Will farmers’ loans be waived off or not :- ಬೆಳಗಾವಿ: ‘ಮುಂದಿನ 15ರಿಂದ 20 ದಿನಗಳ ಒಳಗೆ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಹೋರಾಟ ಮಾಡುವೆ. ಈ ಸರ್ಕಾರ ಓಡಿಸುವವರೆಗೂ ವಿಶ್ರಮಿಸುವುದಿಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ನಗರದಲ್ಲಿ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ತೀವ್ರ ಬರ ಇದೆ. ಸರ್ಕಾರ ಕೈಕಟ್ಟಿ ಕೂರುವುದು ಎಷ್ಟು ಸರಿ? ಈ ಹಿಂದೆ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾದಾಗ ನಾನು ತಡ ಮಾಡದೇ ಸಾಲ ಮನ್ನಾ ಮಾಡಿದ್ದೆ. ಈಗಲೂ ನೀವು ಅಂಥ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಬೆಳೆಸಾಲ ಎಂದರೇನು?
ಬೆಳೆಸಾಲ ಎಂದರೆ ರೈತರಿಗೆ ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ಹಾಗೂ ಬೆಳೆಸಾಲವನ್ನು ಸರ್ಕಾರವು ಮೂರು ರೀತಿಯಲ್ಲಿ ನೀಡುತ್ತದೆ. ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಹಾಗೂ ಮಧ್ಯಮಾವಧಿ ಸಾಲ, ಹೀಗೆ ಜಮೀನಿನ ಆಧಾರದ ಮೇಲೆ ಸರ್ಕಾರವು ಸಾಲವನ್ನು ನೀಡುತ್ತಿದೆ.
ಏನಿದು ಬೆಳೆಸಾಲ ಮನ್ನಾ?
ಬೆಳೆಸಾಲ ಎನ್ನುವುದು ರೈತರಿಗೆ ಕೃಷಿಯಲ್ಲಿ ಉತ್ಪನ್ನಗಳನ್ನು ತೆಗೆಯಲು ಚಟುವಟಿಕೆಗಳಿಗೆ ಸರ್ಕಾರವು ಸಾಲದ ರೂಪದಲ್ಲಿ ಹಣವನ್ನು ರೈತರಿಗೆ ನಿಡುತ್ತದೆ. ಅದೇ ರೀತಿ ರೈತರು ಆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಾವತಿ ಮಾಡುವ ನಿಯಮ ಇರುತ್ತದೆ. ಹಾಗಾಗಿ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡಲು ಸರ್ಕಾರವು ಮೂರು ವಿಧಗಳಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಹೀಗೆ ನೀಡುತ್ತಿದೆ.
2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬೆಳೆ ಸಾಲಮನ್ನಾ ಘೋಷಣೆ ಮಾಡಿದ್ದರು. ಆ ಬೆಳೆ ಸಾಲಮನ್ನಾ ವರದಿಯನ್ನು ಚೆಕ್ ಮಾಡಬಹುದು. ಅದಾದ ನಂತರ ಬಿಜೆಪಿ ಸರ್ಕಾರವಾಗಲಿ ಅಥವಾ ಕಾಂಗ್ರೆಸ್ ಸರ್ಕಾರವಾಗಲಿ ರೈತರ ಬೆಳೆ ಸಾಲಮನ್ನಾ ಘೋಷಣೆ ಮಾಡಿಲ್ಲ. ಅದ ಕಾರಣ ಈಗ ರೈತರಿಗೆ ಯಾವುದೇ ತರಹದ ಬೆಳೆ ಸಾಲಮನ್ನಾಆಗಿಲ್ಲ.
