Government gave clarification regarding lpg gas cylinder ekyc :- ನಮಸ್ಕಾರ ಆತ್ಮೀಯ ರೈತಬಾಂಧವರೇ ಈಗಾಗಲೇ ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುವ ಹಾಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಈ ಕೆವೈಸಿ ಮಾಡಲು 31 ಡಿಸೆಂಬರ್ ಕೊನೆಯ ದಿನಾಂಕ ಆಗಿರುವುದಿಲ್ಲ. ಇಲ್ಲಿದೆ ಆಹಾರ ಇಲಾಖೆಯಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ekyc ಬಗ್ಗೆ ತಿಳಿಯಿರಿ ಮಹತ್ವದ ಮಾಹಿತಿ..
ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ.31 ರೊಳಗೆ E-KYC ಮಾಡಿಸಬೇಕೆಂಬ ವಿಚಾರ #ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿರುತ್ತದೆ.
#E-KYC ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಬಿಡುವಿನ ಸಮಯದಲ್ಲಿ ಮಾಡಿಕೊಳ್ಳಬಹುದು,ಇದು ಉಚಿತವಾಗಿದ್ದು ಇದಕ್ಕಾಗಿ ಗ್ಯಾಸ್ ಏಜೆನ್ಸಿಗಳಿಗೆ ಹಣ ಪಾವತಿಸಬೇಕಿಲ್ಲ #ಆಹಾರ ಇಲಾಖೆ ಸ್ಪಷ್ಟನೆ..
ಈಗಾಗಲೇ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವ ಸುದ್ದಿ :
ಗ್ಯಾಸ್ ಸಂಪರ್ಕ ಹೊಂದಿದವರು ಡಿಸೆಂಬರ್ 31ರೊಳಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆ ಏಜನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ, ಜನವರಿ 1ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರೂ ಇದ್ದು, ಸಬ್ಸಿಡಿಯ ಬಳಿಕ 500 ರೂಗಳಿಗೆ ದೊರಕುತ್ತದೆ. ಕೆವೈಸಿ ಮಾಡದೇ ಇದ್ದರೆ, ಸಬ್ಸಿಡಿರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಷಿಯಲ್ ಆಗಿ ಮಾರ್ಪಾಡಾಗುತ್ತದೆ. ಆಗ ಗ್ಯಾಸ್ ಗೆ 1,400 ರೂ ಕೊಡಬೇಕು ಎಂಬ ಸಂದೇಶ ಹರಿದಾಡುತ್ತಿದೆ.
ಸುಳ್ಳು ಸುದ್ದಿ ಕೇಳಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನಸಾಮಾನ್ಯರ ಗುದ್ದಾಟ :-
ಹೌದು, ಇದೊಂದು ಸುಳ್ಳು ಸಂದೇಶ ಆಗಿದ್ದು. ಮೊಬೈಲ್ ಜಾಲತಾಣದಲ್ಲಿ ಕಳೆದೊಂದು ವಾರದಿಂದ ಈ ಸುಳ್ಳು ಸಂದೇಶ ಹರಿದಾಡುತ್ತಿದೆ. ಗ್ರಾಹಕರು ಇದನ್ನು ನಂಬಿ ಗೊಂದಲಕ್ಕೆ ಒಳಗಾಗಿ ಸಾಲು ಸಾಲಾಗಿ ನೇರವಾಗಿ ಗ್ಯಾಸ್ ಏಜನ್ಸಿಗಳ ಮುಂದೆ ಬಂದು ಕೂಡಲೇ ಮಾಡಿಕೊಡಿ ಎಂದು ಕೂಗಾಡುತ್ತಿದ್ದರೆ. ಅವರು ಯಾರ ಮಾತನ್ನು ಕೇಳುತ್ತಿಲ್ಲ.
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️💚 ಪಿ ಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್👇🏻 https://krushivahini.com/2023/12/30/when-will-16th-installment-of-pm-kisan-yojana-be-released-to-farmers/