crop insurance solution :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಲೇಖನದಲ್ಲಿ ನಾವು ರೈತರೇ ಸರ್ಕಾರವು ರೈತರ ವಿಷಯದಲ್ಲಿ ಹಲವಾರು ತೊಂದರೆಗೆ ಸಿಲುಕಿಸುತ್ತಿದೆ. ಬೆಳೆ ವಿಮೆ ಸರಿಯಾಗಿ ಪಾವತಿಯಾಗದೆ ರೈತರಿಗೆ ಅನ್ಯಾಯವಾಗುತ್ತಿದ್ದು, ವಿಮೆ ಕಂಪನಿಗಳಿಗೆ ಲಾಭವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಂದೇನು ಎಂಬ ಗೊಂದಲಕ್ಕೆ ರಾಜ್ಯ ಸರ್ಕಾರ ಸಿಲುಕಿದೆ. ಸರ್ಕಾರದಿಂದಲೇ ಸ್ವಂತ ಕಂಪನಿ ಮಾಡುವುದೋ, ಇರುವ ವ್ಯವಸ್ಥೆಯಲ್ಲಿಯೇ ಮುಂದುವರಿಯುವುದೋ ಅಥವಾ ಕಪ್ ಆ್ಯಂಡ್ ಕ್ಯಾಪ್ ಎಂಬ ನಿಯಮಕ್ಕೆ ಪರಿವರ್ತನೆಯಾಗುವುದೋ ಎಂಬ ಚರ್ಚೆ ಇದ್ದು ಸದ್ಯ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಸರ್ಕಾರದ ಕಾಂಗ್ರೆಸ್‌ನಲ್ಲಿಯೇ ಅನೇಕ ಶಾಸಕರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಯಿಂದ ಹಿಂದಕ್ಕೆ ಬರುವಂತೆ ಒತ್ತಾಯಿಸುತ್ತಿರುವುದು ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸರ್ಕಾರದಿಂದಲೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ. ವಿಮೆ ಸರಿಯಾಗಿ ಸಿಗದೆ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ವಿಮೆ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ರೈತರ ವಲಯದಲ್ಲಿದೆ. ಇದುವರೆಗೂ ಕಂಪನಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ವಿಮೆ ಪರಿಹಾರ ಶೇ.60 ರಿಂದ 70 ಸಿಗುತ್ತಿಲ್ಲ. ಒಂದು ವರ್ಷ ಮಾತ್ರ ಹೆಚ್ಚಿನ ಮೊತ್ತದ ವಿಮೆ ಸಿಕ್ಕಿದೆ.

ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿ 37 ಬೆಳೆಗಳನ್ನು ವಿಮಾ ವ್ಯಾಪ್ತಿಯಲ್ಲಿವೆ. ರೈತರು ಶೇ.2 ವಿಮಾ ಕಂತು ಪಾವತಿಸಿದರೆ, ಉಳಿದ ಮೊತ್ತವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾವತಿಸುತ್ತಿವೆ. ಕಪ್ ಆ್ಯಂಡ್ ಕ್ಯಾಪ್ ಮಾದರಿ ಕೃಷಿ ವಿಮೆಯಲ್ಲಿ ಹೊಸ ವ್ಯವಸ್ಥೆ ಬರುತ್ತಿದೆ. ಕಪ್ ಆ್ಯಂಡ್ ಕ್ಯಾಪ್ ಅಥವಾ ಅಶ್ಯುರೆನ್ಸ್ ಮಾದರಿ ಎಂದು ಕರೆಯಲಾಗುತ್ತದೆ.

ರೈತರ ಅರ್ಹ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ನೀವು ಅರ್ಹರಿದ್ದೀರಾ ನಿಮ್ಮ ಆಧಾರ್ ಸಂಖ್ಯೆಯನ್ನು ನಮ್ಮ ದೇಶದ ಮೇಲೆ ನಿಮ್ಮ ಹೆಸರಲ್ಲಿ ಕಂಡರೆ ನಿಮಗೆ ಬರ ಪರಿಹಾರ ಹಣ ಬರುತ್ತದೆ..

ಆಧಾರ್ ನಂಬರ್ ಹಾಕಿ ನಿಮ್ಮ FID ಸ್ಟೇಟಸ್ ತಿಳಿದುಕೊಳ್ಳಿ👇🏻 ನಿಮ್ಮ ಎಫ್ ಐ ಡಿ ಜನರೇಟ್ ಆಗಿದೆಯೋ ಇಲ್ಲವೋ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻

ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಎಫ್ ಐ ಡಿ ಜನರೇಟ್ ಆಗಿರುವುದು ನಿಮಗೆ ಕಾಣುತ್ತದೆ…

ಈವರೆಗೆ ಎಫ್‌ಐಡಿ ಮಾಡಿಸದೇ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೊಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೂಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್‌ಐಡಿ ಮಾಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.

