drought management fodder kit distribution :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು ಈ ಲೇಖನದಲ್ಲಿ ಪರದಾಡುತ್ತಿರುವ ರೈತರಿಗೆ ಬೇವಿನ ಕಿಟ್ಟನ್ನು ವಿಸ್ತರಿಸಲಾಗುತ್ತಿದೆ. ಬರ ನಿರ್ವಹಣೆಗೆ ಮೆವಿನ ಕಿಟ್ ವಿತರಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

ಬರ ನಿರ್ವಹಣೆ; ಮೇವಿನ ಕಿಟ್ ವಿತರಣೆ!

ಜಿಲ್ಲೆಯಲ್ಲಿ 28,153 ಮೇವಿನ ಬೀಜದ ಮಿನಿ ಕಿಟ್ ವಿತರಣೆ

ಹುಬ್ಬಳ್ಳಿ: ಮೇವಿನ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಪಶು ಸಂಗೋಪನಾ ಇಲಾಖೆ ರಾಜ್ಯದಾದ್ಯಂತ ಮೇವಿನ ಬೀಜದ ಮಿನಿ ಕಿಟ್ ವಿತರಿಸುತ್ತಿದೆ.

ರೈತರೇ ಬೆಳೆದು ರೈತರಿಗೆ ನೆರವಾಗಲಿ ಎಂಬ ಸದುದ್ದೇಶದಿಂದ ಇಲಾಖೆ ಒಂದು ವಿನೂತನ ಯೋಜನೆ ಹಾಕಿಕೊಂಡಿದ್ದು, ಮಿನಿ ಕಿಟ್ ವಿತರಣೆ ಕಾರ್ಯ ಜಿಲ್ಲೆಯಲ್ಲಿ ಸಾಗಿದೆ.

ಮೆಕ್ಕೆಜೋಳ, ಮೇವಿನ ಜೋಳ, ಸಜ್ಜೆ ಮತ್ತು ಮೇವಿನ ಅಲಸಂಧಿ ಬೀಜದ ಕಿಟ್ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 28,153 ಮೇವಿನ ಬೀಜದ ಮಿನಿ ಕಿಟ್ ಈಗಾಗಲೇ ವಿತರಿಸಲಾಗಿದೆ. ಜಿಲ್ಲೆಯಲ್ಲಿ 3,050 ಮೇವಿನ ಬೀಜಗಳ ಮಿನಿ ಕಿಟ್‌ಗಳ ಹೆಚ್ಚುವರಿ ಬೇಡಿಕೆ ಇದೆ.

ಒಂದೊಂದು ತಳಿ ಕಿಟ್‌ಗೆ ಒಂದೊಂದು ದರ ನಿಗದಿ ಮಾಡಿದ್ದು, 1 ಕೆಜಿ, 3 ಕೆಜಿ, 5 ಕೆಜಿ ಹೀಗೆ ಕೆಜಿ ಲೆಕ್ಕದಲ್ಲಿ ಮಿನಿ ಕಿಟ್ ವಿತರಿಸಲಾಗುತ್ತಿದ್ದು, ಬರಗಾಲದಿಂದ ಈಗಾಗಲೇ ರೈತರು ಕಂಗಾಲಾಗಿದ್ದು ಇದರಿಂದ ಜಾನುವಾರುಗಳ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದೆ.

ಈ ಮಿನಿ ಕಿಟ್‌ನಲ್ಲಿ ನಾಲ್ಕು ತಳಿಯ ಬೀಜ ಇರುತ್ತವೆ. ಅದರಲ್ಲಿ ಮೆಕ್ಕೆಜೋಳ ಮೇವು, ಅಲಸಂಧೆ ಮೇವು, ಸಜ್ಜೆ, ಜೋಳದ ಮೇವಿನ ಕಿಟ್ ನೀಡಲಾಗುತ್ತಿದೆ. 10 ಗುಂಟೆ ಜಾಗದಲ್ಲಿ ಬಿತ್ತನೆ ಮಾಡಬಹುದು. ಹಸಿ ಮೇವು ಬೇಕು ಎನ್ನುವ ರೈತರು 30 ರಿಂದ 40 ದಿನ ಮೇವನ್ನು ಕಟಾವು ಮಾಡಬಹುದು. ಒಣ ಮೇವು ಬೇಕೆನ್ನುವ ರೈತರು 90 ದಿನ ನಂತರ ಕಟಾವು ಮಾಡಬಹುದು ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ರವಿ ಸಾಲಿಗೌಡರ ತಿಳಿಸಿದರು.

ಈಗಾಗಲೇ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಕಲಘಟಗಿ, ಅಣ್ಣಿಗೇರಿ, ಧಾರವಾಡ ಮತ್ತು ಅಳ್ಳಾವರ ತಾಲ್ಲೂಕಿನಲ್ಲಿ ಮಿನಿ ಕಿಟ್ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

‘ಕಿರೆಸೂರು, ಹೆಬಸೂರು ಭಾಗಗಳಲ್ಲಿ ನೀರಿನ ಕೊರತೆಯಿಂದ ಸರ್ಕಾರ ಮಿನಿ ಕಿಟ್ ವಿತರಿಸುತ್ತಿದ್ದರೂ ಯಾರು ತೆಗೆದುಕೊಳ್ಳುತ್ತಿಲ್ಲ. ಕಿಟ್ ಕೊಟ್ಟರು ನಮ್ಮ ಭಾಗಕ್ಕೆ ಉಪಯೋಗವಾಗುವುದಿಲ್ಲ. ಕಾರಣ ನೀರಿನ ಸೌಲಭ್ಯ ಕಲ್ಪಿಸಿದರೆ ಮೇವಿನ ಬೀಜ ಬಿತ್ತನೆ ಮಾಡಿ ನಮ್ಮ ಜಾನುವಾರುಗಳಿಗೂ ಮೇವು ಬೆಳೆಯಬಹುದು’ ಎಂದು ರೈತ ಮುಖಂಡ ಸುಭಾಷ ಅವ್ವಣವರ ತಿಳಿಸಿದರು.

ರೈತರು ಮೇವಿನ ಬೀಜದ ಮಿನಿ ಕಿಟ್ ಪಡೆಯಲು ಹತ್ತಿರದ ಪಶು ಸಂಗೋಪನಾ ಇಲಾಖೆ ಕಚೇರಿ ಭೇಟಿ ನೀಡಬಹುದು.

ಡಾ.ರವಿ ಸಾಲಿಗೌಡರ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರು.

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಬರ ನಿರ್ವಹಣೆ ಮೇವಿನ ಕಿಟ್ ವಿತರಣೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಬರ ನಿರ್ವಹಣೆ ಮೇವಿನ ಕಿಟ್ ವಿತರಣೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ

Leave a Reply

Your email address will not be published. Required fields are marked *