First installment drought relief money deposited :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಈಗಾಗಲೇ ಮೊದಲ ಕಂತಿನ ಬರ ಪರಿಹಾರವನ್ನು ಜಮೆ ಮಾಡಲಾಗಿದೆ. ತಪ್ಪದೇ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂದು ನೀವೇ ಚೆಕ್ ಮಾಡಿಕೊಳ್ಳಿ!!

ಭೀಕರ ಬರದಿಂದ ತತ್ತರಿಸಿರುವ ನಾಡಿನ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ನಮ್ಮ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಅನುದಾನಕ್ಕೆ ಕಾಯದೆ, ರೈತರ ಹಿತಕಾಪಾಡುವ ಏಕೈಕ ಉದ್ದೇಶದಿಂದ ತಕ್ಷಣದ ನೆರವನ್ನು ಘೋಷಿಸಲಾಗಿದೆ.

ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ನೀಡುತ್ತಿದ್ದೇನೆ.

https://twitter.com/siddaramaiah/status/1738553852465737874?t=jhf4VEbrgXaSE6ud-w95og&s=19

ರೈತರಿಗೆ ಮೊದಲನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಕುರಿತು ಸಿಎಂ ಸಿದ್ದರಾಮಯ್ಯನವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಅರ್ಹ ರೈತರಿಗೆ 1 ಕಂತಿನಲ್ಲಿ ರೂ 2,000 ಹಣ ಸಿಗಲಿದೆ.

ರಾಜ್ಯ ಸರ್ಕಾರದಿಂದ ರೈತರಿಗೆ ತುರ್ತು ಪರಿಸ್ಥಿತಿಗೆ ಅರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಮೊದಲ ಕಂತಿನಲ್ಲಿಯೇ ಅರ್ಹ ರೈತರಿಗೆ ತಲಾ 2,000 ರೂ ವರೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ..

➡️ ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ (drought) ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ..

➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮಗೆ ಎಷ್ಟು ಹಣ ಜಮಯಾಗಿದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.. 🙏🏻

➡️ ಜಂಟಿ ಖಾತೆ ಇದ್ದವರಿಗೆ ಪರಿಹಾರ ಹಣ ಬರುತ್ತದೆ ಇಲ್ಲವೋ ಚೆಕ್ ಮಾಡಿಕೊಳ್ಳಿ..??

ಈಗಾಗಲೇ ಬರ ಪರಿಹಾರ ಹಣವನ್ನು ಪಡೆಯಲು ರೈತರಿಗೆ ಸರ್ಕಾರದಿಂದ ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ಎಲ್ಲಾ ಸರ್ವೆ ನಂಬರನ್ನು ದಾಖಲಿಸಲು ಸಮಯವನ್ನು ನಿಗದಿ ಮಾಡಲಾಗಿದೆ. ಅದೇ ರೀತಿಯಾಗಿ ರೈತರು ಗಮನಿಸಬೇಕು ನಿಮ್ಮ ಪಹಣಿಯು ಜಂಟಿ ಖಾತೆಯಲ್ಲಿ ಇದ್ದರೆ ನಿಮಗೆ ಪರಿಹಾರ ಹಣ ಸಿಗುತ್ತದೆಯೋ ಇಲ್ಲವೋ,👇🏻

ನಿಮ್ಮದು ಜಂಟಿ ಖಾತೆ ಇದ್ದರೆ ನಿಮ್ಮ ಜಂಟಿ ಖಾತೆಗೆ ಇನ್ನೊಬ್ಬರು ಹಕ್ಕುದಾರರು ಇದ್ದರೆ ಅವರಲ್ಲಿ ನೀವು ಒಪ್ಪಿಗೆ ಪತ್ರವನ್ನು ತಂದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಬರುತ್ತದೆ. ಒಂದು ವೇಳೆ ನಿಮ್ಮ ಜಂಟಿ ಖಾತೆಯಲ್ಲಿ ಇರುವ ಇನ್ನೊಬ್ಬರು ಹಕ್ಕುದಾರರು ಒಪ್ಪದೇ ಇದ್ದ ಕಾಲದಲ್ಲಿ ನಿಮಗೆ ಯಾವುದೇ ತರಹದ ಬರ ಪರಿಹಾರವಾಗಲಿ ಬರುವುದಿಲ್ಲ.

ಆದರೆ ರೈತರೇ ಬಹುಮುಖ್ಯವಾದ ಮಾಹಿತಿ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿ ಜೋಡಣೆಯಾಗುವುದು ಕಡ್ಡಾಯ. ಒಂದು ವೇಳೆ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿ ಜೋಡಣೆಯಾಗದಿದ್ದರೆ ನಿಮಗೆ ಪರಿಹಾರ ಹಣ ಸಿಗುವುದಿಲ್ಲ ತಿಳಿಯಿರಿ ರೈತರೇ

ಎಲ್ಲ ರೈತರು ನೋಡಲೇಬೇಕಾದ ಮಾಹಿತಿ ಇದು🙏🏻👇🏻

ರೈತ ಬಾಂಧವರೇ ಈ ಕೂಡಲೇ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿಯನ್ನು ಹಾಗೂ ಹೊಲದ ಪಹಣಿ ಜೊತೆ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ಬರ ಪರಿಹಾರದ ಹಣ ಬರುವುದಿಲ್ಲ. ಹಾಗಾಗಿ ತಪ್ಪದೇ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿಯನ್ನು ಲಿಂಕ್ ಮಾಡಿ. ನಿಮ್ಮ ನಿಮ್ಮ ಹೊಲದ ಎಲ್ಲಾ ಸರ್ವೆ ನಂಬರನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿ. ತಪ್ಪದೇ ಬರ ಪರಿಹಾರವನ್ನು ಪಡೆಯಿರಿ.

ಒಂದು ವೇಳೆ ನಿಮ್ಮ ಹೊಲ 8 ಅಥವಾ 10 ಎಕರೆ ಇದ್ದು ನೀವು ಕೇವಲ ಎರಡು ಎಕರೆ ಹೊಲವನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿದರೆ ನಿಮಗೆ ಕೇವಲ ಎರಡು ಎಕರೆಗೆ ಸೀಮಿತವಾದ ಬರ ಪರಿಹಾರದ ಹಣವನ್ನು ಹಾಕುತ್ತಾರೆ. ಆದಕಾರಣ ನಿಮ್ಮ ಸರ್ವೇ ನಂಬರ್ ಗಳನ್ನು ತಪ್ಪದೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ. ನಿಮ್ಮ ಎಷ್ಟು ಸರ್ವೇ ನಂಬರ್ ಗಳು ಫ್ರೂಟ್ಸ್ ಅಡಿಯಲ್ಲಿ ದಾಖಲಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ. ದಯವಿಟ್ಟು ಬರ ಪರಿಹಾರವನ್ನು ಪಡೆಯಿರಿ..

ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬರ ಪರಿಹಾರ ಬೇಕೇ ಈ ಕೆಲಸ ತಪ್ಪದೇ ಮಾಡಿ?👇🏻

ಇಂದಿನ ಲೇಖನದಲ್ಲಿ ನಾವು ಬರ ಪರಿಹಾರ ರೈತರಿಗೆ ಎಷ್ಟು ಬರುತ್ತದೆ ಹಾಗೂ ಬರ ಪರಿಹಾರ ಬರಬೇಕಾದರೆ ಈ ಕೆಲಸವನ್ನು ರೈತರು ಕಡ್ಡಾಯವಾಗಿ ಮಾಡಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

➡️ ರೈತರಿಗೆ ಎಷ್ಟು ಬರ ಪರಿಹಾರ ಬರುತ್ತದೆ? ನಿಮಗೆ ಬರ ಪರಿಹಾರ ಯಾವ ಆಧಾರದ ಮೇಲೆ ಕೊಡುತ್ತಾರೆ?? ರೈತರಿಗೆ ಎಷ್ಟು ಹಣ ಸಿಗುತ್ತದೆ?? ಇಲ್ಲಿ ನೋಡಿರಿ 👇🏻

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರೈತರು ತಮ್ಮ ಹೆಸರು, ಬ್ಯಾಂಕ್ ಖಾತೆ ವಿವರಗಳನ್ನು ಈಗಾಗಲೇ ದಾಖಲು ಮಾಡಿದ್ದಾರೆ. ಆದರೆ, ಒಬ್ಬ ರೈತನ ಬಳಿ ಎಷ್ಟು ಎಕರೆ ಜಮೀನು ಇದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಬರ ಪರಿಹಾರ ಪಾವತಿಸುವಾಗ ರೈತರು ಫ್ರಟ್ಸ್ ತಂತ್ರಾಂಶದಲ್ಲಿ ಎರಡು ಎಕರೆ ನಮೂದಿಸಿದ್ದರೆ ಪರಿಹಾರ ಅಷ್ಟಕ್ಕೆ ಮಾತ್ರ ಸಿಗಲಿದೆ. ಒಬ್ಬ ರೈತನಿಗೆ ಐದು ಎಕರೆ ಜಮೀನು ಇದ್ದು, ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ್ದರೆ ಐದು ಎಕರೆಗೂ ಪರಿಹಾರ ಸಿಗಲಿದೆ. ಆದಕಾರಣ, ಎಲ್ಲ ರೈತರು ಕೃಷಿ ಇಲಾಖೆಗೆ ತೆರಳಿ ತಮ್ಮ ಜಮೀನಿನ ಮಾಹಿತಿಯನ್ನು ನವೆಂಬರ್ ಅಂತ್ಯದ ಒಳಗೆ ನಮೂದಿಸಬೇಕು’ ಎಂದು ತಿಳಿಸಿದರು.

👉🏻ರೈತರು ಈ ಕೆಲಸ ಮಾಡಿದಲ್ಲಿ ಮಾತ್ರ ನಿಮಗೆ ಹಣ ಜಮೆಯಾಗುತ್ತದೆ??

ರೈತರು ತಪ್ಪದೆ ಈ ಮಹತ್ವದ ಮಾಹಿತಿಯನ್ನು ಪಡೆದು ನಿಮ್ಮ ಮೊಬೈಲ್ ನಲ್ಲಿ ಫ್ರೂಟ್ಸ್ ಐಡಿಯನ್ನು ಜನರೇಟ್ ಮಾಡಿ ನಿಮಗೆ ಎಷ್ಟು ಎಕರೆ ಹೊಲ ಇದೆ ಅದನ್ನು ನಿಮ್ಮ ಫ್ರೂಟ್ಸ್ ಐಡಿಯಲ್ಲಿ ಅಳವಡಿಸದಿದ್ದರೆ ನಿಮಗೆ ಪರಿಹಾರ ಹಣ ಬರುವುದಿಲ್ಲ.

ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ನಿಮ್ಮ ಸ್ಟೇಟಸ್ ಹೇಗಿದ್ದರೆ ಮಾತ್ರ ಬರ ಪರಿಹಾರ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಹಣ ಜಮೆ ಆಗುತ್ತದೆ👇🏻 https://krushivahini.com/2023/12/23/this-work-is-mandatory-to-get-drought-relief-amount/

Leave a Reply

Your email address will not be published. Required fields are marked *