋಡಣೆಯಾಗದಿದ್ದರೆ ನಿಮಗೆ ಪರಿಹಾರ ಹಣ ಸಿಗುವುದಿಲ್ಲ ತಿಳಿಯಿರಿ ರೈತರೇ ಎಲ್ಲ ರೈತರು ನೋಡಲೇಬೇಕಾದ ಮಾಹಿತಿ ಇದು🙏🏻

ರೈತ ಬಾಂಧವರೇ ಈ ಕೂಡಲೇ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿಯನ್ನು ಹಾಗೂ ಹೊಲದ ಪಹಣಿ ಜೊತೆ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ಬರ ಪರಿಹಾರದ ಹಣ ಬರುವುದಿಲ್ಲ. ಹಾಗಾಗಿ ತಪ್ಪದೇ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿಯನ್ನು ಲಿಂಕ್ ಮಾಡಿ. ನಿಮ್ಮ ನಿಮ್ಮ ಹೊಲದ ಎಲ್ಲಾ ಸರ್ವೆ ನಂಬರನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿ.

ತಪ್ಪದೇ ಬರ ಪರಿಹಾರವನ್ನು ಪಡೆಯಿರಿ. ಒಂದು ವೇಳೆ ನಿಮ್ಮ ಹೊಲ 8 ಅಥವಾ 10 ಎಕರೆ ಇದ್ದು ನೀವು ಕೇವಲ ಎರಡು ಎಕರೆ ಹೊಲವನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿದರೆ ನಿಮಗೆ ಕೇವಲ ಎರಡು ಎಕರೆಗೆ ಸೀಮಿತವಾದ ಬರ ಪರಿಹಾರದ ಹಣವನ್ನು ಹಾಕುತ್ತಾರೆ.

ಆದಕಾರಣ ನಿಮ್ಮ ಸರ್ವೇ ನಂಬರ್ ಗಳನ್ನು ತಪ್ಪದೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ. ನಿಮ್ಮ ಎಷ್ಟು ಸರ್ವೇ ನಂಬರ್ ಗಳು ಫ್ರೂಟ್ಸ್ ಅಡಿಯಲ್ಲಿ ದಾಖಲಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ. ದಯವಿಟ್ಟು ಬರ ಪರಿಹಾರವನ್ನು ಪಡೆಯಿರಿ..

➡️ ಈ ಪಟ್ಟಿಯಲ್ಲಿ ಇರುವ ರೈತರಿಗೆ ಮಾತ್ರ ಎಷ್ಟು ಬರ ಪರಿಹಾರ ಹಣ ಜಮೆಯಾಗಿದೆ?? ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ.. ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ

ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻 https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬರ ಪರಿಹಾರ ಬೇಕೇ ಈ ಕೆಲಸ ತಪ್ಪದೇ ಮಾಡಿ?👇🏻

ಇಂದಿನ ಲೇಖನದಲ್ಲಿ ನಾವು ಬರ ಪರಿಹಾರ ರೈತರಿಗೆ ಎಷ್ಟು ಬರುತ್ತದೆ ಹಾಗೂ ಬರ ಪರಿಹಾರ ಬರಬೇಕಾದರೆ ಈ ಕೆಲಸವನ್ನು ರೈತರು ಕಡ್ಡಾಯವಾಗಿ ಮಾಡಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರೈತರಿಗೆ ಎಷ್ಟು ಬರ ಪರಿಹಾರ ಬರುತ್ತದೆ? ನಿಮಗೆ ಬರ ಪರಿಹಾರ ಯಾವ ಆಧಾರದ ಮೇಲೆ ಕೊಡುತ್ತಾರೆ?? ರೈತರಿಗೆ ಎಷ್ಟು ಹಣ ಸಿಗುತ್ತದೆ?? ಇಲ್ಲಿ ನೋಡಿರಿ 👇🏻 ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರೈತರು ತಮ್ಮ ಹೆಸರು, ಬ್ಯಾಂಕ್ ಖಾತೆ ವಿವರಗಳನ್ನು ಈಗಾಗಲೇ ದಾಖಲು ಮಾಡಿದ್ದಾರೆ. ಆದರೆ, ಒಬ್ಬ ರೈತನ ಬಳಿ ಎಷ್ಟು ಎಕರೆ ಜಮೀನು ಇದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಬರ ಪರಿಹಾರ ಪಾವತಿಸುವಾಗ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಎರಡು ಎಕರೆ ನಮೂದಿಸಿದ್ದರೆ ಪರಿಹಾರ ಅಷ್ಟಕ್ಕೆ ಮಾತ್ರ ಸಿಗಲಿದೆ. ಒಬ್ಬ ರೈತನಿಗೆ ಐದು ಎಕರೆ ಜಮೀನು ಇದ್ದು, ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ್ದರೆ ಐದು ಎಕರೆಗೂ ಪರಿಹಾರ ಸಿಗಲಿದೆ.

ಆದಕಾರಣ, ಎಲ್ಲ ರೈತರು ಕೃಷಿ ಇಲಾಖೆಗೆ ತೆರಳಿ ತಮ್ಮ ಜಮೀನಿನ ಮಾಹಿತಿಯನ್ನು ಬೇಗನೆ ಅಂತ್ಯದ ನಮೂದಿಸಬೇಕು’ ಎಂದು ತಿಳಿಸಿದರು.

