Land RTC Aadhaar Link :- ಸಣ್ಣ, ಅತಿ ಸಣ್ಣ ರೈತರನ್ನು ಗುರುತಿಸಲು ಆಧಾರ್ ಜೊತೆ ಪಹಣಿ ಜೋಡಣೆ..

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಗುರುತಿಸಲು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಹೊಲದ ಪಹಣಿಯ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಹೇಳಿದ್ದಾರೆ.

ಹೊಲದ ಪಹಣಿ ಹಾಗೂ ಆಧಾರ್ ಲಿಂಕ್ ಮಾಡುವುದು ಏಕೆ??

ಹೌದು ರೈತರೇ, ಈಗ ಆಗಲೇ ಕಂದಾಯ ಸಚಿವರು ಹೇಳಿದ ಪ್ರಕಾರ ಹೊಲದ ಪಹಣಿಯ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ನಿಮ್ಮ ಹೊಲದ ಸರ್ವೆ ನಂಬರ್ ಮೂಲಕ ನಿಮಗೆ ಎಷ್ಟು ಹಣ ಬರುತ್ತದೆ ಎಂದು ಲೆಕ್ಕ ಹಾಕಲು ಇದು ಬಹಳ ಉಪಯೋಗಕರವಾಗಿದೆ. ಆದ್ದರಿಂದ ನಿಮ್ಮ ಹೊಲದ ಪಹಣಿಯ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.

ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ವಿತರಿಸುವ ಉದ್ದೇಶದಿಂದ ಕರ್ನಾಟಕವು ಎಲ್ಲಾ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ (ಆರ್‌ಟಿಸಿ) ದಾಖಲೆಗಳನ್ನು ಆಧಾರ್‌ನೊಂದಿಗೆ ಜೋಡಿಸಲು ಯೋಜಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇದರಿಂದಾಗಿ ಭೂ ಸಂಬಂಧ ವಂಚನೆಗಳನ್ನು ಕಡಿಮೆ ಮಾಡುವುದು ಮತ್ತು ಮಾಲೀಕತ್ವಕ್ಕೆ ಬಂದಾಗ ಗೊಂದಲವನ್ನು ನಿವಾರಣೆ ಮಾಡುವ ಅನುಕೂಲಗಳನ್ನು ಇದು ಹೊಂದಿರುತ್ತದೆ. ವಿಧಾನಸಭೆಯಲ್ಲಿ ಬರಗಾಲದ ಮೇಲಿನ ಚರ್ಚೆಗೆ ಉತ್ತರಿಸಿದ ಗೌಡರು, ಕೇಂದ್ರ ಸರ್ಕಾರದ ಅಂಕಿಅಂಶಗಳು ಕರ್ನಾಟಕದ ಶೇಕಡಾ 44 ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು (ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವವರು) ಎಂದು ಹೇಳಿದ್ದಾರೆ.

ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ರೈತರು ಮೊದಲು https://www.landrecords.karnataka.gov.in/service4/CitizenRegistrationLogin.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಭೂಮಿ ಆನ್ಲೈನ್ ಸಿಟಿಜನ್ ರೆಜಿಸ್ಟ್ರೇಷನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಮೊಬೈಲ್ ನಂಬರ್ ನಮೂದಿಸಿ ಜೆನರೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಅಲ್ಲಿ ಓಟಿಪಿ ನಮೂದಿಸಿ ವೆರಿಫೈ ಮೇಲೆ ಕ್ಲಿಕ್ ಮಾಡಬೇಕು.

ಆಗ ಭೂಮಿ ಆನ್ಲೈನ್ ನಾಗರಿಕ ನೋಂದಣಿ ಎಸ್ಎಂಎಸ್ ಎಚ್ಚರಿಕೆಗಾಗಿ ಎಂಬ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರ ವಿವರಗಳ ಕಾಲಂನಲ್ಲಿ ನಾಗರಿಕನ ಹೆಸರು ಬಂದಿರುತ್ತದೆ. ತಂದೆಯ ಹೆಸರು, ವಿಳಾಸ, ಚುನಾವಣೆ ಗುರುತಿನ ಚೀಟಿ ಸಂಖ್ಯೆ ನಮೂದಿಸಬೇಕು. ಪಿನ್ ಕೋಡ್ ನಂಬರ್ ನಮೂದಿಸಿ ಪರ್ಯಾಯ ಮೊಬೈಲ್ ಸಂಖ್ಯೆ ನಿಮ್ಮ ಮನೆಯ ಇನ್ನೊಂದು ನಂಬರ್ ಪತ್ನಿ, ಅಥವಾ ಮಕ್ಕಳಿದ್ದರೆ ಆ ನಂಬರ್ ನಮೂದಿಸಬೇಕು. ನಂತರ ಡಾಕುಮೆಂಟ್ ಅಪ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಅಪ್ಲೋಡ್ ಮಾಡಬೇಕು. ಆಗ ಅಪ್ಲೋಡ್ ಸಕ್ಸೆಸ್ ಫುಲ್ ಎಂಬ ಮೆಸೆಜ್ ಬರುತ್ತದೆ. ಆಮೇಲೆ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಸರ್ವೆ ಸಂಖ್ಯೆ ವಿವರಗಳಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ನಿಮ್ಮ ಪಹಣೆಯ ಸರ್ವೆ ನಂಬರ್ ಹಾಕಬೇಕು. ಸ್ಟಾರ್ ಸೆಲೆಕ್ಟ್ ಮಾಡಿಕೊಳ್ಳಬೇಕು.

