To get Drought relief money these conditions are to be fulfilled :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಈಗಾಗಲೇ ನೀವು ಕೇಳಿರುತ್ತೀರಿ.
ಆದರೆ ಇನ್ನೂ ಆದರೂ ಕೂಡ ಬರ ಪರಿಹಾರ ಹಣ ನಯಾಪೈಸೆಯು ಜಮಯಿಯಾಗಿಲ್ಲ.
ದಯವಿಟ್ಟು ಈ ಲೇಖನವನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ 🙏🏻, ಬರ ಪರಿಹಾರ ಹಣ ಯಾವಾಗ ಜನಿ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡಿರಿ 🙏🏻🙏🏻..ಅದೇ ರೀತಿಯಾಗಿ ಈ ಲೇಖನದಲ್ಲಿ ಬರ ಪರಿಹಾರ ಹಣ ಜಮೆಯಾಗಲು ಸರ್ಕಾರದಿಂದ ಕೆಲವೊಂದು ಶರತ್ತುಗಳನ್ನು ಹಾಕಿದ್ದಾರೆ.
➡️ ಸರ್ಕಾರದಿಂದ ಅನ್ವಯ ಯಾಗುವ ಎಲ್ಲಾ ಶರತ್ತುಗಳು ಪೂರ್ಣಗೊಂಡಲ್ಲಿ ಮಾತ್ರ ರೈತರ ಖಾತೆಗೆ ಬರ ಪರಿಹಾರ ಹಣವನ್ನು ಜಮಾ ಮಾಡುತ್ತಾರೆ. ಹೌದು ಹಾಗಿದ್ದರೆ ಆ ಶರತ್ತುಗಳನ್ನು ನೋಡೋಣ 👇🏻🙏🏻
ಈ ಕೆಳಕಂಡ ಷರತ್ತುಗಳ ಪಾಲನೆಗೆ ಒಳಪಟ್ಟು ಬಿಡುಗಡೆಗೊಳಿಸಲು ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿದೆ.
ಮೇಲಿನಂತೆ ಬಿಡುಗಡೆಯಾದ ಅನುದಾನವನ್ನು, 2023-24ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಯೋಜನೆ ಅಡಿಯಲ್ಲಿನ ಲೆಕ್ಕ 105.00 ಕೋಟಿ (ಒಂದು ನೂರ ಐದು ಕೋಟಿ ರೂಪಾಯಿ ಮಾತ್ರ) ಗಳನ್ನು ಭರಿಸತಕ್ಕದ್ದು.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆ ಆದ ನಂತರ SDRF ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೋಳಿಸಲಾಗುವುದು.
ಷರತ್ತುಗಳು :-
1. ಬೆಳೆಹಾನಿ ಪರಿಹಾರ (Input subsidy) ನ್ನು ಭೂಮಿ ಸೆಲ್ ನಿರ್ವಹಿಸುತ್ತಿರುವ ಪರಿಹಾರ ತತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದ್ದು, ಪ್ರಸ್ತುತ ವರ್ಷ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಭಾಧಿತ ರೈತರಿಗೆ ತ್ವರಿತ ಮತ್ತು ಕ್ರಮಬದ್ಧವಾಗಿ ಬೆಳೆಹಾನಿ ಪರಿಹಾರವನ್ನು ವಿತರಿಸಲು 2,000 ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ FRUITS ದತ್ತಾಂಶದ ಮತ್ತು 2023 ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯನ್ನು ಭೂಮಿ ಸೆಲ್ ರವರು ಇ- ಆಡಳಿತ ಇಲಾಖೆಯಿಂದ ಪಡೆಯುವುದು.
