Intermediate Crop Insurance Released :-
ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಈ ಜಿಲ್ಲೆಗೆ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ಹಣ ಜಮೆಯಾಗಿದೆ. ರೈತರಿಗೆ ಹೆಕ್ಟರ್ ಗೆ ಎಷ್ಟು ಹಣ ಜಮ ಆಗಿದೆ?? ಹಾಗೂ ಯಾವ ಬೆಳೆಗೆ ವಿಮೆ ಹಣ ಜಮೆಯಾಗಿದೆ?? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ. ಈ ಲೇಖನವನ್ನು ಕೊನೆಯವರೆಗೂ ಓದಿ ತಪ್ಪದೆ ಎಲ್ಲರಿಗೂ ಶೇರ್ ಮಾಡಿ 🙏🏻🙏🏻..
ಹೊಸಪೇಟೆ(ವಿಜಯನಗರ), ಕೊಪ್ಪಳ ಹಾಗೂ ಕುಂದಗೋಳ ಈ ಊರಿನ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ಹಣ ಆಗಿದೆ..!
ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮಯಾಗಿದೆ??
ಕುಂದಗೋಳ: 2023-24 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳಿಗೆ ಮಧ್ಯಂತರ ಪರಿಹಾರ ಮಂಜೂರಾಗಿದೆ.
ಪ್ರತಿ ಹೆಕ್ಟರ್ ಗೆ ರೈತರಿಗೆ ಸಿಗುವ ಹಣ ಎಷ್ಟು??
ಕುಂದಗೋಳ ತಾಲ್ಲೂಕಿನಲ್ಲಿ ವಿಮೆಗೆ ಒಳಪಟ್ಟ 4256.14 ಹೇಕ್ಟರ್ ಮೆಣಸಿನಕಾಯಿ ಬೆಳೆಗೆ ಒಟ್ಟು ₹4 ಕೋಟಿ ₹35 ಲಕ್ಷ ಗಳ ಬೆಳೆ ವಿಮೆ ಮಧ್ಯಂತರ ಪರಿಹಾರ ಮಂಜೂರಾಗಿದ್ದು ಒಟ್ಟು 5065 ರೈತರಿಗೆ ಪ್ರತಿ ಹೇಕ್ಟರ್‌ಗೆ ₹10,237.00 ಗಳಂತೆ ಈ ಹಣ ದೊರಯಲಿದೆ.
ಈರುಳ್ಳಿ ಬೆಳೆಯ ಬೆಳೆವಿಮೆ ತುಂಬಿದ 115 ರೈತರಿಗೆ 73 ಹೇಕ್ಟರ್ ಭೂಪ್ರದೇಶಕ್ಕಾಗಿ ₹11 ಲಕ್ಷ 77 ಸಾವಿರ ಗಳಷ್ಟು ಮಧ್ಯಂತರ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುವುದು ಎಂದು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮಂಜುನಾಥ ಕರೋಶಿ ತಿಳಿಸಿದರು.
➡️👇🏻 ಕೊಪ್ಪಳ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ..
➡️ ಹೊಸಪೇಟೆ (ವಿಜಯನಗರ) ಬೆಳೆ ವಿಮೆ ಮಾಡಿಸಿದ 26,254 ಕೃಷಿಕರಿಗೆ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವಾಗಿ 719.27 ಕೋಟಿ ವಿಮಾ ಪರಿಹಾರ ಹಣ ಸಂದಾಯವಾಗಿದೆ.
➡️ ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://samrakshane.karnataka.gov.in/Premium/CheckStatusMain_aadhaar.aspx
ಈ ಮೇಲೆ ಕಾಣುವ ಮುಖಪುಟದಲ್ಲಿ ತೋರಿಸುವ ಹಾಗೆ ನಿಮ್ಮ ಪ್ರಪೋಸಲ್ ಸಂಖ್ಯೆ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ ಸೀಸನ್ ಅನ್ನೋ ಆಯ್ಕೆ ಮಾಡಿಕೊಂಡು ನಂತರ ಕೆಳಗೆ ಕಾಣುವ ಸರ್ಚ್ ಬಟನ್ ಮೇಲೆ ಒತ್ತಬೇಕು. ನಂತರ ಕಾಣುವ ಮುಖಪುಟದಲ್ಲಿ ನಿಮಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬ ಮಾಹಿತಿಯು ನಿಮಗೆ ಸಿಗುತ್ತದೆ..
ಹೊಸಪೇಟೆ (ವಿಜಯನಗರ): ಬರಗಾಲದಿಂದ ತತ್ತರಿಸಿರುವ ವಿಜಯನಗರ ಜಿಲ್ಲೆಯ ರೈತರಿಗೆ ಕೊನೆಗೂ ಒಂದು ಸಂತಸದ ಸುದ್ದಿ ಲಭಿಸಿದ್ದು, ಬೆಳೆ ವಿಮೆ ಮಾಡಿಸಿದ 26,254 ಕೃಷಿಕರಿಗೆ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವಾಗಿ 719.27 ಕೋಟಿ ವಿಮಾ ಪರಿಹಾರ ಹಣ ಸಂದಾಯವಾಗಿದೆ.
ಮುಂಗಾರು ಹಂಗಾಮಿನ ಬೆಳೆ ನಷ್ಟದ ಸಮೀಕ್ಷೆಯನ್ನು ಕಳೆದ ತಿಂಗಳು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ನಡೆಸಿದ್ದವು. ಅದರ ವರದಿಯನ್ನು ಆಧರಿಸಿ ಇದೀಗ ಮಧ್ಯಂತರ ವಿಮಾ ಪರಿಹಾರ ದೊರೆತಿದೆ. ತಾಲ್ಲೂಕುವಾರು ಮಧ್ಯಂತರ ವಿಮಾ ಪರಿಹಾರದ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ..
Release of interim crop insurance :-
ಕೊಪ್ಪಳದ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತನಿಗೆ ಆಸರೆ
ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.
ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ..
ಹರಪನಹಳ್ಳಿಯಲ್ಲಿ ಒಬ್ಬ ರೈತರಿಗೆ ಗರಿಷ್ಠ 71.48 ಲಕ್ಷದಷ್ಟು ಹಣ ಬಂದಿದ್ದರೆ, ಹೂವಿನಹಡಗಲಿಯಲ್ಲಿ ಇನ್ನೊಬ್ಬ ರೈತರಿಗೆ 31.14 ಲಕ್ಷದಷ್ಟು ಪರಿಹಾರ ದೊರೆತಿದೆ. ಹರಪನಹಳ್ಳಿಯ ಈ ರೈತ ತಮ್ಮ 49 ಎಕರೆ ಕೃಷಿ ಭೂಮಿಗೆ ವಿಮೆ ಮಾಡಿಸಿದ್ದರು.
‘ವಿಮೆ ಮಾಡಿಸುವ ವಿಚಾರದಲ್ಲಿ ರೈತರು ಹಿಂದೇಟು ಹಾಕಬಾರದು. ಬರಗಾಲ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಅದು ರೈತರ ಕೈಯನ್ನು ನಿಜವಾಗಿಯೂ ಹಿಡಿಯುತ್ತದೆ. ಅದರ ಹೊರತಾಗಿಯೂ ಬೆಳೆ ತೆನೆಕಟ್ಟುವ ಹಂತದಿಂದ ಕಟಾವು ನಂತರದ 15 ದಿನಗಳ ವರೆಗೆ ಒಟ್ಟು ಐದು ಸಂದರ್ಭಗಳಲ್ಲಿ ವಿಮೆ ಪರಿಹಾರ ಪಡೆಯುವ ಅವಕಾಶ ಇದೆ. ಮುಂಗಾರು ಹಂಗಾಮಿಗೆ ಬಂದಿರುವ ಮಧ್ಯಂತರ ಪರಿಹಾರ ಇದು, ಪೂರ್ಣ ಪ್ರಮಾಣದ ಪರಿಹಾರ ಬಂದಾಗ ಆಗಿರುವ ಬೆಳೆ ನಷ್ಟದ ಶೇ 70ರಷ್ಟು ಪರಿಹಾರ ವಿಮೆ ರೂಪದಲ್ಲಿ ರೈತರಿಗೆ ಸಿಗಲಿದೆ. ಇದು ನಿಜಕ್ಕೂ ಈ ಸಂದಿಗ್ಧ ಸ್ಥಿತಿಯಲ್ಲಿ ಉತ್ತಮ ಪರಿಹಾರವೇ ಆಗಿದೆ. ಜಿಲ್ಲೆಯಲ್ಲಿ ಬಜಾಜ್ ಅಲಯನ್ಸ್ ವಿಮಾ ಕಂಪನಿ ಕೃಷಿ ವಿಮೆ ಮಾಡುವ ಹೊಣೆ ಹೊತ್ತುಕೊಂಡಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ದಲ್ ‘
ಬೆಳೆ ವಿಮೆ ಮಾಡಿಸಿ ಪರಿಹಾರದ ಪ್ರಮಾಣ ಗಮನಿಸಿದರೆ ವಿಮಾ ಕಂತು ಹೆಚ್ಚೇನೂ ಅಲ್ಲ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು.
ಶರಣಪ್ಪ ಮುದ್ದಲ್, ಜಂಟಿ ಕೃಷಿ ನಿರ್ದೇಶಕ..
ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಈ ಜಿಲ್ಲೆಯ ರೈತರಿಗೆ ಬೆಳೆವಿಮೆ ಜಮೆಯಾಗಿದೆ:-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ಪರಿಹಾರ ಕುರಿತು ನೀಡಿದ ಮಾಹಿತಿ ಉಪಯೋಗವಿದೆ.
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ನಿಮ್ಮ ಸಾಲ ಮನ್ನಾ ಆಗಬೇಕಾದರೆ ಈ ಅರ್ಹತೆಗಳು ಕಡ್ಡಾಯ ತಪ್ಪದೆ ತಿಳಿಯಿರಿ👇🏻 https://krushivahini.com/2023/12/11/crop-loan-waiver-status-check/