ಯಾರಿಗೆಲ್ಲಾ ಸಾಲ ಮನ್ನಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿರಿ :-
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ಕಾಣುವ ವಾಣಿಜ್ಯ ಬ್ಯಾಂಕಿನ ಸಾಲ ಮನ್ನಾ ಚೆಕ್ ಮಾಡಲು ‘loan waiver report for commercial bank’ ಇದರ ಮೇಲೆ ಕ್ಲಿಕ್ ಮಾಡಬೇಕು. ಹಾಗೂ ಸೊಸೈಟಿಯಲ್ಲಿನ ಸಾಲವನ್ನು ಚೆಕ್ ಮಾಡಲು ‘ loan waiver report for primary agricultural cooperative societies” ಮೇಲೆ ಕ್ಲಿಕ್ ಮಾಡಿರಿ.
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ.
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
➡️ ಬಹಳಷ್ಟು ರೈತರಿಗೆ ಅವರ ಸಾಲ ಮನ್ನಾ ಆಗಿಲ್ಲ ಎಂದು ಹೇಳುತ್ತಾರೆ ಆದರೆ ಸಾಲ ಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳು ಮುಖ್ಯ,
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಾಲ ಮನ್ನಾ ಆಗಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಗಳನ್ನು ಇಲ್ಲಿ ನೋಡಿ.
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.. 👇🏻
https://mahitikanaja.karnataka.gov.in/department
ನಂತರ ಅಲ್ಲಿ ಕಾಣುವ “ಕಂದಾಯ ಇಲಾಖೆಯ” ಮೇಲೆ ಕ್ಲಿಕ್ ಮಾಡಬೇಕು..
ನಂತರ ಕಂದಾಯ ಇಲಾಖೆ ಸೇವೆಗಳು ಇದರ ಮೇಲೆ ಕ್ಲಿಕ್ ಮಾಡಿ
CLWS ರೈತನ ಅರ್ಹತೆ ಇದರ ಮೇಲೆ ಕ್ಲಿಕ್ ಮಾಡಿ
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. Search button ಅಲ್ಲಿ ನಿಮ್ಮ ನಿಮ್ಮ ಹೆಸರನ್ನು ಹಾಕಿದರೆ ಅಲ್ಲಿ ಮಾಹಿತಿಯನ್ನು ತೋರಿಸುತ್ತದೆ.
ಬಹಳಷ್ಟು ರೈತರಿಗೆ ಅವರ ಸಾಲ ಮನ್ನಾ ಆಗಿಲ್ಲ ಎಂದು ಹೇಳುತ್ತಾರೆ ಆದರೆ ಸಾಲ ಮನ್ನಾ ಮಾಡಲು ಕೆಲವು ದಾಖಲೆ ಮತ್ತು ಅರ್ಹತೆಗಳು ಮುಖ್ಯ,
ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಾಲ ಮನ್ನಾ ಆಗಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಗಳನ್ನು ಇಲ್ಲಿ ನೋಡಿ.
➡️ ವಾಣಿಜ್ಯ ಬ್ಯಾಂಕ್ ಸಾಲ ಪಡೆದ ರೈತರ ಪಟ್ಟಿ ಯನ್ನು ಇಲ್ಲಿ ನೋಡಿ?? ನಿಮ್ಮ ಹೆಸರಿದೆಯೆ ಇಲ್ಲಿ ಚೆಕ್ ಮಾಡಿಕೊಳ್ಳಿ..
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
* ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ನಿಮ್ಮ ಸಾಲ ಮನ್ನಾ ಎಷ್ಟು ಆಗಿದೆ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ..
ನಂತರ ಅಲ್ಲಿ ರೈತ ಎಂದು ಸೆಲೆಕ್ಟ್(select) ಮಾಡಿಕೊಳ್ಳಿ
ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸು” ಮೇಲೆ ಒತ್ತಿರಿ..
