Crop insurance released to this district :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಈ ಜಿಲ್ಲೆಯಲ್ಲಿ ರೈತರಿಗೆ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಪರಿಹಾರ ಜಮೆಯಾಗಿರುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ತುಮಕೂರು: ಈ ಜಿಲ್ಲೆಗೆ ₹13 ಕೋಟಿ ಬೆಳೆ ಪರಿಹಾರ
ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಪರಿಹಾರ ನೀಡಲು ಆರಂಭ
ತುಮಕೂರು: ತೀವ್ರ ಬರದಿಂದಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆ ಒಣಗಿ ನಷ್ಟವಾಗಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಶೇ 25ರಷ್ಟು ಪರಿಹಾರ ನೀಡಲು ಜಿಲ್ಲಾ ಆಡಳಿತ ಮುಂದಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಬೆಳೆ ನಷ್ಟಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ರೈತರು ಸತತವಾಗಿ ಒತ್ತಾಯಿಸುತ್ತಲೇ ಬಂದಿದ್ದಾರೆ. ಮುಂಗಾರು ಬೆಳೆ ಹಾಳಾಗಿ ಹಲವು ತಿಂಗಳುಗಳೇ ಕಳೆದಿದ್ದರೂ ಈವರೆಗೂ ಪರಿಹಾರ ನೀಡಿಲ್ಲ. ಈಗಲೂ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಪರಿಹಾರ ನೀಡುತ್ತಿಲ್ಲ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದ ರೈತರಿಗಷ್ಟೇ ಪರಿಹಾರ ಸಿಗಲಿದೆ.
➡️ ನಿಮ್ಮ ಜಿಲ್ಲೆಯ ಇನ್ಸೂರೆನ್ಸ್(insurance) ಕಂಪನಿ ಯಾವುದು ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಗೆ ಯಾವ ಇನ್ಶೂರೆನ್ಸ್ ಕಂಪನಿ ಇರುವ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳುತ್ತೀರಿ.👇🏻
https://samrakshane.karnataka.gov.in/HomePages/frmKnowYourInsCompany.aspx
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಶೇ 50ಕ್ಕೂ ಹೆಚ್ಚು ಪ್ರಮಾಣದಲ್ಲಿ ಬೆಳೆ ಇಳುವರಿ ಕುಂಠಿತಗೊಂಡಿದೆ. ಪ್ರತಿಕೂಲ ಹವಾಮಾನವನ್ನು ಆಧರಿಸಿ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ 25ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
➡️ ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?👇🏻
ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :
https://samrakshane.karnataka.gov.in/Premium/CheckStatusMain_aadhaar.aspx
ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಬೆಳೆ ಕಟಾವಿನ ನಂತರ ಬೆಳೆಯ ಇಳುವರಿ ಮಾಹಿತಿ ಪಡೆದುಕೊಂಡು ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುತ್ತದೆ. ಈಗ ನೀಡುವ ಪರಿಹಾರದ ಮೊತ್ತವನ್ನು ಕಡಿತಮಾಡಿ ಉಳಿಕೆ ಹಣವನ್ನು ರೈತರಿಗೆ ಪಾವತಿಸಲಾಗುತ್ತದೆ. ಜಿಲ್ಲೆಯಲ್ಲಿ ಪರಿಹಾರ ಕೋರಿ 38,982 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಟ್ಟು ₹12.95 ಕೋಟಿ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಯಾವ ತಾಲ್ಲೂಕಿಗೆ ಎಷ್ಟು ಪರಿಹಾರ ಸಿಕ್ಕಿದೆ ಇಲ್ಲಿ ನೋಡಿರಿ??
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆಗೆ ವಿಮೆ ಪರಿಹಾರ ಕೋರಿ 6,364 ರೈತರು ಅರ್ಜಿ ಸಲ್ಲಿಸಿದ್ದು, ₹2.40 ಕೋಟಿ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಗುಬ್ಬಿ ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆದ 2,674 ಮಂದಿ ರೈತರಿಗೆ ₹85.65 ಲಕ್ಷ,
ಕುಣಿಗಲ್ ತಾಲ್ಲೂಕಿನಲ್ಲಿ ರಾಗಿ ಬೆಳೆಗೆ 1,162 ರೈತರು ನೋಂದಾಯಿಸಿದ್ದು, ₹20.9 ಲಕ್ಷ,
ತಿಪಟೂರು ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆ ಪರಿಹಾರಕ್ಕೆ 6,596 ಮಂದಿ ಅರ್ಜಿ ಸಲ್ಲಿಸಿದ್ದು, ₹1.60 ಕೋಟಿ, ತುಮಕೂರು ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆಗೆ ವಿಮೆ ಪರಿಹಾರ ಕೋರಿ 1,191 ರೈತರು ಅರ್ಜಿ ಸಲ್ಲಿಸಿದ್ದು, ₹32.78 ಲಕ್ಷ,
ತುರುವೇಕೆರೆ ತಾಲ್ಲೂಕಿನಲ್ಲಿ ರಾಗಿ ಬೆಳೆಗೆ 2,519 ರೈತರು ಅರ್ಜಿ ಸಲ್ಲಿಸಿದ್ದು, ₹54.14 ಲಕ್ಷ ಪರಿಹಾರ ನೀಡಲಾಗುತ್ತದೆ.
ಕೊರಟಗೆರೆ ತಾಲ್ಲೂಕಿನಲ್ಲಿ ರಾಗಿ, ಮುಸುಕಿನ ಜೋಳ ಬೆಳೆಗೆ ಪರಿಹಾರ ಕೋರಿ 6,983 ರೈತರು ಅರ್ಜಿ ಸಲ್ಲಿಸಿದ್ದು, ₹2.62 ಕೋಟಿ,
ಮಧುಗಿರಿ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆಗೆ 6,240 ಮಂದಿ ಪರಿಹಾರ ಕೋರಿದ್ದು, ₹2.25 ಕೋಟಿ,
ಪಾವಗಡ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆದ 698 ರೈತರಿಗೆ ₹56.93 ಲಕ್ಷ,
ಶಿರಾ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆಗೆ ಪರಿಹಾರ ಕೋರಿ 4,555 ರೈತರು ಅರ್ಜಿ ಸಲ್ಲಿಸಿದ್ದು, ₹1.56 ಕೋಟಿ ಪರಿಹಾರ ವಿತರಣೆ ಮಾಡಲಾಗುತ್ತದೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಜಿಲ್ಲೆಗೆ ₹13 ಕೋಟಿ ಬೆಳೆ ಪರಿಹಾರ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಜಿಲ್ಲೆಗೆ ₹13 ಕೋಟಿ ಬೆಳೆ ಪರಿಹಾರ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ ಈ ಪಟ್ಟಿಯಲ್ಲಿ ಇರುವ ರೈತರು ಇನ್ನು ಆದರೂ ಫ್ರೂಟ್ಸ್ ಐ ಡಿ ಮಾಡಿಸಿಕೊಂಡಿಲ್ಲ! ಈ ಸರ್ವೇ ನಂಬರ್ ಗಳಿಗೆ ಮಾತ್ರ ಪರಿಹಾರ ಹಣ ಬರುತ್ತದ https://krushivahini.com/2023/12/06/fid-is-mandatory-for-drought-relief/