Cotton support price fixed :- ಹತ್ತಿಗೆ ಬೆಂಬಲ ಬೆಲೆ ನಿಗದಿ!
ಧಾರವಾಡ, ಡಿಸೆಂಬರ್, 11: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಭಾರತ ಸರ್ಕಾರವು ಹತ್ತಿಯ ಎರಡು ಮೂಲ ತಳಿಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಹಾಗಾದರೆ ಅಂಕಿಂಅಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ಆ ಎರಡು ತಳಿಗಳೆಂದರೆ ಮಧ್ಯಮ ಸ್ಟೇಪಲ್ ಹತ್ತಿ 24.5 ರಿಂದ 25.5 ಮಿಮೀ ಉದ್ದವನ್ನು ಹೊಂದಿರುವ ಮೈಕ್ರೊನೈರ್ ಮೌಲ್ಯವು 4.3 ರಿಂದ 5.1 ಮತ್ತು ಉದ್ದವಾದ ಹತ್ತಿಗೆ ಸ್ಟೇಪಲ್. ಹತ್ತಿ ಸೀಸನ್ 2023-24 (ಅಕ್ಟೋಬರ್-ಸೆಪ್ಟೆಂಬರ್) ಫೇರ್ ಎವರೇಜ್ ಕ್ವಾಲಿಟಿಯ (ಎಫ್‍ಎಕ್ಯೂ) ನ್ಯೂ ಕ್ರಾಪ್ ಸೀಡ್ ಕಾಟನ್ (ಕಪಾಸ್) 3.5 ರಿಂದ 4.3 ಮೈಕ್ರೋನೈರ್ ಮೌಲ್ಯದೊಂದಿಗೆ 29.5 ರಿಂದ 30.5 ಮಿಮೀ ಉದ್ದ ಇರುತ್ತದೆ.
ಮಧ್ಯಮ ಹತ್ತಿಯ ಬೆಂಬಲ ಬೆಲೆ ಕ್ವಿಂಟಾಲ್‍ಗೆ 6,620 ರೂಪಾಯಿಗೆ ನಿಗದಿಪಡಿಸಲಾಗಿದೆ ಮತ್ತು ಉದ್ದವಾದ ಸ್ಟೇಪಲ್ ಹತ್ತಿಗೆ 7,020 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಶ್ರೀ ಲಕ್ಷ್ಮೀ ಕಾಟನ್ಸ್, ಪ್ಲಾಟ್ ನಂ: 135, 3ನೇ ಬೇಲೂರು ಇಂಡಸ್ಟ್ರೀಯಲ್ ಏರಿಯಾ, ಧಾರವಾಡ 580011 ಮತ್ತು ಅನಿಲಕುಮಾರ್ ಆ್ಯಂಡ್ ಕಂಪನಿ ಅಮ್ಮಿನಭಾವಿ ಧಾರವಾಡ 580201 ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಭಾರತೀಯ ಹತ್ತಿ ನಿಗಮ ಲಿ.ವ್ಯವಸ್ಥಾಪಕ ಪ್ರಮೋದ ಇವರ ಮೊ.ಸಂ. 9028155111 ಸಂಪರ್ಕಿಸಬಹುದು. ಹಾಗೂ ಹತ್ತಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆ ತಿಳಿಸಿದೆ.
Raichur: ಹತ್ತಿ ಮಾರಾಟಕ್ಕೆ ನೂರೆಂಟು ತೊಡಕು; ಬೆಲೆ ಕುಸಿತದಿಂದ ಕಂಗಾಲಾದ ರೈತರು!
ಹತ್ತಿ ಮಾರಾಟಕ್ಕೆ ನೂರೆಂಟು ತೊಡಕು; ಬೆಲೆ ಕುಸಿತದಿಂದ ಕಂಗಾಲಾದ ರೈತರು!
ಸಂಕಷ್ಟದಲ್ಲಿ ರೈತ
ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರೂ ಈ ಭಾಗದಲ್ಲಿ ಅನೇಕ ರೈತರು ಹತ್ತಿ ಬೆಳೆದಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸತತ ದರ ಕಡಿಮೆಯಾಗುತ್ತಿದ್ದು, ರೈತರು ಹತ್ತಿ ಇಟ್ಟುಕೊಳ್ಳಲು ಆಗದೆ, ಅತ್ತ ಮಾರಾಟ ಮಾಡಲೂ ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹7,800ಕ್ಕೂ ಹೆಚ್ಚಿದ್ದ ಹತ್ತಿ ಬೆಲೆ ಈಗ ₹6,500ಕ್ಕೆ ಕುಸಿದಿದೆ. ಇದರಿಂದ ಅಧಿಕ ಖರ್ಚು ಮಾಡಿ ಹತ್ತಿ ಬೆಳೆದ ರೈತರಿಗೆ ನಷ್ಟ ಉಂಟಾಗಿದೆ. ಈ ವರ್ಷ ಮಳೆ ಕೊರತೆಯಿಂದ ಇಳುವರಿ ನೆಲಕಚ್ಚಿದ್ದು ಒಂದೆಡೆಯಾದರೆ, ದರ ಕುಸಿತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಹಾಕಿದ ದುಡ್ಡು ಕೈಗೆ ಬರುವುದು ಅನುಮಾನವಾಗಿದೆ. ದಿನೇ ದಿನೇ ದರ ಕುಸಿಯುತ್ತಿರುವ ಪರಿಣಾಮ ರೈತರಿಂದ ಹತ್ತಿ ಖರೀದಿಸಿದ ವರ್ತಕರೂ ನಷ್ಟ ಅನುಭವಿಸುತ್ತಿದ್ದಾರೆ.
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಹತ್ತಿಗೆ ಬೆಂಬಲ ಬೆಲೆ ನಿಗದಿ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹತ್ತಿಗೆ ಬೆಂಬಲ ಬೆಲೆ ನಿಗದಿ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.