2023-24 ನೇ ಸಾಲಿನಲ್ಲಿ ಬರ ಪರಿಹಾರ ಪಡೆಯಲು ಪ್ರತಿ ತಾಲ್ಲೂಕಿನ ರೈತರು ತಮ್ಮ ಎಲ್ಲ ಪಹಣಿಗಳನ್ನು FRUITS ತಂತ್ರಾಂಶಕ್ಕೆ ನೋಂದಾಯಿಸಿ FID (Farmer ID) ಪಡೆಯಬೇಕಾಗಿರುತ್ತದೆ. ಇದಲ್ಲದೆ FID ಯು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ, PMKISAN ಯೋಜನೆಗಳಿಗೂ ಹಾಗೂ ಕೃಷಿ, ತೋಟಗಾರಿಕೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ರೈತರು ಸೌಲಭ್ಯಗಳನ್ನು ಪಡೆಯಲು ಅತ್ಯವಶ್ಯಕವಾಗಿರುತ್ತದೆ.

ನಿಮ್ಮ ಮೊಬೈಲ್ ನಲ್ಲೇ FID ನೊಂದಣಿ ಮಾಡುವುದು ಹೇಗೆ??

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ) ನಿಮಗೆ ಸಿಗಲಿದೆ.

➡️ 🙏🏻 ನಿಮ್ಮ ಹೊಲದ ಎಷ್ಟು ಸರ್ವೇ ನಂಬರಗಳು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಯಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻

➡️ ಅದೇ ರೀತಿಯಾಗಿ ನೀವು ಅಲ್ಲಿ ಕಾಣುವ (registration status) ಮೇಲೆ ಕ್ಲಿಕ್ ಮಾಡಿದರೆ

ನಿಮ್ಮ ಹೊಲದ ಇಷ್ಟು ಸರ್ವೇ ನಂಬರ್ ಗಳು ಅಲ್ಲಿ ನೋಂದಣಿ ಯಾಗಿವೆ ಎಂಬ ಮಾಹಿತಿ ನಿಮಗೆ ಸಿಗುತ್ತದೆ.

ಒಂದು ವೇಳೆ ನಿಮ್ಮ ಹೊಲ 7 ಎಕರೆ ಇದ್ದಲ್ಲಿ ನೀವು ಕೇವಲ ಎರಡು ಎಕರೆ ನೊಂದಣಿ ಮಾಡಿದರೆ ನಿಮಗೆ ಬರ ಪರಿಹಾರವಾಗಿ ಎರಡು ಎಕರೆಗೆ ಸೀಮಿತವಾದ ಹಣ ಅಷ್ಟೇ ಬರುತ್ತದೆ. ಹಾಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೀವು ತಪ್ಪದೆ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೋಂದಣಿ ಮಾಡಬೇಕು.

ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

➡️ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ.

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಿ.

ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಬರುತ್ತದೆ??

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿhttps://parihara.karnataka.gov.in/service87/

ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ..

ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಪರಿಹಾರ ಹಣ ಬರುತ್ತದೆ.. ಹಾಗೂ ನಿಮಗೆ ಬಂದಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿಯೂ ನಿಮಗೆ ಸಿಗುತ್ತದೆ..

ಯಾವಾಗ ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ಹಣ ಬರುತ್ತದೆ??

ಅರ್ಹ ರೈತರಿಗೆ ಇದೇ ವಾರದ ಒಳಗೆ ಎರಡು ಸಾವಿರ ರು.ವರೆಗೆ ಪರಿಹಾರ ನೀಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಮುಂದಿನ ವಾರ ಅಂದರೆ 15 ಡಿಸೆಂಬರ್ ಒಳಗಡೆ ಪ್ರತಿಯೊಬ್ಬ ರೈತರಿಗೆ ಒಂದು ಹೆಕ್ಟೇರಿಗೆ 2000 ರೂಪಾಯಿ ಹಣ ಡಿಬಿಟಿ ಮೂಲಕ ರೈತರ ಅಕೌಂಟಿಗೆ ಜಮೆ ಮಾಡಲು ಸರ್ಕಾರವು ಒಪ್ಪಿಗೆ ನೀಡಿದೆ. ಅದೇ ರೀತಿ ರೈತರು ಯಾರು ಎಫ್ ಐಡಿ ಮಾಡಿಸಿದವರಿಗೆ ಈ ಹಣ ದೊರೆಯಲಿದೆ.

ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರದ ನೆರವಿಗಾಗಿ ಕಾಯುತ್ತಿದ್ದ ರಾಜ್ಯ ಸರಕಾರ, ಈವರೆಗೆ ನೆರವು ಬಾರದೇ ಇರುವುದರಿಂದ ರಾಜ್ಯದ ವತಿಯಿಂದಲೇ 2,000 ರು. ವರೆಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಿದೆ.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *