Raita samparka kendra pipe and sprinkler rate increased :- ರೈತ ಸಂಪರ್ಕ ಕೇಂದ್ರಗಳಿಗೆ ಹೋದ ರೈತರಿಗೆ ಶಾಕ್ :-
ಹಾವೇರಿ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ಭಾರೀ ಸಂಕಷ್ಟವನ್ನು ರೈತ ಎದುರಿಸುತ್ತಿದ್ದಾನೆ. ಈ ಮಧ್ಯೆ ಕೃಷಿ ಉಪಕರಣಗಳಿಗೆ ಪಾವತಿಸಬೇಕಾದ ಹಣವನ್ನು ದುಪ್ಪಟ್ಟು ಮಾಡಿ ಸರ್ಕಾರ ರೈತರಿಗೆ ಶಾಕ್ ನೀಡಿದೆ.
ಹೌದು, ರೈತ ಸಂಪರ್ಕ ಕೇಂದ್ರಗಳಿಗೆ ಖರೀದಿಗೆ ಹೋದ ರೈತರು ಕೃಷಿ ಉಪಕರಣ ಬೆಲೆ ಕೇಳಿ ಅಘಾತಗೊಂಡಿದ್ದಾರೆ. ತುಂತುರು ಹಾಗೂ ಹನಿ ನೀರಾವರಿ ಉಪಕರಣಗಳ ಮೇಲಿನ ದರವನ್ನು ದುಪ್ಪಟ್ಟು ಮಾಡಿದೆ. ಕಳೆದ ಅವಧಿಯಲ್ಲಿ 1,876 ರೂ. ರಿಯಾಯಿತಿ ದರ ಪಾವತಿಸಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಸಬಹುದಿತ್ತು.
ಈಗ ಈ ಸರ್ಕಾರದ ಅವಧಿಯಲ್ಲಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಗೆ 4,667 ರೂ. ದರ ನಿಗದಿ ಮಾಡಲಾಗಿದೆ. ಏಕಾಏಕಿ ಈ ಪರಿ ದರವನ್ನು ಹೆಚ್ಚಿಸಲು ಕಾರಣ ಏನು ಎನ್ನುವುದು ಗೊತ್ತಿಲ್ಲ. ಹೀಗೆ ದರವನ್ನು ದುಪ್ಪಟ್ಟು ಮಾಡಿದರೆ ನಾವು ಹೇಗೆ ಬದುಕುವುದು ಎಂದು ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಿಗೆ ಬಂದವರು ಹಣ ಹೊಂದಿಸಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ತಿಳಿಯದಂತೆ ಸರ್ಕಾರ ಆದೇಶ ಮಾಡಿದೆ ಎಂದು ಅನ್ನದಾತರು ಸಿಟ್ಟು ಹೊರಹಾಕುತ್ತಿದ್ದಾರೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಪೈಪ್ ಹಾಗೂ ಸ್ಪ್ರಿಂಕ್ಲೆರ್ ದರ ಹೆಚ್ಚಳ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಪೈಪ್ ಹಾಗೂ ಸ್ಪ್ರಿಂಕ್ಲೆರ್ ದರ ಹೆಚ್ಚಳ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ..
ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಶಾಕ್* https://krushivahini.com/2023/12/08/raita-samparka-kendra-pipe-and-sprinkler-rate-increased/
30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಗೆ 4,667 ರೂ. ದರ ನಿಗದಿ!
ಪೈಪ್ ಹಾಗೂ ಸ್ಪ್ರಿಂಕ್ಲೆರ್ ಬೆಲೆಯಲ್ಲಿ ಭಾರಿ ಏರಿಕೆ ತಪ್ಪದೇ ತಿಳಿಯಿರಿ ಇಲ್ಲಿದೆ ಮಹತ್ವದ ಮಾಹಿತಿ