ಬೆಳೆಹಾನಿ ಪರಿಹಾರದ ವಿತರಣೆಯಲ್ಲಿ ಪಾರದರ್ಶಕತೆ ತರಲು, ದತ್ತಾಂಶ ನಿರ್ವಹಣೆಯಲ್ಲಿ ಆಗುತ್ತಿದ್ದ ತಪ್ಪುಗಳು ಮತ್ತು ದೋಷಗಳನ್ನು ತಡೆಗಟ್ಟಲು ಅರ್ಹ ರೈತರುಗಳಿಂದ ಯಾವುದೇ ರೀತಿಯ ಅರ್ಜಿಗಳನ್ನು ಪಡೆಯದೆ ಸಕ್ಷಮ ದತ್ತಾಂಶಗಳ ಅನುಸಾರ ಅರ್ಹತೆಗೆ ಅನುಗುಣವಾಗಿ ಬೆಳೆ ಹಾನಿ ಪರಿಹಾರವನ್ನು FRUITS ತಂತ್ರಾಂಶದಲ್ಲಿ ನೊಂದಣಿಯಾಗಿ Farmers ID ಹೊಂದಿರುವ ಹಾಗೂ ಬರ ಘೋಷಣೆಯಾಗಿರುವ ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮೆಮೊರಾಡಂನಲ್ಲಿ ನಮೂದಾಗಿರುವ ತಾಲ್ಲೂಕುವಾರು (ಮಳೆಯಾಶ್ರಿತ /ನೀರಾವರಿ /ಬಹುವಾರ್ಷಿಕ) ವಿಸ್ತಿರ್ಣ ತಾಲೂಕುವಾರು ನಮೂದು ಆಗಿರುವ ಬೆಳೆ ಹಾನಿಗೆ ಒಳಪಟ್ಟಿರುವ ಬೆಳೆಗಳಿಗೆ ಸೀಮಿತಗೊಳಿಸಿ ಬೆಳೆ ಹಾನಿ ಪರಿಹಾರ ನೀಡತಕ್ಕದ್ದು.
2. 2023 ನೇ ಸಾಲಿನ ಮುಂಗಾರು ಋತುವಿಗೆ ಬರ ಪೀಡಿತವೆಂದು ಘೋಷಿಸಲಾದ 223 ತಾಲ್ಲೂಕು (ಅನುಬಂಧ-1) ಗಳಲ್ಲಿ ಜಿಲ್ಲಾಧಿಕಾರಿಗಳಿಂದ ಜಂಟಿ ಸಮೀಕ್ಷೆ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಕ್ರೂಢೀಕೃತ ಮತ್ತು ದೃಢೀಕೃತ ಮಾಹಿತಿಯನ್ನು ಪಡೆದು ಅದರಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮೆಮೊರಾಂಡಮ್‌ನಲ್ಲಿ ಬೆಳೆವಾರು, ತಾಲ್ಲೂಕುವಾರು ವಿಸ್ತೀರ್ಣ ಹಾಗೂ ಮಳೆಯಾಶ್ರಿತ/ ನೀರಾವರಿ/ ಬಹುವಾರ್ಷಿಕ ವಿವರಗಳನ್ನು (ಅನುಬಂಧ-2) ನಮೂದಿಸಲಾಗಿರುತ್ತದೆ.