👉🏻ರೈತರು ಈ ಕೆಲಸ ಮಾಡಿದಲ್ಲಿ ಮಾತ್ರ ನಿಮಗೆ ಹಣ ಜಮೆಯಾಗುತ್ತದೆ?? ರೈತರು ತಪ್ಪದೆ ಈ ಮಹತ್ವದ ಮಾಹಿತಿಯನ್ನು ಪಡೆದು ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿಯನ್ನು ಜನರೇಟ್ ಮಾಡಿ ನಿಮಗೆ ಎಷ್ಟು ಎಕರೆ ಹೊಲ ಇದೆ ಅದನ್ನು ನಿಮ್ಮ ಫ್ರೂಟ್ಸ್ ಐಡಿಯಲ್ಲಿ ಅಳವಡಿಸದಿದ್ದರೆ ನಿಮಗೆ ಪರಿಹಾರ ಹಣ ಬರುವುದಿಲ್ಲ. ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

ಹಂಪಿ ಉತ್ಸವ : ಫೆ.1ರಂದು ಬೈಕ್ ರ್ಯಾಲಿ ಫೆ.2ರಿಂದ ಫೆ.4ರವರೆಗೆ ನಡೆಯುವ ಹಂಪಿ ಉತ್ಸವದ ಅಂಗವಾಗಿ ಫೆ.01ರಂದು ಬೆಳಿಗ್ಗೆ 8 ಗಂಟೆಗೆ ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ. ಈ ರ್ಯಾಲಿಯಲ್ಲಿ ಭಾಗವಹಿಸಲು ಜನವರಿ 31ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ಬಸವರಾಜ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬೇಕು. ಈ ರ್ಯಾಲಿಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ಡಿ.ಎಲ್ ಹೇಲೇಟ್ ಮತ್ತು ಸ್ವಂತ ದ್ವಿಚಕ್ರ ವಾಹನ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ. ಎತ್ತುಗಳ, ಟಗರುಗಳ, ಶ್ವಾನಗಳ ಸ್ಪರ್ಧೆ : ಹೆಸರು ನೋಂದಾಯಿಸಲು ಅವಕಾಶ ವಿಜಯನಗರ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಂಪಿ ಉತ್ಸವ-2024 ಅಂಗವಾಗಿ

ಫೆ.02ರಂದು ಜಿಲ್ಲಾ ಮಟ್ಟದ ಎತ್ತುಗಳ, ಫೆ.3ರಂದು ಟಗರುಗಳ ಹಾಗೂ ಫೆ.4ರಂದು ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಾನುವಾರುಗಳ ಮಾಲೀಕರು, ಟಗರು ಮಾಲೀಕರು ಮತ್ತು ಶ್ವಾನ ಮಾಲೀಕರುಗಳು ತಮ್ಮ ಜಾನುವಾರುಗಳನ್ನು ಮುಂಚಿತವಾಗಿ ನೋಂದಣಿ ಮಾಡಲು ಕೋರಲಾಗಿದೆ. ಈ ಪ್ರದರ್ಶನಗಳ ನೋಂದಣಿಯನ್ನು ಜನವರಿ 30ರ ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳಿಸಲಾಗುವುದು.

ಜಿಲ್ಲೆಯ ವಿವಿಧ ತಾಲೂಕಿನ ಆಯಾ ತಾಲೂಕಿನ ಜಾನುವಾರುಗಳನ್ನು ಆಯಾ ತಾಲೂಕಿನ ಹತ್ತಿರ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಅಥವಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಬೇಕಾಗಿದೆ. ನೋಂದಾಯಿಸಿಕೊಳ್ಳಲು ಬರುವ ಎಲ್ಲಾ ಆಸಕ್ತರುಗಳಿಗೆ ಜಾನುವಾರುಗಳ ಛಾಯಾಚಿತ್ರ ಕಡ್ಡಾಯವಾಗಿರುತ್ತದೆ. ನೋಂದಾಯಿಸಿದ ಎಲ್ಲಾ ಆಸಕ್ತರ ಪಟ್ಟಿಯನ್ನು ತಜ್ಞರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು.

ತದನಂತರ ನೋಂದಣಿಗಾಗಿ ಬಂದ ಯಾವುದೇ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಲು ಗುಂಡು ಎತ್ತುವ ಸ್ಪರ್ಧೆಗೆ ಹೆಸರು ನೋಂದಾಸಲು ಅವಕಾಶ ಹಂಪಿ ಉತ್ಸವ-2024ರ ಪ್ರಯುಕ್ತ ಫೆ.03ರಂದು ಬೆಳಗ್ಗೆ 10 ಗಂಟೆಗೆ ಶ್ರೀವಿಜಯ ವಿದ್ಯಾರಣ ಪ್ರೌಢಶಾಲೆ ಮೈದಾನ ಹೊಸ ಮಲಪನಗುಡಿಯಲ್ಲಿ ಕಲ್ಲು ಗುಂಡು ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಗೆ ಭಾಗವಹಿಸುವ ಸ್ಪರ್ಧಾಳುಗಳು ಫೆ.03ರ ಬೆಳಗ್ಗೆ 08 ರಿಂದ 10 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ.

ಆಸಕ್ತ ಸ್ಪರ್ಧಾಳುಗಳು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಯೊಂದಿಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9972552385, 8217324522, 9483480101. ಮೂರು ವಿಭಾಗದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗುವುದು., ಸಮಯದ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಅತಿ ಹೆಚ್ಚು ತೂಕದ ಕಲ್ಲು ಗುಂಡಿನ ಮೇಲೆ ನಿರ್ಧರಿಸಲಾಗುವುದು. ಸ್ಪರ್ಧೆಗೆ 03 ಅವಕಾಶಗಳನ್ನು ನೀಡಲಾಗುವುದು. ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ https://chat.whatsapp.com/D6bfj7BBl7lLxTGZOcd2Mh

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *