Drought relief first installment eligible list released :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಮೊದಲನೇ ಕಂತಿನ ಬರ ಪರಿಹಾರ ಹಣವನ್ನು ಯಾವಾಗ ಹಾಕುತ್ತಾರೆ?? ಎಷ್ಟು ಜನ ರೈತರಿಗೆ ಸಿಗಲಿದೆ ಮೊದಲ ಕಂತಿನ ಬರ ಪರಿಹಾರ ಹಣ??
ಹೌದು ರೈತರೇ ಈಗಾಗಲೇ ನೀವು ನೋಡಿರುವ ಪ್ರಕಾರ, ರಾಜ್ಯದಲ್ಲಿ ಈ ಬಾರಿಯ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ತುಂಬಲಾರದಷ್ಟು ನಷ್ಟ ಉಂಟಾಗಿದೆ ಬೀಜ ಗೊಬ್ಬರಕ್ಕೆ ಖರ್ಚು ಮಾಡಿದ ಮೊತ್ತವು ಕೂಡ ರೈತರಿಗೆ ಮರಳಿ ಬಂದಿಲ್ಲ. ಸರ್ಕಾರ ರೈತರಿಗೆ ಬರ ಪರಿಹಾರ ಎಂದು ಹಣವನ್ನು ಬಿಡುಗಡೆ ಮಾಡುತ್ತಿದೆ ಎಷ್ಟು ಮತ್ತೆ ಯಾವ ಜಿಲ್ಲೆಗೆ ಎಂದು ತಿಳಿಯಿರಿ.
ದೊಡ್ಡ ಮಟ್ಟದ ಪರಿಹಾರದ ಆಕಾಂಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರವು ನಿರಾಸೆಯನ್ನು ಮೂಡಿಸಿದೆ. 1 ನೇ ಕಂತಿನ ಬರ ಪರಿಹಾರ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು ಈ ಹಣ ತುಂಬಾ ಕಡಿಮೆ ಇರುವುದರಿಂದ ರೈತರಲ್ಲಿ ನಿರಾಸೆ ಮೂಡಿದೆ.
ಮೊದಲ ಕಂತಿನ ಹಣ ವರ್ಗಾವಣೆ ಬಗ್ಗೆ ಸುದೀರ್ಘ ವಿವರಣೆಯೊಂದಿಗೆ ಎಲ್ಲಾ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು ಬರ ಪರಿಹಾರ ಬಿಡುಗಡೆ ಕುರಿತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಬರೆದ ಪತ್ರಗಳಿಗೆ ಇಲ್ಲಿಯವರೆಗು ಯಾವುದೇ ಯಾವುದೇ ತರಹದ ಸ್ಪಂದನೆ ಸಿಕ್ಕಿಲ್ಲ ಹಾಗೂ ಯಾವುದೇ ಪ್ರತಿಕ್ರಿಯೆ ತಿರುಗಿ ಬಂದಿರುವುದಿಲ್ಲ.
ಈ ಹಿಂದೆ ರಾಜ್ಯದಿಂದ 3 ಸಚಿವರನ್ನು ದೆಹಲಿಗೆ ಕೇಂದ್ರ ಸರ್ಕಾರದ ಸಚಿವರೊಂದಿಗೆ ಪರಿಹಾರ ಬಿಡುಗಡೆ ಕುರಿತು ಚರ್ಚೆಗೆ ಮಾಡಲು ಕಳುಹಿಸಿದರು ಆದರು ಕೂಡ ಒಳ್ಳೆಯ ಫಲಿತಾಂಶ ಸಿಕ್ಕಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಈ ಕುರಿತು ಹೆಚ್ಚು ಮಾಹಿತಿ ತಿಳಿಸಿರುವ ಅವರು ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬರ ಪರಿಹಾರ ಹಣ ವರ್ಗಾವಣೆಯ ಬಗ್ಗೆ ಇನ್ನೂ ಸಹ ಪ್ರಾಥಮಿಕ ಸಭೆ ನಡೆಯದಿರುವ ಹಿನ್ನೆಲೆಯಲ್ಲಿ.
ರಾಜ್ಯ ಸರ್ಕಾರದಿಂದ ರೈತರಿಗೆ ತುರ್ತು ಪರಿಸ್ಥಿತಿಗೆ ಅರ್ಥಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ಮೊದಲ ಕಂತಿನಲ್ಲಿಯೇ ಅರ್ಹ ರೈತರಿಗೆ ತಲಾ 2,000 ರೂ ವರೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
➡️ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ತಪ್ಪದೇ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ?? ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಬರುತ್ತದೆ ಇಲ್ಲವೋ ಅಥವಾ ನಿಮ್ಮ ಹೆಸರು ಇದರಲ್ಲಿ ಇದೆ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ?? 👇🏻
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Drought)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..
ರೈತರಿಗೆ ಮೊದಲನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಕುರಿತು ಸಿಎಂ ಸಿದ್ದರಾಮಯ್ಯನವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಅರ್ಹ ರೈತರಿಗೆ 1 ಕಂತಿನಲ್ಲಿ ರೂ 2,000 ಹಣ ಸಿಗಲಿದೆ.
➡️ ಧಾರವಾಡ, ಹಾವೇರಿ, ಕೊಪ್ಪಳ, ಹಾಗೂ ಹೊಸಪೇಟೆ, ಜಿಲ್ಲೆಯ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ಜಮಾ ಮಾಡಲಾಗಿದೆ.. ತಪ್ಪದೇ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ನೋಡಿಕೊಳ್ಳಿ 👇🏻
➡️ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://samrakshane.karnataka.gov.in/Premium/CheckStatusMain_aadhaar.aspx
ಈ ಮೇಲೆ ಕಂಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಇಲ್ಲವಾದಲ್ಲಿ ಮೊಬೈಲ್ ನಂಬರ್ ಅನ್ನೋ ನಮೂದಿಸಿ ಕೆಳಗೆ ಕೊಟ್ಟಿರುವ captcha ಎಂಟ್ರಿ ಮಾಡಿ ಹಾಗೂ ಅಲ್ಲಿ ಕಾಣುವ ಸೀಸನ್ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮ್ಮ ಖಾತೆಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ..
50.298 ಕೋಟಿ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ..
ದಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿದ್ದು, 63566 ಜನ ರೈತರಿಗೆ 50.298 ಕೋಟಿ ರೂ ಗಳ ವಿಮೆ ಮಂಜೂರಾಗಿದೆ. ಮೆಕ್ಕೆಜೋಳ, ಈರುಳ್ಳಿ, ಕೆಂಪು ಮೆಣಸಿನಕಾಯಿ,ಭತ್ತ, ಹತ್ತಿ, ಆಲೂಗಡ್ಡೆಅರ್ಜಿ ಸಲ್ಲಿಸಿದ ರೈತರಿಗೆ ವಿಮೆ ಹಣ ವರ್ಗಾವಣೆಯಾಗಲು ಪ್ರಾರಂಭವಾಗಿದೆ.
ಧಾರವಾಡ 9978 ರೈತರಿಗೆ 6.575 ಕೋಟಿ.
ಅಳ್ನಾವ 3052 ರೈತರಿಗೆ 1.82 ಕೋಟಿ.
ಅಣ್ಣಿಗೇರಿ 6044 ರೈತರಿಗೆ 6.45 ಕೋಟಿ.
ಹುಬ್ಬಳ್ಳಿ 9472 ರೈತರಿಗೆ 9.12 ಕೋಟಿ.
ಹುಬ್ಬಳ್ಳಿ ನಗರ 301 ರೈತರಿಗೆ 0.365 ಕೋಟಿ.
ಕಲಘಟಗಿ 15248 ರೈತರಿಗೆ 9.731 ಕೋಟಿ.
ನವಲಗುಂದ 5286 ರೈತರಿಗೆ 5.282 ಕೋಟಿ..
ಹೊಸಪೇಟೆ(ವಿಜಯನಗರ), ಕೊಪ್ಪಳ ಹಾಗೂ ಕುಂದಗೋಳ ಈ ಊರಿನ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ಹಣ ಆಗಿದೆ..!
ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮಯಾಗಿದೆ??
ಕುಂದಗೋಳ: 2023-24 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳಿಗೆ ಮಧ್ಯಂತರ ಪರಿಹಾರ ಮಂಜೂರಾಗಿದೆ.
ಪ್ರತಿ ಹೆಕ್ಟರ್ ಗೆ ರೈತರಿಗೆ ಸಿಗುವ ಹಣ ಎಷ್ಟು??
ಕುಂದಗೋಳ ತಾಲ್ಲೂಕಿನಲ್ಲಿ ವಿಮೆಗೆ ಒಳಪಟ್ಟ 4256.14 ಹೇಕ್ಟರ್ ಮೆಣಸಿನಕಾಯಿ ಬೆಳೆಗೆ ಒಟ್ಟು ₹4 ಕೋಟಿ ₹35 ಲಕ್ಷ ಗಳ ಬೆಳೆ ವಿಮೆ ಮಧ್ಯಂತರ ಪರಿಹಾರ ಮಂಜೂರಾಗಿದ್ದು ಒಟ್ಟು 5065 ರೈತರಿಗೆ ಪ್ರತಿ ಹೇಕ್ಟರ್‌ಗೆ ₹10,237.00 ಗಳಂತೆ ಈ ಹಣ ದೊರಯಲಿದೆ.
ಈರುಳ್ಳಿ ಬೆಳೆಯ ಬೆಳೆವಿಮೆ ತುಂಬಿದ 115 ರೈತರಿಗೆ 73 ಹೇಕ್ಟರ್ ಭೂಪ್ರದೇಶಕ್ಕಾಗಿ ₹11 ಲಕ್ಷ 77 ಸಾವಿರ ಗಳಷ್ಟು ಮಧ್ಯಂತರ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುವುದು ಎಂದು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮಂಜುನಾಥ ಕರೋಶಿ ತಿಳಿಸಿದರು.
ಜಾನುವಾರುಗಳಿಗೆ ಮೇವಿಗೆ ರೂ 327 ಕೋಟಿ ಬಿಡುಗಡೆ:
ರಾಜ್ಯದಲ್ಲಿ ಜಾನುವಾರುಗಳಿಗೆ ಬರದಿಂದ ಉಂಟಾಗುವ ಮೇವಿನ ಕೊರತೆಯನ್ನು ಸುಧಾರಿಸಲು ಮೇವಿನ ಬೀಜದ ಕಿಟ್ ಮತ್ತು ಇತರೆ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಿಗೆ ಸೇರಿ ಇಲ್ಲಿಯವರೆಗೆ ರೂ 327 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ!
ಈ ಬಾರಿ ಉಂಟಾದ ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೇಂದ್ರದ ತಂಡವು ರಾಜ್ಯದಲ್ಲಿ ಅಧ್ಯಯನ ನಡೆಸಿದ ನಂತರ ರಾಜ್ಯದಿಂದ ಕೇಂದ್ರಕ್ಕೆ ರೂ.4,663 ಕೋಟಿ ಬೆಳೆ ನಷ್ಟ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ.
ಬೆಳೆವಿಮೆ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ 👇🏻
https://samrakshane.karnataka.gov.in/Premium/CheckStatusMain_aadhaar.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ಅಥವಾ ರಿಜಿಸ್ಟ್ರೇಷನ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಮುಖಪುಟದಲ್ಲಿ ಕಾಣುವ ಸೀಸನ್ ಅನ್ನು ಆಯ್ಕೆ ಮಾಡಿಕೊಂಡು search ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುವ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.. 🙏🏻
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ನಿಮ್ಮ ಸ್ಟೇಟಸ್ ಹೇಗಿದ್ದರೆ ಮಾತ್ರ ಬರ ಪರಿಹಾರ, ಬೆಳೆ ವಿಮೆ ಹಾಗೂ ಪಿಎಂ ಕಿಸಾನ್ ಹಣ ಜಮೆ ಆಗುತ್ತದೆ👇🏻 https://krushivahini.com/2023/12/23/this-work-is-mandatory-to-get-drought-relief-amount/