Land records :- ಜಮೀನಿನ ದಾಖಲೆ ಸರಿಮಾಡಲು ಪಹಣಿ ಅವಶ್ಯಕ:,ಸಚಿವ ಕೃಷ್ಣ ಭೈರೇಗೌಡ..
ವಿಜಯಪುರ : ರೈತರು ಹೊಂದಿರುವ ಜಮೀನಿನ ದಾಖಲೆಗಳಲ್ಲಿನ ಲೋಪ ಸರಿಮಾಡಲು ಸರ್ವೇ ನಂಬರ್ ಗಳಲ್ಲಿರುವ ಪಹಣಿಯಲ್ಲಿ ರೈತರ ಹೆಸರುಗಳನ್ನು ಒಟ್ಟುಗೂಡಿಸಲಾಗಿದೆ. ತಾತ್ಕಾಲಿಕವಾಗಿರುವ ಈ ಸಮಸ್ಯೆಯನ್ನು ಸರ್ಕಾರವೇ ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬುಧವಾರ ನಗರದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂಬರ್ ಗಳಲ್ಲಿರುವ ರೈತರ ಹೆಸರನ್ನು ಒಟ್ಟುಗೂಡಿಸಿರುವ ಸರ್ಕಾರವೇ ಪ್ರತಿ ರೈತರ ಜಮೀನು ದಾಖಲೆಗಳನ್ನು ಎಲ್ಲ ಲೋಪಗಳನ್ನು ಸರಿಪಡಿಸಿ, ಅಮೂಲಾಗ್ರ ಸುಧಾರಣೆಯೊಂದಿಗೆ ದಾಖಲೆಗಳನ್ನು ನೀಡಲು ಮುಂದಾಗಿದೆ ಎಂದರು.
ಇದಕ್ಕಾಗಿ ಕೆಲಕಾಲ ಸಮಸ್ಯೆ ಉಂಟಾದರೂ ತಾತ್ಕಾಲಿಕವಾಗಿರುವ ಈ ಸಮಸ್ಯೆ ಪರಿಹಾರಕ್ಕೆ ರೈತರು ಸಹಕರಿಸಬೇಕು. ಭವಿಷ್ಯದಲ್ಲಿ ರೈತರ ಎಲ್ಲ ದಾಖಲೆಗಳು ನಿಖರವಾಗಿ ಸಿಗಲಿರುವ ಕಾರಣ ಬ್ಯಾಂಕ್ ವಹಿವಾಟು, ಮಾರಾಟ ಸೇರಿದಂತೆ ಎಲ್ಲದಕ್ಕೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೈಗೊಂಡಿರುವ ಕ್ರಮಕ್ಕೆ ರೈತರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಳ್ಳಿಗಳನ್ನು ಪೋಡಿಮುಕ್ತ ಗ್ರಾಮಗಳಾಗಿ ರೂಪಿಸುವುದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮಂದಗತಿಯಲ್ಲಿರುವ ದರಕಾಸ್ತು ಪೋಡಿ ಮಾಡುವ ಕೆಲಸಕ್ಕೆ ವೇಗ ನೀಡಲಾಗುತ್ತದೆ.
ರಾಜ್ಯದಲ್ಲಿ ಕೃಷಿಯೇತರ ಚಟುವಿಕೆಗೆ ಬದಲಾವಣೆ ಆಗದ ಕೃಷಿ ಭೂಮಿಯಲ್ಲೇ ಗುಂಟಾ ಪ್ಲಾಟ್ ಮಾಡಿ ನಿವೇಶನ ಮಾರಾಟ ಮಾಡಲಾಗಿದೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಕಂದಾಯವು ಇಲ್ಲದೇ ಸೌಲಭ್ಯ ಕಲ್ಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಒಂದು ಬಾರಿ ರಾಜ್ಯದಾದ್ಯಂತ ಏಕ ಕಾಲದಲ್ಲೇ ಅಕ್ರಮ ಸಕ್ರಮ ಹೆಸರಿನಲ್ಲಿ ಪರಿಹಾರ ಕಂಡುಕೊಳ್ಳಲು 2015 ರಲ್ಲಿದ್ದ ನಮ್ಮ ಸರ್ಕಾರ ಮುಂದಾಗಿತ್ತು ಎಂದರು.
ನಮ್ಮ ಸರ್ಕಾರದ ನಡೆಗೆ ಕೇಂದ್ರದ ಹಾಲಿ ಸಚಿವರಾಗಿರುವ ರಾಜೀವ ಚಂದ್ರಶೇಖರ ಹೈಕೋರ್ಟ್ ಮೊರೆ ಹೋದರು. ನ್ಯಾಯಾಲಯ ನಮ್ಮ ಪರವಾಗಿ ಆದೇಶ ನೀಡಿದ್ದರಿಂದ ಕಾರ್ಯಾನುಷ್ಠಾನಕ್ಕೆ ಮುಂದಾದ ಹಂತದಲ್ಲೇ ರಾಜೀವ ಅವರು ಸುಪ್ರೀಂ ಕೋರ್ಟ್‍ನಲ್ಲಿ ತಕರಾರು ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಭವಿಷ್ಯದಲ್ಲಿ ಅಕ್ರಮವಾಗಿ ಗುಂಟಾ ಪ್ಲಾಟ್ ನಿವೇಶನ ಅವಕಾಶ ನೀಡದಂತೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಿದೆ ಎಂದರು.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/BV4GiFXeLXJKfXFJFZSiGj
ಜಮೀನಿನ ದಾಖಲೆ ಸರಿಮಾಡಲು ಪಹಣಿ ಅವಶ್ಯಕ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಜಮೀನಿನ ದಾಖಲೆ ಸರಿಮಾಡಲು ಪಹಣಿ ಅವಶ್ಯಕ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