➡️ ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೇ? ಎಷ್ಟು ಬೆಳೆ ಸಾಲ ಮನ್ನಾ ಆಗಿದೆ? ನಿಮ್ಮ ಬೆಳೆಸಾಲ ಮನ್ನಾ ಸ್ಟೇಟಸ್ ಚೆಕ್ ಹೇಗೆ ಮೊಬೈಲ್ ನಲ್ಲಿ ಚೆಕ್ ಮಾಡಬೇಕು ಎಂದು ಇಲ್ಲಿ ನೋಡಿ..
https://clws.karnataka.gov.in/clws/pacs/citizenreport/
ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ CLWS (ನಾಗರಿಕರ ವರದಿ) ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಬೆಳೆಸಾಲ ಮನ್ನಾ ವರದಿ ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ತಿಳಿಯಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆಸಾಲ ಮನ್ನಾ ಬಗ್ಗೆ ಮಾಹಿತಿ ಪಡೆಯುವುದು.
ಈ ಕೆಲಸ ಮಾಡುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಧಾರ್ ನಂಬರ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಹಾಗೂ ನಿಮ್ಮ ಬೆಳೆಸಾಲ ಮನ್ನಾ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಸರ್ಕಾರವು ರೈತರಿಗೆ ಇದರ ಅವಕಾಶ ನಿಡುತ್ತಿದ್ದು ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಸಹಾಯವಾಗುತ್ತದೆ.
‘ನನ್ನ ಅಧಿಕಾರದಲ್ಲಿ ಯಾವುದೇ ಷರತ್ತಿಲ್ಲದೇ ರೈತರಿಗೆ ವಿದ್ಯುತ್ ನೀಡಿದ್ದೆ. ಈಗ ಅನೇಕ ಷರತ್ತುಗಳನ್ನು ವಿಧಿಸಿ ರೈತರೊಂದಿಗೆ ಚೆಲ್ಲಾಟ ಮಾಡುತ್ತಿರುವುದು ಖಂಡನೀಯ. ಇದನ್ನು ಸರಿ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದು ಅನಿವಾರ್ಯ’ ಎಂದರು.
‘ಸಿದ್ದರಾಮಯ್ಯ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದು ಎಷ್ಟು ಸರಿ? ‘ರೈತ ಸಮ್ಮಾನ್ ನಿಧಿ’ಯಡಿ ಕೇಂದ್ರದ ₹6,000 ಜತೆಗೆ ನಾವು ನೀಡುತ್ತಿದ್ದ ₹4,000 ನೆರವನ್ನು ನಿಲ್ಲಿಸಲು ಕಾರಣವೇನು? ಯಾರಿಗೆ ಟೋಪಿ ಹಾಕಲು ಹೊರಟಿದ್ದೀರಿ? ಇಲ್ಲಸಲ್ಲದ ಭರವಸೆ ಕೊಟ್ಟು ನಮ್ಮನ್ನೇ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಿ’ ಎಂದೂ ಹರಿಹಾಯ್ದರು.
‘ಹೆಣ್ಣುಮಗು ಜನಿಸಿದರೆ ಕಣ್ಣೀರು ಹಾಕುವಂಥ ಸ್ಥಿತಿ ಇದ್ದಾಗ ನಾನು ‘ಭಾಗ್ಯಲಕ್ಷ್ಮಿ’ ಯೋಜನೆ ತಂದೆ. ಈ ಸಂಗತಿಯನ್ನು ತಾಯಂದಿರು ಮನೆಮನೆಗೂ ಮುಟ್ಟಿಸಬೇಕು. ಕಳಸಾ ಬಂಡೂರಿ ಯೋಜನೆಗೆ ಈ ಸರ್ಕಾರ ಒಂದು ಪೈಸೆ ಕೊಡಲಿಲ್ಲ. ನೀರಾವರಿಯ ಎಲ್ಲ ಯೋಜನೆಗಳು ಸ್ಥಗಿತಗೊಂಡಿವೆ. ಇದನ್ನು ರೈತರು ಗಮನಿಸಬೇಕು ಎಂದರು.