ಭೂಮಿ ಸೆಲ್ ರವರು ಬೆಳೆಹಾನಿ ಪರಿಹಾರಕ್ಕೆ ಅರ್ಹ ರೈತರ ಪಟ್ಟಿಯನ್ನು ಮೇಲೆ ಒದಲಾದ (3) ರಲ್ಲಿ ಇರುವ ಮಾರ್ಗಸೂಚಿಗಳ ಪ್ರಕಾರ ತಯಾರಿಸುವಾಗ ಕೇಂದ್ರ ಸರ್ಕಾರಕ್ಕೆ NDRF ಅಡಿ ನೆರವು ಕೋರಿ ಸಲ್ಲಿಸಿರುವ ಮೆಮೊರಾಡಂನಲ್ಲಿ ವಿವರಿಸಿರುವಂತೆ ಜಿಲ್ಲಾಧಿಕಾರಿಗಳಿಂದ ವಿವರವಾದ ಬೆಳೆಹಾನಿ ವರದಿಯನ್ನು ಪಡೆದು ತಾಲ್ಲೂಕುವಾರು ಗುರುತಿಸಲ್ಪಟ್ಟಿರುವ ಬೆಳೆಗಳಿಗೆ, ತಾಲ್ಲೂಕುವಾರು ಗುರುತಿಸಲ್ಪಟ್ಟಿರುವ ಬೆಳೆಹಾನಿಯುಂಟಾಗಿರುವ ಮಳೆಯಾಶ್ರಿತ ನೀರಾವರಿ ಮತ್ತು ಬಹುವಾರ್ಷಿಕ ವಿಸ್ತೀರ್ಣಕ್ಕೆ ಒಳಪಟ್ಟು, ಒಟ್ಟಾರೆಯಾಗಿ ತಾಲ್ಲೂಕಿನಲ್ಲಿ ಈ ಎರಡು ಅಂಶಗಳಿಗೆ ಸೀಮಿತಗೊಳಿಸಿ SDRF ಮಾರ್ಗಸೂಚಿಯ ಅನ್ವಯ ಅರ್ಹ ರೈತರಿಗೆ ಒಟ್ಟು ಪರಿಹಾರ ಮೊತ್ತವನ್ನು..
ಲೆಕ್ಕಾಚಾರ ಮಾಡಿ ಅರ್ಹತೆಯ ಅನುಗುಣವಾಗಿ ರೂ.2,000/- ರವರೆಗೆ ಬೆಳೆ ಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಪರಿಪೂರ್ಣ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ FRUITS ತಂತ್ರಾಂಶದಲ್ಲಿ ನೊಂದಣಿಯಾಗಿರುವ Farmers ID ಹೊಂದಿರುವ ಆಧಾರ ಜೋಡಣೆಯಾಗಿರುವ ಅರ್ಹ ರೈತರಿಗೆ DBT ಮೂಲಕ ನಿಯಮಾನುಸಾರ ಪಾವತಿಸುವುದು ಭೂಮಿ ಸೆಲ್ ರವರು payment logic ಪ್ರಕಾರ ತಾಲ್ಲೂಕಿನಲ್ಲಿ ಅತೀ ಕಡಿಮೆ ಭೂಮಿಯನ್ನು ಹೊಂದಿರುವ ಅರ್ಹ ರೈತನಿಂದ ಪ್ರಾರಂಭಿಸಿ ಅತೀ ಹೆಚ್ಚು ಭೂಮಿಯನ್ನು ಹೊಂದಿರುವ ಅರ್ಹ ರೈತನಿಗೆ ಆರೋಹಣ ಕ್ರಮದಲ್ಲಿ (ascending order) ಪಾವತಿ ಮಾಡುವುದು. ಹಾಗೂ ಇದರಲ್ಲಿಯೂ ಸಹ ಮಳೆಯಾಶ್ರಿತ ಬೆಳೆ ನಂತರ ನೀರಾವರಿ ಬೆಳೆ, ತದನಂತರ ಬಹು ವಾರ್ಷಿಕ ಬೆಳೆಗೆ ಈ ಕ್ರಮದಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡುವುದು,
3. ಪಲಾನುಭವಿಯು ಜಮೀನಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳು (RTC ಇತ್ಯಾದಿ) ಹೊಂದಿರಬೇಕು.
4. ಬೆಳೆಹಾನಿ ಪರಿಹಾರ ಪಡೆಯುವ ಫಲಾನುಭವಿಯ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು. ಅಂತಹ ಫಲಾನುಭವಿಗಳಿಗೆ ನಿಯಮಾನುಸಾರ ಆಧಾರ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ಬೆಳೆ ಹಾನಿ ಪರಿಹಾರ ಪಾವತಿ ಮಾಡತಕ್ಕದ್ದು.
5. ಈ ಹಿಂದೆ ನೀರಾವರಿ ಯೋಜನೆಗಳಿಗೆ ರೈತರ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ರೈತರಿಗೆ ಭೂ ಪರಿಹಾರ ನೀಡಲಾಗಿದೆ. ಆದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಪಹಣಿಗಳಲ್ಲಿ ನೀರಾವರಿ ಇಲಾಖೆಯ ಹೆಸರು ಸೇರ್ಪಡೆಯಾಗಿರುವುದಿಲ್ಲ. ಅದ್ದರಿಂದ ಭೂಮಿ ಸೆಲ್‌ರವರು ಭೂಸ್ವಾಧೀನವಾದ ವಿಸ್ತೀರ್ಣಕ್ಕೆ ಭೂಮಿ ದತ್ತಾಂಶದಲ್ಲಿ ಬೆಳೆ ಸಮೀಕ್ಷೆಯಲ್ಲಿ ಸೇರಿದ್ದರೂ ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.
6. ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಜಮೀನು ಭೂ-ಪರಿವರ್ತನೆಯಾಗಿ ಬೆಳೆ ಸಮೀಕ್ಷೆಯಲ್ಲಿ ಸೇರ್ಪಡೆಯಾದರೂ ಕೂಡ ಇಂತಹ ಪ್ರಕರಣಗಳನ್ನು ಭೂಮಿ ಸೆಲ್ ರವರು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದಲ್ಲ.
7. ಸರ್ಕಾರಿ ಜಮೀನುಗಳನ್ನು ಭೂಮಿ ದತ್ತಾಂಶದಲ್ಲಿ ಗುರುತಿಸಿ ಬೆಳೆಹಾನಿ ಪರಿಹಾರ ನೀಡದಂತೆ ಭೂಮಿ ಸೆಲ್‌ರವರು ನೋಡಿಕೊಳ್ಳತಕ್ಕದ್ದು.
8. RTC ಕಾಲಂದಲ್ಲಿ ಅಧಿಕೃತವಾಗಿ ಭೂ ಪರಿವರ್ತನೆಯಾಗದೆ ಇದ್ದರೂ ಸಹ ವಾಸ್ತವಿಕವಾಗಿ ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ NA (ಭೂ ಪರಿವರ್ತನೆ)ಎಂದು ದಾಖಲಿಸಿರುವ ಕೃಷಿ ಜಮೀನುಗಳನ್ನು ಭೂಮಿ ಸೆಲ್‌ರವರು ಬೆಳೆ ಹಾನಿ ಪರಿಹಾರಕ್ಕೆ ಪರಿಗಣಿಸತಕ್ಕದ್ದಲ್ಲ.
9. ಜಂಟಿ ಖಾತೆದಾರರಾಗಿದ್ದಲ್ಲಿ FRUITS ತಂತ್ರಾಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಳೆಹಾನಿ ಪರಿಹಾರ ಪಾವತಿಸುವುದು.
10. ಒಂದೇ ಹಿಸ್ಸಾ ಜಮೀನುಗಳಲ್ಲಿ ಬಹು ಮಾಲಿಕರಿದ್ದಲ್ಲಿ ಒಂದೇ ವಿಸ್ತೀರ್ಣದ ಕ್ಷೇತ್ರಕ್ಕೆ ಎರಡು ಸಲ ಬೆಳೆ ಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.