ಹಿಸ್ಸಾ ನಂಬರ್ ಹಾಕಬೇಕು. ಕೆಳಗಡೆ ಕ್ಯಾಪ್ಚ್ಯಾ ನಮೂದಿಸಿದ ನಂತರ ಮಾಲೀಕರ ಹಸೆರು ಕಾಣುತ್ತದೆ. ಆಗ ನಿಮ್ಮ ಹೆಸರು ಬಾಕ್ಸ್ ಮೇಲೆ ಕ್ಲಿಕ್ ಮಾಡಿಬೇಕು. ಕೆಳಗಡೆ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸೇರಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ Added successfully ಎಂದು ಕಾಣುತ್ತದೆ ಒಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಜಿಲ್ಲೆ, ತಾಲೂಕು, ಗ್ರಾಮ, ಮಾಲೀಕನ ಹೆಸರು, ಸರ್ವೆನಂಬರ್, ಹಿಸ್ಸಾ ನಂಬರ್ ಎಲ್ಲವೂ ಕಾಣುತ್ತದೆ. ಉಳಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಆಧಾರ್ ಕಾರ್ಡ್ ಪಹಣಿಗೆ ಲಿಂಕ್ ಆಗಿರುತ್ತದೆ.

“ವಾಸ್ತವದಲ್ಲಿ, ರಾಜ್ಯದ 70 ಪ್ರತಿಶತದಷ್ಟು ರೈತರು ಸಣ್ಣ ಮತ್ತು ಅತಿ ಕಡಿಮೆ” ಎಂದು ಕೃಷ್ಣ ಬೈರೇಗೌಡ ಹೇಳಿದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಾವು ಒದಗಿಸಿದ ಆಧಾರ್ ಆಧಾರಿತ ಡೇಟಾದೊಂದಿಗೆ ಬರ ಪರಿಹಾರವನ್ನು ಲೆಕ್ಕ ಹಾಕಲು ನಾವು ಕೇಂದ್ರವನ್ನು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.

“ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವು ಎಲ್ಲಾ ಆರ್‌ಟಿಸಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮತ್ತು ಆಧಾರ್ ದೃಢೀಕರಣವನ್ನು ಬಳಸಲು ಯೋಚಿಸುತ್ತಿದ್ದೇವೆ” ಎಂದು ವಿಧಾನಸಭೆಗೆ ತಿಳಿಸಿದರು.

ಪಹಣಿಯು ಮಾಲೀಕರ ವಿವರಗಳು, ವಿಸ್ತೀರ್ಣ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಒತ್ತುವರಿ, ಬೆಳೆದ ಬೆಳೆಗಳು ಮತ್ತು ಮುಂತಾದ ಮಾಹಿತಿಯನ್ನು ಒಳಗೊಂಡಿದೆ.

ಆಂಧ್ರಪ್ರದೇಶದಲ್ಲಿ ಈಗಾಗಲೇ ಜಾರಿ

ಆಂಧ್ರಪ್ರದೇಶದಲ್ಲಿ ಈಗಾಗಲೇ ಆಧಾರ್ ಜೊತೆ ಪಹಣಿಯನ್ನು ಲಿಂಕ್ ಮಾಡಲಾಗಿದೆ. ಕೇವಲ ಆಧಾರ್ ಲಿಂಕ್ ಮಾಡಿದರೆ ಸಾಕಾಗುವುದಿಲ್ಲ. ಆಧಾರ್ ದೃಢೀಕರಣವನ್ನು ಮಾಡದ ಹೊರತು, ನಾವು ಭೂ ವ್ಯವಹಾರಗಳಲ್ಲಿ ವಂಚನೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದರು.

ರೈತರಿಗೆ ಪರಿಹಾರ ವಿತರಣೆಯಲ್ಲಿ ಸರ್ಕಾರ “ಎಂಡ್ ಟು ಎಂಡ್ ಆಟೋಮೇಷನ್” ಪ್ರಕ್ರಿಯೆಯಲ್ಲಿದೆ ಎಂದು ವಿಧಾನಸಭೆಯಲ್ಲಿ ಸಚಿವರು ಹೇಳಿದರು. ಇಲ್ಲಿಯವರೆಗೆ, ಡಾಟಾ ಎಂಟ್ರಿ ಆಪರೇಟರ್‌ಗಳು ಫಲಾನುಭವಿಗಳ ಹೆಸರನ್ನು ನಮೂದಿಸುತ್ತಿದ್ದರಿಂದ ಅಕ್ರಮ ನಡೆಯುತ್ತಿತ್ತು ಎಂದು ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹೋದರನನ್ನು ಒಳಗೊಂಡ ಒಂದು ಉದಾಹರಣೆಯನ್ನು ಉಲ್ಲೇಖಿಸಿದರು. ”ಅಂದಿನ ಸಿಎಂ ಸಹೋದರನ ಹೆಸರಿಗೆ ನೋಂದಾಯಿತ ಭೂಮಿಗೆ ಪರಿಹಾರ ನೀಡುವುದು ಬೇರೆ ಯಾವುದೋ ಜಿಲ್ಲೆಯ ಹೆಸರಿಗೆ ಹೋಯಿತು” ಎಂದು ಮಾಹಿತಿ ನೀಡಿದರು.

ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ಅವರು ಹೇಳಿದರು. ಕೇಂದ್ರದ ನಿರ್ಲಕ್ಷ್ಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ಹಣ ಬಂದಿಲ್ಲ ಎಂದು ಹೇಳಿದರು. ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಸಚಿವರನ್ನು ನೇಮಿಸುವಂತೆ ರಾಜ್ಯದಿಂದ ಹತ್ತಾರು ಪತ್ರಗಳಿಗೆ ಕೇಂದ್ರವು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.

ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *