International Millets fair – 2024 :- ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿನಾಂಕ 5 ರಿಂದ 7ನೇ ದಿನಾಂಕದ ವರೆಗೂ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು.

ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ – 2024” ನಾಳೆಯಿಂದ 7 ನೇ ತಾರೀಖಿನ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಈ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡುತ್ತೇನೆ.

– ಮುಖ್ಯಮಂತ್ರಿ @siddaramaiah…

➡️ ಈ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಏನೆಲ್ಲಾ ಇರಲಿದೆ??

ಹೌದು ರೈತ ಬಾಂಧವರೇ ಈ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಉತ್ತರ ಪ್ರದೇಶ,ಪಂಜಾಬ, ಮಹಾರಾಷ್ಟ್, ಒಡಿಸ್ಸಾ,,ಆಂಧ್ರಪ್ರದೇಶ,, ತಮಿಳುನಾಡು, ಹಾಗೂ ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸಲಿದ್ದು ಅವರಲ್ಲಿ ಅವರದೇ ಆದ ವಿಶೇಷ ಶೈಲಿಯ ವಸ್ತು ಪ್ರದರ್ಶನದ 281 ಮಳಿಗೆಗಳು ಹಾಗೂ ಈಗಾಗಲೇ 250 ಕ್ಕೂ ಹೆಚ್ಚು ಮಳೆಗೆಗಳು ನೋಂದಣಿ ಆಗಿರುತ್ತದೆ.

ಮೇಳದ ಪ್ರಮುಖ ಅಂಶಗಳು ಇಲ್ಲಿವೆ 👇🏻

1) ವಸ್ತು ಪ್ರದರ್ಶನ.

2) ಅಂತರಾಷ್ಟ್ರೀಯ ಸಮ್ಮೇಳನ.

3) ರೈತರ ಕಾರ್ಯಗಾರ.

4) ಸಿರಿಧಾನ್ಯ ಹಾಗೂ ಸಾವಯುವ ಮಳಿಗೆಗಳು.

5) ಸಾಂಸ್ಕೃತಿಕ ಕಾರ್ಯಕ್ರಮಗಳು.

ಸಿರಿಧಾನ್ಯ ಮೇಳದ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ಮುಖಾಂತರ ನೋಡಿ 🙏🏻👇🏻

https://www.youtube.com/live/tCkC2gx-M94?si=JOeffL-udlj2nR4E

💚 ರೈತರಿಗೆ ಸಾವಯುವ ಮತ್ತು ಸಿರಿಧಾನ್ಯ ಬೆಳೆಯುವುದರ ಬಗ್ಗೆ ವಿಶೇಷ ಕಾರ್ಯಗಾರ 👇🏻

ಹೌದು ರೈತ ಬಾಂಧವರೇ, ನೀವು ತಿಳಿದಿರುವ ಹಾಗೆ ನಮ್ಮ ರಾಜ್ಯದಲ್ಲಿ ಸಾವಯುವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾಷೆಯಲ್ಲಿ ರೈತರಿಗಾಗಿ ಕೃಷಿ ವಿಶ್ವವಿದ್ಯಾನಿಲಯ ಸಂಶೋಧನಾ ವಿಭಾಗದಿಂದ ಕಾರ್ಯಗಾರವನ್ನು ಆಯೋಜಿಸಲಾಗುತ್ತದೆ.

ಅದೇ ರೀತಿಯಾಗಿ ನಿಮಗೆ ಸಂಶಯವಿದ್ದಲ್ಲಿ ಸಾವಯುವ ಮತ್ತು ಸಿರಿಧಾನ್ಯ ಪರಿಣಿತರು ಅಲ್ಲದೆ ತಜ್ಞರು ಈ ಕಾರ್ಯಗಾರದಲ್ಲಿ ಸಾವಯುವ ಪದ್ಧತಿ ಹಾಗೂ ಸಾವಯುವ ಮಾರುಕಟ್ಟೆಯ ಬೇಡಿಕೆ ಹಾಗೂ ಸಾವಯುವ ಕೃಷಿ ಹಾಗೂ ನೈಸರ್ಗಿಕ ಕೃಷಿ ಸಿರಿ ಧಾನ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಲಿದ್ದಾರೆ.

ಸಿರಿಧಾನ್ಯ ಮೇಳದ ಸಂಪೂರ್ಣ ಕೈಪಿಡಿ

➡️ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರದಿಂದ ಸಿಗಲಿದೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು.. 🙏🏻 -ಚೆಲುವನಾರಾಯಣ ಸ್ವಾಮಿ ಹೇಳಿಕೆ..