11. ಒಂದೇ ಹಿಸ್ಸಾ ಜಮೀನಿಗೆ ಒಂದೇ ವಿಸ್ತೀರ್ಣಕ್ಕೆ ಎರಡು ಸಲ (ಡಬಲ್ ಪೇಮೆಂಟ್) ಬೆಳೆಹಾನಿ ಪರಿಹಾರ ಪಾವತಿಯಾಗದ ಹಾಗೆ ಭೂಮಿ ನೋಡಿಕೊಳ್ಳತಕ್ಕದ್ದು. ಸೆಲ್‌ರವರು
12. ಎರಡು ಅಥವಾ ಅದಕ್ಕಿಂತಾ ಹೆಚ್ಚಿನ ತಾಲ್ಲೂಕುಗಳಲ್ಲಿ ಕೃಷಿ ಜಮೀನುಗಳನ್ನು ಹೊಂದಿದ್ದಲ್ಲಿ ಅರ್ಹತೆಯಂತೆ ಬೆಳೆ ಪರಿಹಾರವನ್ನು ಒಬ್ಬ ರೈತನಿಗೆ ಗರಿಷ್ಟ ಕ್ಷೇತ್ರ 2 ಹೆಕ್ಟೇರ್‌ಗಿಂತಾ ಹೆಚ್ಚಿಗೆ ನೀಡದಂತೆ ಭೂಮಿ ಸೆಲ್ ರವರು ನೋಡಿಕೊಳ್ಳತಕ್ಕದ್ದು.
13. ಮೆಮೊರಾಡಂನಲ್ಲಿ ಸಲ್ಲಿಸಲಾದ ತಾಲ್ಲೂಕುವಾರು, ಬೆಳೆವಾರು ಬೆಳೆಹಾನಿ ವಿವರಗಳಲ್ಲಿ, ಒಂದೇ ಹಿಸ್ಸಾ ಕ್ಷೇತ್ರದಲ್ಲಿ ಒಂದಕ್ಕಿಂತಾ ಹೆಚ್ಚು ಬೆಳೆಗಳನ್ನು ಬೆಳೆದಿದಲ್ಲಿ ಯಾವ ಬೆಳೆಯು ಗರಿಷ್ಟ ಪ್ರಮಾಣದಲ್ಲಿ ಬೆಳೆಯಲಾಗಿದೆಯೋ, ಆ ಬೆಳೆಯನ್ನು ಪರಿಹಾರ ಮೊತ್ತವನ್ನು ನೀಡಲು payment logic ನಲ್ಲಿ ಭೂಮಿ ಸೆಲ್‌ರವರು ಪರಿಗಣಿಸತಕ್ಕದ್ದು.
14. RTCಯಲ್ಲಿರುವ ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆಯಲ್ಲಿರುವ ವಿಸ್ತೀರ್ಣದಲ್ಲಿ ವ್ಯತ್ಯಾಸವಿರುವ ಪ್ರಕರಣಗಳನ್ನು Village Administrator Officer ರವರ ಲಾಗಿನ್‌ಗೆ ಭೂಮಿ ಸೆಲ್ ರವರು ಕಳುಹಿಸುವುದು. ಅಂತಹ ಪ್ರಕರಣಗಳನ್ನು ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ ಮೂರು (3) ದಿನಗಳಲ್ಲಿ VAO ರವರು ನಿಯಮಗಳಂತೆ ಬಯೋಮೆಟ್ರಿಕ್ (Bio-Metric) ದೃಢೀಕರಣದ ಮೂಲಕ ಷರಾ ನಮೂದಿಸುವುದು.
15. ಆಧಾರ್ ಮತ್ತು RTCಗಳಲ್ಲಿನ ಹೆಸರುಗಳಲ್ಲಿ ಶೇ.70ರಷ್ಟು ಹೊಂದಾಣಿಕೆಯಾಗದ ಪ್ರಕರಣಗಳನ್ನು ಪರಿಶೀಲನೆಗಾಗಿ ತಹಶೀಲ್ದಾರರ ಲಾಗಿನ್‌ಗೆ ಭೂಮಿ ಸೆಲ್ ರವರು ಕಳುಹಿಸುವುದು. ಅಂತಹ ಪ್ರಕರಣಗಳನ್ನು ಸ್ಥಳೀಯವಾಗಿ ವಾಸ್ತವಾಂಶಗಳ ಪರಿಶೀಲನೆ ಮಾಡಿ ಐದು (5) ದಿನಗಳಲ್ಲಿ ತಹಶೀಲ್ದಾರ್‌ರವರು bio-metric ದೃಢೀಕರಣದ ಮೂಲಕ ನಿಯಮಗಳಂತೆ ಷರಾ ನಮೂದಿಸುವುದು.