“ಅಲ್ಪಸಂಖ್ಯಾತರಿಗೆ ₹10ಸಾವಿರ ಕೋಟಿ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ರೈತರ ಪಾಡೇನು? ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಮಾಡುವ ಬದಲಿಗೆ ಅನ್ನದಾತರ ನೆರವಿಗೆ ಬರಬೇಕಿತ್ತು’ ಎಂದರು.
‘ಚಳಿಗಾಲದ ಅಧಿವೇಶನ ಮುಗಿದ ನಂತರ ಮುಖಂಡರೆಲ್ಲ ಜೊತೆ ಸೇರಿ ರಾಜ್ಯದಾದ್ಯಂತ ಹಳ್ಳಿ-ಪಟ್ಟಣಗಳಿಗೆ ಸಂಚರಿಸಿ ಹೋರಾಟ ಮಾಡುವೆ. ಸರ್ಕಾರ ಕೆಳಗಿಳಿಸುವವರೆಗೆ ಶ್ರಮಿಸುವುದಿಲ್ಲ. ನನ್ನೊಂದಿಗೆ ನೀವೂ ಬನ್ನಿ’ ಎಂದು ಜನರಿಗೆ ಕರೆ ಕೊಟ್ಟರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ಸಿದ್ದರಾಮಯ್ಯ ಅವರು ಅಧಿವೇಶನಕ್ಕೆ ಬಂದು ಗಾಳಿ ಬಡಿದಂತೆ ಕೂರುತ್ತಾರೆ. ಕಾಂಗ್ರೆಸ್ ನಾಯಕರು ಅವರನ್ನು ಯಾರದ್ದಾದರೂ ಬಳಿ ಕರೆದೊಯ್ದು ಗಾಳಿ ಬಿಡಿಸಬೇಕಿದೆ’ ಎಂದರು.
‘ಬರ ಪರಿಹಾರವಾಗಿ ಪ್ರತಿ ಎಕರೆಗೆ ₹25 ಸಾವಿರ ನೀಡುವಂತೆ ಆಗ್ರಹಿಸಿದ್ದೇವೆ. ಆದರೆ, ಸಿದ್ದರಾಮಯ್ಯ ಮುಲ್ಲಾಗಳನ್ನು ಮೆಚ್ಚಿಸಲು ಮುಂದಾಗಿದ್ದಾರೆ’ ಎಂದು ಕಿಡಿ ಕಾರಿದರು.
‘ರಾಜ್ಯದಲ್ಲಿ 60 ರೀತಿಯ ತೆರಿಗೆಗಳನ್ನು ಹೆಚ್ಚಿಸಿದ್ದಾರೆ. ₹2,500 ಕೋಟಿ ತೆರಿಗೆ ಹಣ ಈಗಾಗಲೇ ಬಂದಿದೆ. ಹಾಲಿಗೆ ₹3, ಮದ್ಯಕ್ಕೆ ₹5 ಹೆಚ್ಚಿಸಿದ್ದಾರೆ. ನಿಮ್ಮ ದುಡ್ಡನ್ನೇ ತೆಗೆದುಕೊಂಡು ನಿಮಗೇ ಉಚಿತ ಕೊಟ್ಟಿದ್ದೇವೆ ಎನ್ನುತ್ತಾರೆ. ಈ ಉಚಿತ ಕೊಡುಗೆ ಎನ್ನುವುದೇ ಮೋಸ’ ಎಂದರು.
ಉತ್ತರ ಕರ್ನಾಟಕದ ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗಬೇಕೆಂದು ಯಡಿಯೂರಪ್ಪ ಸುವರ್ಣಸೌಧ ಕಟ್ಟಿದರು. ಆದರೆ ಸಿದ್ದರಾಮಯ್ಯ ಸರ್ಕಾರ ಉತ್ತರ ಕರ್ನಾಟಕದ ವಿರೋಧಿ ಸರ್ಕಾರವಾಗಿದೆ.
-ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ
‘ರಾಜ್ಯದಲ್ಲಿದೆ ರಾಕ್ಷಸಗಣ ಸರ್ಕಾರ’
‘ರಾಜ್ಯದಲ್ಲಿ ಹಿಂದೆ ದೈವಗಣ ಅಧಿಕಾರದಲ್ಲಿತ್ತು. ಈಗ ರಾಕ್ಷಸಗಣ ಇದೆ. ಈ ರಾಕ್ಷಸಗಣದ ನಾಯಕ ಡಿ.ಕೆ.ಶಿವಕುಮಾರ್ ಎರಡನೇಯದ್ದು ರಾಷ್ಟ್ರದ್ರೋಹಿ ಜಮೀರ್ ಅಹಮದ್ ಮೂರನೇಯದ್ದು ಡಾ.ಜಿ.ಪರಮೇಶ್ವರ ನಾಲ್ಕನೇಯದ್ದು ಪ್ರಿಯಾಂಕ್ ಖರ್ಗೆ ಐದನೇಯದ್ದು ಸುಳ್ಳಿನ ಸರದಾರ ಸಿದ್ದರಾಮಯ್ಯ. ಈ ಐದೂ ಗಣಗಳು ರಾಜ್ಯದ ಜನರಿಗೆ ಸಂಕಷ್ಟ ಕೊಡುತ್ತಿವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದರು.
‘ಅಪ್ಪ- ಮಗ ವರ್ಗಾವಣೆಯಲ್ಲಿ ಅಪಾರ ಹಣ ತಿಂದರು. ಇಡೀ ರಾಜ್ಯದಲ್ಲಿ ದೊಡ್ಡ ಭ್ರಷ್ಟ ಈ ಸಿದ್ದರಾಮಯ್ಯ. ಜಾತಿಗಣತಿ ಶೀಘ್ರ ಜಾರಿ ತರುತ್ತೇನೆ ಎಂದು ಹೇಳುತ್ತಲೇ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದರು. ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ನಾನು ಕಂಡಿರಲಿಲ್ಲ’ ಎಂದು ಅವರು ಹರಿಹಾಯ್ದರು. ‘ಜಮೀರ್ ಅಹಮದ್ ಹಿಂದೂಸ್ತಾನದಲ್ಲಿ ಹುಟ್ಟಿದ್ದಾರೋ?
ಪಾಕಿಸ್ತಾನದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ನಾವು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನು ಕೂರಿಸಿದ್ದೇವೆ. ಎಲ್ಲ ಶಾಸಕರೂ ಮುಸ್ಲಿಮನಿಗೆ ಬಗ್ಗಿ ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಹೇಳಿಕೊಂಡಿದ್ದಾರೆ. ಇಂಥವರು ಹಿಂದೂಸ್ತಾನದಲ್ಲಿರಬೇಕೆ? ಪಾಕಿಸ್ತಾನದಲ್ಲಿರಬೇಕೆ ಎಂದು ಪ್ರಶ್ನಿಸಿದರು. ‘ಸುವರ್ಣ ವಿಧಾನಸೌಧದಲ್ಲಿನ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರ ಅಪ್ಪನಿಗೂ ಇದು ಸಾಧ್ಯವಿಲ್ಲ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈವಿಜಯೇಂದ್ರ, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಎನ್.ರವಿಕುಮಾರ, ಮಹಾಂತೇಶ ಕವಟಗಿಮಠ ಮಾತನಾಡಿದರು. ಜಿಲ್ಲೆಯ ಬಿಜೆಪಿಯ ಎಲ್ಲ ಶಾಸಕರು, ಮುಖಂಡರೂ ಉಪಸ್ಥಿತರಿದ್ದರು.
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ರೈತರ ಸಾಲ ಮನ್ನಾ ಕುರಿತು :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ರೈತರ ಸಾಲ ಮನ್ನಾ ಆಗುತ್ತದೆಯೇ ಇಲ್ಲವೋ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.