ಪ್ರೀಯ ರೈತರೇ ಸರ್ಕಾರವು ರೈತರಿಗೆ ನೆರವಾಗುವ ಹಾಗೂ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆ,‌ ಬಳಕೆ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ರೈತರಿಗೆ ಸರ್ಕಾರವು ಒಂದು ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ರೈತರು ಸಿರಿ ಧಾನ್ಯ ಬೆಳೆದು ಅಂದರೆ 2024, ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂಬ ಹೆಸರಿನಲ್ಲಿ ಮುನ್ನಡೆದಿದೆ. ಅದೇ ರೀತಿ ಸರ್ಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ಎಷ್ಟು ಪ್ರೋತ್ಸಾಹ ಹಣ ನೀಡುತ್ತಿದೆ ಹಾಗೂ ಈ ಪ್ರೋತ್ಸಾಹ ಹಣ ಪಡೆಯಲು ನಿಯಮಗಳು ಏನು ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸುಮಾರು 800 ರಿಂದ 1000 ಹೆಕ್ಟೇರ್ ಪ್ರದೇಶದಲ್ಲಿ ಈಗ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ, ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ತಿಳಿಸಿದರು. ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್‍ಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಿರಿ ಧಾನ್ಯಗಳು ಅಂದ್ರೆ ರಾಗಿ ಸೇರಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ & ಜೋಳದ ಸಮೂಹ. ಇವು ಸುಮಾರು 5 ಸಾವಿರ ವರ್ಷ ಬೇಸಾಯದ ಇತಿಹಾಸ ಹೊಂದಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ಹೇಳಿದರು.

ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆ ಆಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶದಲ್ಲಿ, ಶುಷ್ಕ, ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಸಹ ಬೆಳೆಯ ಬಹುದಾಗಿದೆ ಅಂತ ಡಾ.ಕಿರಣಕುಮಾರ್ ಅವರು ಮಾಹಿತಿ ನೀಡಿದರು. ಈ ವೇಳೆ ಸಿರಿಧಾನ್ಯ ಬೆಳೆಯುವ ರೈತರಿಗೆ ಇರುವ ಲಾಭ ಹಾಗೂ ಸರ್ಕಾರದ ಬೆಂಬಲ ಬೆಲೆ ಬಗ್ಗೆಯು ಅವರು ತಿಳಿಸಿದರು. ಬರದಲ್ಲೂ ಉತ್ತಮ ಸಿರಿಧಾನ್ಯ ಬೆಳೆ ಬೆಳೆದ ರೈತ ಸಹೋದರರು 800 ರಿಂದ 1,000 ಹೆಕ್ಟೇರ್ ಸಿರಿಧಾನ್ಯ ರಾಜ್ಯ ಸರ್ಕಾರ ನಿರ್ಧರಿಸಿದೆ.

ಇವುಗಳಲ್ಲಿ ರೈತ ಸಿರಿ ಪ್ರಮುಖ ಯೋಜನೆ. ಯೋಜನೆ ಅಡಿ ಜಿಲ್ಲೆಯಲ್ಲಿ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಈ ಬೆಳೆ ಬೆಳೆದ ರೈತರಿಗೆ ಪ್ರತಿ ಹೆಕ್ಟೆರ್‌ಗೂ 10,000 ರೂಪಾಯಿ ನೇರ ನಗದು ವರ್ಗಾವಣೆ ಅಂದ್ರೆ, ಡಿಬಿಟಿ ಮೂಲಕ ಪ್ರೋತ್ಸಾಹ ಧನ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತವಾಗುವಂತೆ ನೀಡಲಾಗುತ್ತಿದೆ ಎಂದರು

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ನಿಮಗೆ ಬರ ಪರಿಹಾರ ಹಣ ಬರಬೇಕಾದರೆ ಈ ಷರತ್ತುಗಳು ಕಡ್ಡಾಯ🙏🏻👇🏻👇🏻 ದಯವಿಟ್ಟು ತಪ್ಪದೇ ತಿಳಿದುಕೊಳ್ಳಿ ಹಾಗೂ ಬರ ಪರಿಹಾರ ಹಣ ಪಡೆಯಿರಿ https://krushivahini.com/2024/01/05/to-get-drought-relief-money-these-conditions-are-to-be-fulfilled/

➡️ ಆಧಾರ್ ಲಿಂಕ್ ಆದ ಖಾತೆಗೆ ಮಾತ್ರ ಬರ ಪರಿಹಾರ ಹಣವನ್ನು ಹಾಕುತ್ತಾರೆ👇🏻 ಸಿಎಂ ಸಿದ್ದರಾಮಯ್ಯ ಹೇಳಿಕೆ👇🏻 https://krushivahini.com/2024/01/05/adhaar-link-is-mandatory-to-get-drought-relief-amount/

Leave a Reply

Your email address will not be published. Required fields are marked *