16. ಬೆಳೆಹಾನಿ ಪರಿಹಾರ ಪ್ರಾರಂಭ ಮಾಡುವುದಕ್ಕಿಂತ ಪೂರ್ವದಲ್ಲಿ ಮೇಲಿನ ಎಲ್ಲಾ ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಹಾನಿ ಪರಿಹಾರ ಪಾವತಿಸಲು ತಮ್ಮ ಜಿಲ್ಲೆಯಲ್ಲಿನ ಪರಿಹಾರ ದತ್ತಾಂಶಕ್ಕೆ digital signature ಮೂಲಕ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುವುದು.
17. ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು, ಫಲಾನುಭವಿವಾರು ವಿತರಣೆಯಾಗಿ ರುವ ಬೆಳೆಹಾನಿ ಪರಿಹಾರದ ವಿವರಗಳನ್ನು ಭೂಮಿ ಸೆಲ್ ರವರು ಪರಿಹಾರ ತತ್ರಾಂಶ ದ ಅಧಿಕೃತಜಾಲ ತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಪಾರದರ್ಶಕತೆಗಾಗಿ ಅಳವಡಿಸತಕ್ಕದ್ದು.
ನೀವು ಮೇಲೆ ಕಾಣಿಸಿದೆ ಲೇಖನವನ್ನು ಸಂಪೂರ್ಣವಾಗಿ ಓದಿದ್ದೀರಿ ಎಂದು ತಿಳಿದುಕೊಳ್ಳುತ್ತೇನೆ. ಅದೇ ರೀತಿಯಾಗಿ ನಿಮಗೆ ಬರ ಪರಿಹಾರ ಹಣ ಯಾವಾಗ ಬರುತ್ತದೆ ಹಾಗೂ ಈ ಮೇಲಿನ ಷರತ್ತುಗಳು ನಿಮಗೆ ಅನ್ವಯವಾಗಿ ಎಲ್ಲವೂ ಸರಿ ಇದ್ದಲ್ಲಿ ಮಾತ್ರ ನಿಮಗೆ ಬರ ಪರಿಹಾರ ಹಣ ಬರುತ್ತದೆ.
ಕೃಷಿ ವಾಹಿನಿ ಜಾಲತಾಣವು ಓದುಗರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ ಹಾಗೂ ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ. ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಎಲ್ಲಾ ರೈತ ಬಾಂಧವರಿಗೂ ಶೇರ್ ಮಾಡಿ..
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿದೆ. ಅದೇ ರೀತಿಯಾಗಿ ಕೃಷಿ ವಾಹಿನಿ ಜಾಲತಾಣವನ್ನು ಸೇರಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ 👇🏻
https://chat.whatsapp.com/BV4GiFXeLXJKfXFJFZSiGj
💚ಬರ ಪರಿಹಾರ ಹಣವನ್ನು ಪಿಎಂ ಕಿಸಾನ್ ಡಾಟಾಬೇಸ್ ಬಳಸಿಕೊಂಡು ರೈತರ ಖಾತೆಗೆ ಜಮೆ ಮಾಡುತ್ತಾರೆ 🙏🏻,ಬರ ಪರಿಹಾರ ಹಣ ಈ ಪಟ್ಟಿಯಲ್ಲಿ ಇದ್ದವರಿಗೆ ಸಿಗುತ್ತದೆ👇🏻https://krushivahini.com/2024/01/11/drought-relief-comes-as-per-pm-kisan-database/